ಕನ್ನಡಪ್ರಭ ವಾರ್ತೆ ಹರಿಹರ
ಸಂಕ್ರಾಂತಿ ಹಬ್ಬದ ದಿನ ದಾವಣಗೆರೆ, ಅಕ್ಕ ಪಕ್ಕದ ಜಿಲ್ಲೆಗಳ ಸಹಸ್ರಾರು ಜನತೆ ಹೊಳೆ ಊಟಕ್ಕಾಗಿ ನಗರದ ಅಯ್ಯಪ್ಪ ದೇವಸ್ಥಾನದ ಬಳಿ ಇರುವ ತುಂಗಭದ್ರಾ ನದಿ ಬಳಿ ಸೇರುವ ಹಿನ್ನೆಲೆ ಭೂಮಿ ಸೋಶಿಯಲ್ ಡೆವಲಪ್‌ಮೆಂಟ್ ಫೌಂಡೇಷನ್ ನದಿ ಸ್ವಚ್ಛತ ಹಿನ್ನೆಲೆ ಹಮ್ಮಿಕೊಂಡ ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಿ ಮಾತನಾಡಿದರು.
ಈ ಹಿಂದೆ ಪತ್ರಕರ್ತ ರಾಘವೇಂದ್ರ ನೇತೃತ್ವದಲ್ಲಿ ಸ್ಥಾಪಿಸಲಾಗಿದ್ದ ನನ್ನ ಊರು ನನ್ನ ಹೊಣೆ ತಂಡವು, ನವಂಬರ್ ತಿಂಗಳಿಂದ ಪ್ರತಿ ಭಾನುವಾರ ನದಿ, ದೇವಾಲಯಗಳ ಸ್ವಚ್ಛತೆಯನ್ನು ಎರಡು ಮೂರು ತಿಂಗಳ ಕಾಲ ನಡೆಸಯತ್ತಾ ಬಂದಿತ್ತು. ಈಗ ಅವರಿಲ್ಲ. ಆದರೆ ಅವರದೇ ತಂಡ ಭೂಮಿ ಹೆಸರಲ್ಲಿ ಭೂ ತಾಯಿಯ ಋಣ ತೀರಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಎಂದರು.ಸೋಶಿಯಲ್ ಡೆವಲಪ್‌ಮೆಂಟ್ ಫೌಂಡೇಷನ್ ಅಧ್ಯಕ್ಷ ಟಿ.ಎನ್.ರಾಘವೇಂದ್ರ, ಎಸ್ ವೆಂಕಟೇಶ್ ಶೆಟ್ಟಿ, ಮಂಜುನಾಥ್ ಬಿ ಪೈಲ್ವಾನ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಅಧ್ಯಕ್ಷ ಜಿ.ಬಿ. ಹಾಲೇಶ್ ಗೌಡರು, ಬಿಎಸ್ ಡಿಎಫ್ ನ ಅಂಜು ಸುರೇಶ್, ರವಿಕುಮಾರ್, ಗಂಗಾಧರ್, ಪ್ರವೀಣ್ ಮಜ್ಗಿ, ಪ್ರಶಾಂತ್, ಅಂಬುಜಾ ಬಾಯಿ. ಸಾಕ್ಷಿ ಶಿಂದೆ, ಶ್ವೇತ, ಎಮ್.ಎಲ್. ಪ್ರವೀಣ್ ಸವಿತಾ, ಭಾಗ್ಯ, ರವಿ, ಕರಿಬಸಪ್ಪ ಕಂಚಿಕೇರಿ, ವಿರೇಶ್ ಬಡಿಗೇರ್, ಕಿರಿಯ ಅರೋಗ್ಯ ನಿರೀಕ್ಷಕ ಬಸವರಾಜ್ ಎಚ್.ಎಂ., ಹರಿಹರ ನಗರಸಭೆ ಪೌರ ಕಾರ್ಮಿಕರು ಇತರರು ಭಾಗವಹಿಸಿದ್ದರು.