Students from the Government Higher Primary School, Savaleshwara, achieved remarkable success at the Madana Hipparaga cluster-level sports meet by securing first place in three categories and qualifying for the taluk-level competition.
ಆಳಂದ: ಮಾದನ ಹಿಪ್ಪರಗಾ ವಲಯ ಮಟ್ಟದಲ್ಲಿ ನಡೆದ ಶಾಲಾ ಕ್ರೀಡಾಕೂಟದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಸಾವಳೇಶ್ವರ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಗುಂಪು ಪಂದ್ಯಾಟದಲ್ಲಿ ಬಾಲಕರ ಥ್ರೋಬಾಲ್‍ನಲ್ಲಿ ಪ್ರಥಮ ಸ್ಥಾನ, ಬಾಲಕಿಯರ ಥ್ರೋಬಾಲ್‍ನಲ್ಲಿ ಪ್ರಥಮ ಸ್ಥಾನ ಹಾಗೂ ಬಾಲಕಿಯರ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಶಾಲೆಯ ಮುಖ್ಯಶಿಕ್ಷಕ ದಯಾನಂದ ಮೈಂದರಗಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಮಹಾದೇವ ಗುಣಕಿ, ಶಿಕ್ಷಕರಾದ ಬಸಮ್ಮ ಸ್ವಾಮಿ, ಶಿವಲೀಲಾ, ಜಯಶ್ರೀ, ರಾಜಶೇಖರ, ಶರಣಬಸಪ್ಪ, ಪರಮೇಶ್ವರ ಹಾಗೂ ಶ್ರೀಕಾಂತ ಶ್ಲಾಘಿಸಿದರು. ಜತೆಗೆ ಸಾಧಕ ವಿದ್ಯಾರ್ಥಿಗಳನ್ನು ಪೋಷಕರು, ಗ್ರಾಮಸ್ಥರು ಅಭಿನಂದಿಸಿ ಮತ್ತಷ್ಟು ಉನ್ನತ ಮಟ್ಟದ ಸಾಧನೆ ಮಾಡುವಂತೆ ಶುಭಹಾರೈಸಿದರು.
----------