ಕೊಪ್ಪಳ: ಇಂದಿನ ದಿನಗಳಲ್ಲಿ ಸ್ವಯಂ ರಕ್ಷಣೆಗಾಗಿ ಕರಾಟೆ ಅತೀ ಅಗತ್ಯವಾಗಿ ಎಲ್ಲರೂ ಕಲಿಯಬೇಕಾದ ಕ್ರೀಡೆಯಾಗಿದೆ. ಕರಾಟೆ ಎಲ್ಲ ಶಾಲೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಲಿಸುವಂತಾಗಬೇಕು ಎಂದು ಕೊಪ್ಪಳ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ಈ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಅರ್ಥಪೂರ್ಣ. ವಿವಿಧ ಶಾಲೆಯ ಮಕ್ಕಳು ಇದರಲ್ಲಿ ಭಾಗವಹಿಸಿ ಪ್ರದರ್ಶನ ಮಾಡಿ ಬೆಲ್ಟ್ ಪಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಎಪಿಜೆ ಅಬ್ದುಲ್ ಕಲಾಂ ಸಿಬಿಎಸ್ಸಿ ಶಾಲೆ ಲಿಂಗದಳ್ಳಿ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಳಕಲ್ ಮತ್ತು ಹಿಟ್ನಾಳ ಶಾಲೆಯ ೨೫೦ ವಿದ್ಯಾರ್ಥಿನಿಯರು ಭಾಗವಹಿಸಿ ೨೦೨೫-೨೬ನೇ ಸಾಲಿನಲ್ಲಿ ಪಡೆದ ತರಬೇತಿಯ ಪ್ರದರ್ಶನ ಮಾಡಿದರು. ಇದೇ ಸಂದರ್ಭದಲ್ಲಿ ಬೆಲ್ಟ್ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.ಪ್ರಾಸ್ತಾವಿಕವಾಗಿ ನ್ಯಾಷನಲ್ ಸ್ಟೀರಿಟ್ ಕರಾಟೆ ಅಕಾಡಮಿ ಮುಖ್ಯಸ್ಥ ರಾಜಾಬಕ್ಷಿ ಎಚ್.ವಿ. ನೆರವೇರಿಸಿದರು. ಅಧ್ಯಕ್ಷತೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಅಜ್ಮೀರ್ ಅಲಿ ವಹಿಸಿದ್ದರು.ವೇದಿಕೆಯ ಮೇಲೆ ನ್ಯಾಷನಲ್ ಶುಟೋಕಾನ್ ಕರಾಟೆ ಅಸೋಶಿಯೇಷನ್ ಕರ್ನಾಟಕದ ಅಧ್ಯಕ್ಷ ಬಿ.ಬಾಷಾಸಾಹೇಬ, ಹಿರಿಯ ಹೋರಾಟಗಾರ ನಜೀರ್ ಮೂಲಿಮನಿ, ಮಾಜಿ ನಗರಸಭಾ ಸದಸ್ಯ ಮಾನ್ವಿ ಪಾಷಾ, ತರಬೇತುದಾರ ದೀಪಾ ಮತ್ತು ರೋಹಿಣಿ ಉಪಸ್ತಿತರಿದ್ದರು. ದಾವಲಸಾಬ ಬೆಟಗೇರಿ ನಿರೂಪಿಸಿದರು. ದೇವಪ್ಪ ಕಲ್ಲನ್ನವರ ವಂದಿಸಿದರು.