)
ಮಾಲೂರು: ದ್ವಿಚಕ್ರ ವಾಹನ ಹಾಗೂ ಅಪರಿಚಿತ ವಾಹನದ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಅಬ್ಬೇನಹಳ್ಳಿ ಗ್ರಾಮದ ಬಳಿ ನಡೆದಿದೆ.ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ತಾಲೂಕಿನ ಬಪ್ಪನಹಳ್ಳಿ ಗ್ರಾಮದ ಮುರುಳಿ 34 ಎಂದು ಗುರುತಿಸಲಾಗಿದೆ. ಭಾವನಹಳ್ಳಿ ಗ್ರಾಮದ ಕಡೆಯಿಂದ ಮಾಲೂರು ನಗರದ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಮುರುಳಿಯ ದ್ವಿಚಕ್ರ ವಾಹನಕ್ಕೆ ಯಾವುದೋ ಅಪರಿಚಿತ ವಾಹನವೊಂದರ ಚಾಲಕ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ನಗರದ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.