ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ೫ ಲಕ್ಷ ಅನುದಾನದಲ್ಲಿ ತಾಲೂಕಿನ ದುಂಡಶಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತರ ಸಮುದಾಯ ಭವನ ನಿರ್ಮಾಣ ಕಾರ್ಯದ ಭೂಮಿ ಪೂಜಾ ಸಮಾರಂಭ ನೆರವೇರಿತು.
ಶಿಗ್ಗಾಂವಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ೫ ಲಕ್ಷ ಅನುದಾನದಲ್ಲಿ ತಾಲೂಕಿನ ದುಂಡಶಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತರ ಸಮುದಾಯ ಭವನ ನಿರ್ಮಾಣ ಕಾರ್ಯದ ಭೂಮಿ ಪೂಜಾ ಸಮಾರಂಭ ನೆರವೇರಿತು.ಈ ಅನುದಾನದಿಂದ ಗ್ರಾಮದಲ್ಲಿ ರೈತರ ಸಭೆ, ತರಬೇತಿ ಕಾರ್ಯಕ್ರಮಗಳು, ಸಹಕಾರ ಸಂಘದ ಕಾರ್ಯಾಚರಣೆಗಳು ಹಾಗೂ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಸೌಕರ್ಯಯುಕ್ತ ಸಭಾಭವನ ನಿರ್ಮಾಣಗೊಳ್ಳಲಿದೆ. ಈ ಯೋಜನೆ ಗ್ರಾಮೀಣ ಪ್ರದೇಶದ ಕೃಷಿಕರಿಗೆ ಸಹಕಾರ ಸಂಘದ ಮೂಲಕ ಅಭಿವೃದ್ಧಿ ಚಟುವಟಿಕೆಗಳನ್ನು ವಿಸ್ತರಿಸಲು ಪ್ರಮುಖ ವೇದಿಕೆಯಾಗಲಿದೆ.
ಭೂಮಿ ಪೂಜೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ ಹುಣಶ್ಯಾಳರವರು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಶಿವಾನಂದ ಮ್ಯಾಗೇರಿಯವರು ವಿಶ್ವದ ಪ್ರಸಿದ್ಧ ಟಾಯಿಮ್ ೧೦೦ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೊಟ್ಟಮೊದಲ ಕೇಂದ್ರ ಸಚಿವರಾಗಿ ಗುರುತಿಸಿಕೊಂಡಿರುವ ಪ್ರಹ್ಲಾದ್ ಜೋಶಿಯವರು ನಮ್ಮೆಲ್ಲರ ಹೆಮ್ಮೆ. ಅವರು ಸೌರಶಕ್ತಿ ಉತ್ಪಾದನೆಯಲ್ಲಿ ಭಾರತವನ್ನು ವಿಶ್ವದ ಮುಂದಿರಿಸಿ, ಅಮೆರಿಕವನ್ನೇ ಹಿಮ್ಮೆಟ್ಟಿಸಿದ ನಾಯಕರು. ಇಂತಹ ದೀರ್ಘ ದೃಷ್ಟಿಯುಳ್ಳ ಜನಪರ ನಾಯಕತ್ವವೇ ಗ್ರಾಮಾಭಿವೃದ್ಧಿಗೆ ಪ್ರೇರಣೆ ನೀಡುತ್ತಿದೆ ಎಂದರು. ರೈತರ ಪ್ರಗತಿಗಾಗಿ ಹಾಗೂ ಗ್ರಾಮೀಣ ಸಹಕಾರ ಚಟುವಟಿಕೆಗಳ ವಿಸ್ತರಣೆಗೆ ಪ್ರಹ್ಲಾದ್ ಜೋಶಿಯವರಂತಹ ನಾಯಕರು ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ ಎಂದರು.ಬಿಜೆಪಿ ಶಿಗ್ಗಾಂವಿ ಮಂಡಲದ ಅಧ್ಯಕ್ಷರಾದ ವಿಶ್ವನಾಥ ಹರವಿ ಹಾಗೂ ಕೆ.ಎಂ.ಎಫ್. ನಿರ್ದೇಶಕರಾದ ತಿಪ್ಪಣ್ಣ ಸಾತಣ್ಣನವರ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಎಸ್‌ಎಸ್ ಉಪಾಧ್ಯಕ್ಷರಾದ ಬಸಯ್ಯ ಸಜ್ಜೆದಮಠ, ಯುವ ಮುಖಂಡರಾದ ನರಹರಿ ಕಟ್ಟಿ, ನಿರ್ದೇಕರಾದ ಪ್ರಕಾಶ ಪಾಸರ , ನೀಲಪ್ಪ ಕೊಳೂರ, ಮಹಾಬಳೇಶ್ವರ ಯಮಕನಮರಡಿ, ಪ್ರಕಾಶ ಕಲ್ಲಪ್ಪನವರ, ಸುರೇಶಗೌಡ್ರ ಪಾಟೀಲ, ಜೀವನ ಲಮಾಣಿ, ರಾಮಚಂದ್ರ ತಳವಾರ ಸಂತೋಷ ಲಾಬಗೊಂಡ, ಬಾಹುಬಲಿ ಅಕ್ಕಿ, ಸಚಿನ ಮಡಿವಾಳರ, ಕಾಶಿನಾಥ ಕಳ್ಳಿಮನಿ ಸಹಕಾರ ಸಂಘದ ನಿರ್ದೇಶಕರು, ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ರೈತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.