ಎರಡು ತಿಂಗಳಿಗೊಮ್ಮೆ ಉದ್ಯೋಗ ಮೇಳ ಆಯೋಜನೆ

KannadaprabhaNewsNetwork |  
Published : Mar 01, 2025, 01:01 AM IST
28ಕೆಬಿಪಿಟಿ.1.ಬಂಗಾರಪೇಟೆ ಪಟ್ಟಣದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಯುವಕರಿಗೆ ಸ್ಥಳದಲ್ಲೆ ನೇಮಕಾತಿ ಪತ್ರ ವಿತರಿಸಿದ ಶಾಸಕ ನಾರಾಯಣಸ್ವಾಮಿ. | Kannada Prabha

ಸಾರಾಂಶ

ಕೆಜಿಎಫ್ ಬಂಗಾರಪೇಟೆ ನಡುವೆ ಇರುವ ದಾಸರಹೊಸಹಳ್ಳಿ ಬಳಿ ೭೦೦ ಎಕರೆ ಪ್ರದೇಶದಲ್ಲಿ ಹತ್ತಾರು ಕೈಗಾರಿಕೆಗಳನ್ನು ಸ್ಥಾಪಿಸಿ ಕನಿಷ್ಟ ಪಕ್ಷ ೨೫ ಸಾವಿರ ಜನರಿಗೆ ಉದ್ಯೋಗ ನೀಡಲಾಗುವುದು,ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುದ್ಯೋಗಿಗಳ ಮೇಲಿರುವ ಕಾಳಜಿಯಿಂದ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕ್ಷೇತ್ರದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ಇನ್ನು ಎರಡು ತಿಂಗಳಿಗೊಮ್ಮೆ ಉದ್ಯೋಗ ಮೇಳವನ್ನು ಆಯೋಜಿಸಿ ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು ಯತ್ನಿಸುವುದಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ ನೀಡಿದರು.ಪಟ್ಟಣದ ಎಸ್.ಎನ್. ರೆಸಾರ್ಟ್‌ನಲ್ಲಿ ಎಸ್.ಎನ್.ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉನ್ನತ ವ್ಯಾಸಂಗ ಮಾಡಿದ್ದರೂ ಸಹ ಪ್ರತಿಭಾವಂತರಿಗೆ ಉದ್ಯೋಗ ಸಿಗದೆ ಅಲೆದಾಡುತ್ತಿದ್ದಾರೆ. ಅಂತಹ ಯುವಕ ಯುವತಿಯರಿಗೆ ಉದ್ಯೋಗ ಒದಗಿಸಲು ಪ್ರತಿಷ್ಠಿತ ೨೮ ಕಂಪನಿಗಳು ಮೇಳದಲ್ಲಿ ಭಾಗವಹಿಸಿವೆ. ಮುಂದಿನ ದಿನಗಳಲ್ಲಿ ಈ ಮೇಳ ನಿರಂತರವಾಗಿ ಸಾಗಲಿದೆ ಎಂದರು.ಕೈಗಾರಿಕಾ ಪ್ರದೇಶ ಸ್ಥಾಪನೆ

ಇದಲ್ಲದೆ ಕೆಜಿಎಫ್ ಬಂಗಾರಪೇಟೆ ನಡುವೆ ಇರುವ ದಾಸರಹೊಸಹಳ್ಳಿ ಬಳಿ ೭೦೦ ಎಕರೆ ಪ್ರದೇಶದಲ್ಲಿ ಹತ್ತಾರು ಕೈಗಾರಿಕೆಗಳನ್ನು ಸ್ಥಾಪಿಸಿ ಕನಿಷ್ಟ ಪಕ್ಷ ೨೫ ಸಾವಿರ ಜನರಿಗೆ ಉದ್ಯೋಗ ನೀಡಲಾಗುವುದು,ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುದ್ಯೋಗಿಗಳ ಮೇಲಿರುವ ಕಾಳಜಿಯಿಂದ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದರಲ್ಲದೆ ಉದ್ಯೋಗಿ ಆಕಾಂಕ್ಷಿತರು ಇಂತಹ ಅವಕಾಶವನ್ನು ಬಳಸಿಕೊಂಡು ಸ್ವಾಭಿಮಾನಿ ಜೀವನ ನಡೆಸಬೇಕೆಂದು ಸಲಹೆ ನೀಡಿದರು.ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ ಆಂಧ್ರ, ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಬಂಗಾರಪೇಟೆ ಪಟ್ಟಣದಲ್ಲಿ ಉದ್ಯೋಗ ಮೇಳ ಪ್ರಥಮ ಬಾರಿಗೆ ಹಮ್ಮಿಕೊಂಡಿರುವುದಕ್ಕೆ ಶಾಸಕ ಕಾಳಜಿಯನ್ನು ಶ್ಲಾಘಿಸಿದರು. ಉದ್ಯೋಗ ಮೇಳ ಪಟ್ಟಣಕ್ಕೆ ಸೀಮಿತವಾಗದೆ ಹೋಬಳಿ ಕೇಂದ್ರಗಳಲ್ಲಿಯೂ ಆಯೋಜನೆ ಮಾಡಿದರೆ ಅನೇಕರಿಗೆ ಅನುಕೂಲವಾಗಲಿದೆ ಎಂದರು.

ಬೃಹತ್‌ ಉದ್ಯೋಗ ಮೇಳ ನಡೆಸಿ

ಬಂಗಾರಪೇಟೆ, ಕೆಜಿಎಫ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಷ್ಟಿತ ಕೈಗಾರಿಕೆಗಳು ಬರುತ್ತಿರುವುದರಿಂದ ನಿತ್ಯ ಉದ್ಯೋಗಕ್ಕಾಗಿ ಯುವಕರು ಬೆಂಗಳೂರಿಗೆ ಅಲೆಯುವುದು ತಪ್ಪಲಿದೆ ಎಂದರಲ್ಲದೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತವನ್ನು ಹಾಗೂ ಸಂಸದರನ್ನೂ ಸೇರಿಸಿಕೊಂಡು ಬೃಹತ್ ಉದ್ಯೋಗ ಮೇಳೆ ಮಾಡಬೇಕು ಎಂದರು.

ಇದಕ್ಕೆ ವ್ಯಾಪಕ ಪ್ರಚಾರ ಅಗತ್ಯವಿದೆ,ಇಂದಿನ ಮೇಳಕ್ಕೆ ನಿರೀಕ್ಷಿತ ಉದ್ಯೋಗ ಆಕಾಂಕ್ಷಿಕಗಳು ಭಾಗವಹಿಸಿಲ್ಲ ಇದಕ್ಕೆ ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ ಇದು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದರಲ್ಲದೆ ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ನೂರಾರು ಕಾರ್ಖಾನೆಗಳು ತಲೆ ಎತ್ತಿ ಕಾರ್ಖಾನೆಗಳ ಜಿಲ್ಲೆಯಾಗಿ ಬದಲಾಗಲಿದೆ ಎಂದರು.ಈ ಮೇಳದಲ್ಲಿ ಪುರಸಭೆ ಅಧ್ಯಕ್ಷ ಗೋವಿಂದ, ಬಾಷ್ ಕಂಪನಿಯ ಕಲೀಲ್, ಮೋಹನ್, ಪುಷ್ಪ, ಮಹೇಶ್, ನಾರಾಯಣಸ್ವಾಮಿ ಇತರರು ಇದ್ದರು.

.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''