ಪತ್ರಕರ್ತ ಗುರುರಾಜ ಕುಲಕರ್ಣಿಗೆ ರಾಜ್ಯ ಪ್ರಶಸ್ತಿ ಪ್ರದಾನ

KannadaprabhaNewsNetwork | Published : Feb 4, 2024 1:35 AM

ಸಾರಾಂಶ

ದಾವಣಗೆರೆಯಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ತಗಡೂರು ಕಮಲಮ್ಮ ವೀರೇಶಗೌಡ ಪ್ರಶಸ್ತಿ ಪುರಸ್ಕೃತರು ಹಾಗೂ ಜಿಲ್ಲೆಯ ಹಿರಿಯ ಪತ್ರಕರ್ತ ಗುರುರಾಜ ಕುಲಕರ್ಣಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯದ ಬೆಣ್ಣೆನಗರಿ ಎಂದೇ ಪ್ರಖ್ಯಾತವಾದ ದಾವಣಗೆರೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದಿಂದ ಶನಿವಾರ ಜರುಗಿದ 38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ಬೀದರ್ ತಾಲೂಕಿನ ಸಿಂದೋಲ ಗ್ರಾಮದವರಾದ ಗುರುರಾಜ ಕುಲಕರ್ಣಿ ಬೀದರ್‌ನ ಪ್ರಾದೇಶಿಕ ಪತ್ರಿಕೆಯಾದ ಉತ್ತರ ಕರ್ನಾಟಕದಲ್ಲಿ ಮಾಧ್ಯಮ ವೃತ್ತಿ ಆರಂಭಿಸಿದರು. ನಂತರ ಮೈಸೂರಿನಲ್ಲಿರುವ ಮೈಸೂರು ಮಿತ್ರ ಹಾಗೂ ಆಂದೋಲನ ಪತ್ರಿಕೆಯಲ್ಲಿ ವರದಿಗಾರರಾಗಿ, ನಂತರ 1999ರ ಡಿಸೆಂಬರ್ ನಿಂದ 2013ರವರೆಗೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರಾಗಿ ಬೆಂಗಳೂರಿನಲ್ಲಿ, ಮತ್ತು 2012 ರಿಂದ 2013 ರ ವರೆಗೆ ಕಲಬುರಗಿಯಲ್ಲಿ ಸೇವೆ ಸಲ್ಲಿಸಿದ ಅವರು 2013ರಿಂದ ಇಂದಿನವರೆಗೆ ಬೀದರ್‌ನಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಸುವರ್ಣ ಟಿವಿ ಮುಖ್ಯಸ್ಥ ಅಜಿತ್‌ ಹನುಮಕ್ಕನವರ, ವಿಜಯ ಕರ್ನಾಟಕ ಸಂಪಾದಕ ಸೂರ್ಯಾನ ಚನ್ನಂಗಿಹಳ್ಳಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಕಾರ್ಯದರ್ಶಿ ಜೆ.ಸಿ.ಲೋಕೇಶ ಸೇರಿದಂತೆ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಡಿಕೆ ಗಣಪತಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಉಪಾಧ್ಯಕ್ಷ ನಾಗಶೆಟ್ಟಿ ಧರಂಪೂರ, ಸಂಘದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸದಸ್ಯ ದೀಪಕ ಮನ್ನಳ್ಳಿ, ಗೋಪಿಚಂದ ತಾಂದಳೆ, ಮಹಾರುದ್ರ ಡಾಕುಳಗೆ, ಸಂತೋಷ ಚಟ್ಜಿ, ಶಿವು ಮುಕ್ತೆದಾರ, ಉದಯ ಮೂಳೆ, ಮಾರ್ಥಂಡ ಜೋಶಿ ಸೇರಿದಂತೆ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share this article