₹36 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿಪೂಜೆ

KannadaprabhaNewsNetwork | Published : Aug 21, 2024 12:38 AM

ಸಾರಾಂಶ

ತಾಲೂಕಿನ ಮತ್ತೋಡು ಹೋಬಳಿಯ ವಿವಿಧ ಗ್ರಾಮದಲ್ಲಿ ಮಂಗಳವಾರ ಶಾಸಕ ಬಿಜಿ. ಗೋವಿಂದಪ್ಪ ಗಣಿಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ₹36 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನ ಮತ್ತೋಡು ಹೋಬಳಿಯ ವಿವಿಧ ಗ್ರಾಮದಲ್ಲಿ ಮಂಗಳವಾರ ಶಾಸಕ ಬಿಜಿ. ಗೋವಿಂದಪ್ಪ ಗಣಿಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ₹36 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಕೆ.ಕೆ.ಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಔಷಧಿಗಾರರ ವಸತಿ ಗೃಹ ನಿರ್ಮಾಣಕ್ಕೆ ₹6.75 ಕೋಟಿ, ಕಿಟ್ಟದಾಳ್-ಎ ಗ್ರಾಮದ ನೂತನ ಆರೋಗ್ಯ ಉಪಕೇಂದ್ರ ನಿರ್ಮಾಣಕ್ಕೆ ₹1 ಕೋಟಿ, ಕಿಟ್ಟದಾಳ್- ಬಿ ಗ್ರಾಮದ ನೂತನ ಆರೋಗ್ಯ ಉಪಕೇಂದ್ರ ನಿರ್ಮಾಣಕ್ಕೆ ₹1 ಕೋ, ಟಿ ಕಂಚೀಪುರ ಗ್ರಾಮದ ನೂತನ ಆರೋಗ್ಯ ಉಪಕೇಂದ್ರ ನಿರ್ಮಾಣಕ್ಕೆ ₹1 ಕೋಟಿ, ಕಿಟ್ಟದಾಳ್ ಗ್ರಾಮದಿಂದ ಕಾನುಬೇನಹಳ್ಳಿ ಮಾರ್ಗವಾಗಿ ಡಿ.ಆರ್. ವಜ್ರ ಮುಖ್ಯರಸ್ತೆಗೆ ಸಿ.ಸಿ.ರಸ್ತೆ ನಿರ್ಮಾಣಕ್ಕೆ ₹7.80 ಕೋಟಿ, ಕಿಟ್ಟದಾಳ್ ಗ್ರಾಮದಲ್ಲಿ ಸಿ.ಸಿ.ರಸ್ತೆ ಹಾಗೂ ಸೋಲಾರ್ ದೀಪ ನಿರ್ಮಾಣಕ್ಕೆ ₹2.92 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಇನ್ನೂ ಕಂಚೀಪುರ ಗ್ರಾಮದಲ್ಲಿ ಸಿ.ಸಿ.ರಸ್ತೆ ಹಾಗೂ ಸೋಲಾರ್ ದೀಪ ನಿರ್ಮಾಣಕ್ಕೆ ₹3.12 ಕೋಟಿ, ಕಂಚೀಪುರ ಹೊಸಗೊಲ್ಲರಹಟ್ಟಿ ಎನ್.ಎನ್.ಕಟ್ಟೆ, ಎನ್.ಎನ್.ಕಟ್ಟೆ ಮಧ್ಯದ ತಾಂಡ ಮೇಗಳಹಟ್ಟಿಯಿಂದ ಶ್ರೀರಾಂಪುರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಸಿ.ಸಿ.ರಸ್ತೆ ನಿರ್ಮಾಣಕ್ಕೆ ₹8.20 ಕೋಟಿ, ನಾಗನಾಯಕನಕಟ್ಟೆ ಗ್ರಾಮದಲ್ಲಿ ಸಿ.ಸಿ.ರಸ್ತೆ ಹಾಗೂ ಸೋಲಾರ್ ದೀಪ ನಿರ್ಮಾಣಕ್ಕೆ 3.70 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ವಾಣಿಶ್ರೀ, ಉಪಾಧ್ಯಕ್ಷ ಪರಮೇಶ್, ಜಿಲ್ಲಾ ಆರೋಗ್ಯ ಅಧಿಕಾರಿ ರೇಣುಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ರಾಘವೇಂದ್ರ ಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ರಾಜಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಕಾಶ್, ಸದಸ್ಯರಾದ ಪ್ರಸನ್ನಕುಮಾರ್, ಸುರೇಶ್, ಶ್ರೀಮತಿ ಜಯ್ಯಮ್ಮ, ಮಾರಪ್ಪ, ಶ್ರೀಮತಿ ಲಕ್ಷ್ಮಿ, ರಮೇಶ್, ಮಾಜಿ ಅಧ್ಯಕ್ಷ ರಾಜ ನಾಯ್ಕ್, ಚಂದ್ರಪ್ಪ, ಮುಖಂಡರಾದ ಬಾಲೇನಹಳ್ಳಿ ರುದ್ರಪ್ಪ, ಸುಬ್ಬಣ್ಣ, ಚಂದ್ರಶೇಖರ್, ಸುರೇಶ್, ಕುಮಾರ್, ದುರ್ಗೇಶ್, ಗೋಪೇಶ್, ರಾಜೇಂದ್ರ, ಸ್ವಾಮಿ, ತಿಪ್ಪೇಶ್, ವರದರಾಜ್, ರಮೇಶ್ ಗೌಡ, ಗೌಡರು ಮಂಜಣ್ಣ, ರಾಜಣ್ಣ, ಕಗ್ಗಲಕಟ್ಟೆ ರಾಜಣ್ಣ, ರವಿ, ಧರಣೇಶ್, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Share this article