ಗ್ರಾಮಾಂತರಕ್ಕೆ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಮಾದರಿ

KannadaprabhaNewsNetwork | Published : Nov 4, 2024 12:15 AM

ಸಾರಾಂಶ

36 ವರ್ಷಗಳ ಕಾಲ ಬದುಕಿದ್ದ ಅವರ ಹೆಸರು ಮತ್ತು ಕೀರ್ತಿ ಸೂರ್ಯ ಮತ್ತು ಚಂದ್ರ ಇರುವವರೆಗೂ ಶಾಶ್ವತ

---ಕನ್ನಡಪ್ರಭ ವಾರ್ತೆ ಕೆ.ಆರ್. ನಗರಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ದೇಶ ಪ್ರೇಮ ಮತ್ತು ದಿಟ್ಟತನ ಜಗತ್ತಿಗೆ ಮಾದರಿ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಶಾಸಕ ಡಿ. ರವಿಶಂಕರ್ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 36 ವರ್ಷಗಳ ಕಾಲ ಬದುಕಿದ್ದ ಅವರ ಹೆಸರು ಮತ್ತು ಕೀರ್ತಿ ಸೂರ್ಯ ಮತ್ತು ಚಂದ್ರ ಇರುವವರೆಗೂ ಶಾಶ್ವತ ಎಂದರು.ಅವರ ಹೋರಾಟದ ಮನೋಭಾವನೆ ಮತ್ತು ಛಲವನ್ನು ನಾವೆಲ್ಲರೂ ಮೈಗೂಡಿಸಿಕೊಂಡು ದೇಶ ಪ್ರೇಮ ಬೆಳೆಸಿಕೊಂಡರೆ ಸಮಾನತೆ ಮತ್ತು ಶಕ್ತಿಯುತ ನಾಡು ಕಟ್ಟಲು ಸಾಧ್ಯವಾಗಲಿದ್ದು, ಇದನ್ನು ಅರಿತು ಎಲ್ಲರೂ ಮುನ್ನಡೆಯಬೇಕು ಎಂದು ಕರೆ ನೀಡಿದರು.ಪ್ರತಿಯೊಬ್ಬ ಭಾರತೀಯನು ನೆಲ, ಜಲ ಮತ್ತು ಭಾಷೆಯ ವಿಚಾರ ಬಂದಾಗ ಒಂದಾಗಿ ಕೆಲಸ ಮಾಡಬೇಕೆಂದರು. ರಾಯಣ್ಣನವರ ನೂತನ ಪ್ರತಿಮೆಯನ್ನು ವೇದಿಕೆ ಕಾಮಗಾರಿ ಮುಗಿಸಿ ಸಂಕ್ರಾಂತಿ ನಂತರ ಅನಾವರಣ ಮಾಡುವುದಾಗಿ ಪ್ರಕಟಿಸಿದರು. ಇಂತಹ ಮಹಾನ್ ಕ್ರಾಂತಿ ವೀರನ ಪುತ್ಥಳಿಯನ್ನು ಗ್ರಾಮದಲ್ಲಿ ಸ್ಥಾಪಿಸಿದ ನಂತರ ಎಲ್ಲರೂ ಅವರನ್ನು ಗೌರವಿಸಿ ನಿತ್ಯ ಪೂಜಿಸಬೇಕು ಎಂದು ಸಲಹೆ ನೀಡಿದರು. ಈ ವೇಳೆ ಕಂಚಿನ ಪುತ್ಥಳಿ ಮಾಡಿಸಿಕೊಡಲಿರುವ ನ್ಯೂ ಲೈಪ್ ಫೌಂಡೇಷನ್ ಅಧ್ಯಕ್ಷ ಮತ್ತು ಪ್ರಸಿದ್ಧ ಎಚ್.ಆರ್. ಸೆಲ್ಯೂಷನ್ ಎಂಡಿ ಶಿವಮಾಧು ಅವರನ್ನು ಅಭಿನಂದಿಸಿದರು.ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ಚಂದಗಾಲು ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಕುಂಟೇಗೌಡ, ಉಪಾಧ್ಯಕ್ಷ ರಾಘವೇಂದ್ರ, ಸದಸ್ಯರಾದ ಮಣಿಯಮ್ಮ, ಸುರೇಶ್, ಪ್ರಕಾಶ್, ಮಲ್ಲೇಶ್, ವೆಂಕಟರಾಮು, ಮಾಜಿ ಸದಸ್ಯರಾದ ರವಿ, ಕೃಷ್ಣ, ಗ್ರಾಮದ ಮುಖಂಡರಾದ ಸಿ.ಟಿ. ಶಿವರಾಜು, ಸಿ.ಬಿ. ಶ್ರೀನಿವಾಸ್, ಕೃಷ್ಣೇಗೌಡ, ರಾಜೇಗೌಡ, ಸಿ.ಪಿ. ಆನಂದ್, ಸಿ.ಇ. ಉಮೇಶ್, ಮಾದಪ್ಪ, ಶಂಕರ್, ಸತೀಶ್, ಕರೀಗೌಡ, ಮಹದೇವ್ ಇದ್ದರು.

Share this article