ತಾತಯ್ಯ ಕನ್ನಡ ಪತ್ರಿಕಾರಂಗದ ಭೀಷ್ಮ

KannadaprabhaNewsNetwork |  
Published : Sep 06, 2024, 01:02 AM IST
7 | Kannada Prabha

ಸಾರಾಂಶ

ತಾತಯ್ಯ ಉದ್ಯಾನದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಪತ್ರಿಕೋದ್ಯಮದ ಮೂಲಕ ದೇಶಪ್ರೇಮ ಮೂಡಿಸಿ ತಾತಯ್ಯ ಪತ್ರಿಕಾರಂಗದ ಭೀಷ್ಮರಾದರು ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.

ಕನ್ನಡ ಪತ್ರಿಕೆಗಳ ಪಿತಾಮಹ ಮಗ್ಗೆ ವೆಂಕಟಕೃಷ್ಣಯ್ಯ ತಾತಯ್ಯ ಅವರ 180ನೇ ಜಯಂತಿ ಅಂಗವಾಗಿ ಮೈಸೂರು ಅನಾಥಾಲಯ ಹಳೇ ವಿದ್ಯಾರ್ಥಿಗಳ ಸಂಘ ವತಿಯಿಂದ ನಗರ ಬಸ್ ನಿಲ್ದಾಣದ ಮುಂಭಾಗದ ತಾತಯ್ಯ ಉದ್ಯಾನದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಮೈಸೂರು ಸಂಸ್ಥಾನದ ಆಡಳಿತಕ್ಕೆ ಮಹಾರಾಜರೊಂದಿಗೆ ಮಾರ್ಗದರ್ಶಕರಾಗಿ ಮಹತ್ವದ ಪಾತ್ರ ವಹಿಸಿದ್ದವರು ತಾತಯ್ಯ ಅವರು, ಪತ್ರಿಕಾ ರಂಗದ ಪ್ರೋತ್ಸಾಹ ಮತ್ತು ಪತ್ರಕರ್ತರ ಕರ್ತವ್ಯ ನಿರ್ವಹಣೆ, ಪತ್ರಿಕೆ ಮುದ್ರಣದಿಂದ ಓದುಗರ ಮನೆಯಂಗಳದವರೆಗೂ ಪತ್ರಿಕೆಗಳ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿ ಹಾಕಿದರು ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಯುವಕರಿಗೆ ಪತ್ರಿಕೆಗಳ ಮೂಲಕ ದೇಶಪ್ರೇಮ ಜಾಗೃತಿ ಮೂಡಿಸುತ್ತಿದ್ದರು, ಸಮಾಜದಲ್ಲಿ ಅಸ್ಪೃಶ್ಯತೆ, ಜೀತ ಪದ್ಧತಿ ವಿರುದ್ಧ ಜನಾಂದೋಲನ ಹೋರಾಟ ಮಾಡಿದವರು ತಾತಯ್ಯನವರು ಎಂದು ಅವರು ಸ್ಮರಿಸಿದರು.

ಪಾಲಿಕೆ ವಲಯ ಆಯುಕ್ತೆ ಪ್ರಭಾ, ಸಮಾಜ ಸೇವಕ ಕೆ. ‌ರಘುರಾಂ ವಾಜಪೇಯಿ, ಅನಾಥಾಲಯ ಕಾರ್ಯದರ್ಶಿ ಸುಂದರೇಶನ್, ಹೇಮಲತಾ, ಅಜಯ್ ಶಾಸ್ತ್ರಿ, ನಂಜುಂಡಿ, ರವಿಚಂದ್ರ, ನವೀನ್, ರಂಗನಾಥ್, ಶಾಂತರಾಜು, ಕೃಷ್ಣಪ್ಪ, ತೇಜಸ್ವನಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ