ಲಕ್ಕೇನಹಳ್ಳಿ ವಿಎಸ್‍ಎಸ್‍ಎನ್ ಸಂಘದ ಅಧ್ಯಕ್ಷ ಭೃಂಗೀಶ್

KannadaprabhaNewsNetwork |  
Published : Nov 07, 2026, 01:30 AM IST
ಪೋಟೋ 1 : ಸೋಲೂರು ಹೋಬಳಿಯ ಲಕ್ಕೇನಹಳ್ಳಿ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾದ ಕೆ.ಪಿ.ಭೃಂಗೀಶ್ ಅವರನ್ನು ಮುಖಂಡರು ಹಾಗೂ ನಿರ್ದೇಶಕರು ಅಭಿನಂದಿಸಿ ಶುಭಕೋರಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಸೋಲೂರು ಹೋಬಳಿಯ ಲಕ್ಕೇನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ.ಪಿ.ಭೃಂಗೀಶ್ ಅವರು 8 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗರಾಜು ಘೋಷಿಸಿದರು

ದಾಬಸ್‍ಪೇಟೆ: ಸೋಲೂರು ಹೋಬಳಿಯ ಲಕ್ಕೇನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ.ಪಿ.ಭೃಂಗೀಶ್ ಅವರು 8 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗರಾಜು ಘೋಷಿಸಿದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಬಸವರಾಜು ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಕೆ.ಪಿ.ಭೃಂಗೀಶ್ ಹಾಗೂ ಶಶಿಕಲಾಗಂಗರಾಜು ಮತ್ತು ಚನ್ನಗಂಗಯ್ಯ ಸೇರಿ ಮೂವರು ನಾಮಪತ್ರ ಸಲ್ಲಿಸಿದ್ದರು. ಚನ್ನಗಂಗಯ್ಯ ನಾಮಪತ್ರ ವಾಪಸ್ಸು ಪಡೆದ ಹಿನ್ನೆಲೆಯಲ್ಲಿ ಅಂತಿಮವಾಗಿ ಕೆ.ಪಿ.ಭೃಂಗೀಶ್ ಹಾಗೂ ಶಶಿಕಲಾಗಂಗರಾಜು ಅಂತಿಮ ಕಣದಲ್ಲಿದ್ದು, ಕೆ.ಪಿ.ಭೃಂಗೀಶ್ ಅವರು 8 ಮತಗಳನ್ನು ಪಡೆದು ಜಯಶೀಲರಾದರೆ ಪ್ರತಿಸ್ಪರ್ಧಿ ಶಶಿಕಲಾಗಂಗರಾಜು 5 ಮತಗಳನ್ನು ಪಡೆದು ಪರಾಭವಗೊಂಡರು.

ನೂತನ ಅಧ್ಯಕ್ಷ ಕೆ.ಪಿ.ಭೃಂಗೀಶ್ ಮಾತನಾಡಿ, ಸಹಕಾರ ಸಂಘದ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಸರ್ವ ಸದಸ್ಯರಿಗೂ, ಮುಖಂಡರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ನಾನು ಸಹ ಹಳ್ಳಿಯವನು ಆಗಿದ್ದು, ಪ್ರತಿನಿತ್ಯ ರೈತರ ಜೊತೆ ಒಡನಾಟವಿದೆ. ಅದಲ್ಲದೆ ಬಿಜೆಪಿ ಪಕ್ಷದ ರೈತಮೋರ್ಚಾ ಜಿಲ್ಲಾಧ್ಯಕ್ಷನಾಗಿರುವುದರಿಂದ ರೈತರ ಸಂಕಷ್ಟಗಳನ್ನು ಬಹಳ ಹತ್ತಿರದಿಂದ ಕಂಡಿದ್ದು, ಸರ್ಕಾರದಿಂದ ಸಹಕಾರ ಸಂಘಕ್ಕೆ ಬರುವ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ನನ್ನ ಅಧಿಕಾರಾವಧಿಯಲ್ಲಿ ಸಂಘವನ್ನು ಲಾಭದತ್ತ ಕೊಂಡೊಯ್ಯುತ್ತೇನೆ ಎಂದರು.ನೂತನ ಅಧ್ಯಕ್ಷರನ್ನು ಉಪಾಧ್ಯಕ್ಷ ಲಕ್ಷ್ಮೀನರಸಿಂಹಯ್ಯ, ನಿರ್ದೇಶಕರಾದ ಬಸವರಾಜು, ಯೋಗಣ್ಣ, ಮಧು, ಆಂಜಿನಪ್ಪ, ಚನ್ನಲಕ್ಷ್ಮಮ್ಮ, ರೇವಣ್ಣ, ಸುಮಾ, ವೆಂಕಟೇಶ್, ಸಂಘದ ಸಿಇಒ ಜಗದೀಶ್ ಸಿಬ್ಬಂದಿ ವರ್ಗದವರಾದ ನಗದು ಗುಮಾಸ್ತ ಆನಂದ್, ಕಂಪ್ಯೂಟರ್ ಆಪರೇಟರ್ ಪೂಜಾಶ್ರೀ ಸಹಾಯಕ ಗುರುಮೂರ್ತಿ ತಾಪಂ ಮಾಜಿ ಸದಸ್ಯ ಶಂಕರಪ್ಪ, ಎನ್ ಪಿಎ ಸದಸ್ಯ ಹನುಮಂತರಾಜು, ಮಾಜಿ ಸದಸ್ಯ ರಂಗಸ್ವಾಮಿ, ಗ್ರಾಪಂ ಮಾಜಿ ಸದಸ್ಯರಾದ ನಂದೀಶ್, ಸುರೇಶ್ ರಾವ್, ರಮೇಶ್, ಮುಖಂಡರಾದ ಜಯದೇವಯ್ಯ, ಮಂಜುನಾಥ್, ಮಹದೇವಯ್ಯ, ಕಿರಣ್ ಕುಮಾರ್, ಹನುಮಯ್ಯ, ಪ್ರಶಾಂತ್, ಜಯರಾಮು, ಗಂಗಾಧರ್, ಹರೀಶ್ ಇತರರಿದ್ದರು.

ಪೋಟೋ 1 : ಸೋಲೂರು ಹೋಬಳಿಯ ಲಕ್ಕೇನಹಳ್ಳಿ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾದ ಕೆ.ಪಿ.ಭೃಂಗೀಶ್ ಅವರನ್ನು ಮುಖಂಡರು ಹಾಗೂ ನಿರ್ದೇಶಕರು ಅಭಿನಂದಿಸಿ ಶುಭಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ