ಬೀದರ್ ಲೋಕಸಭಾ ಕ್ಷೇತ್ರ: ಶೇ.65.13 ಮತದಾನ

KannadaprabhaNewsNetwork | Published : May 8, 2024 1:07 AM

ಸಾರಾಂಶ

ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಭಾರಿ ಬಿರುಸಿನ ಮತದಾನ ಪ್ರಕ್ರಿಯೆ ನಡೆದಿದ್ದರೂ ಪ್ರಾಥಮಿಕ ವರದಿಗಳನ್ವಯ ಮತದಾನ ಪ್ರಮಾಣದಲ್ಲಿ ಅಂತಹ ಏರಿಕೆಯನ್ನೇನೂ ಕಂಡಿಲ್ಲವಾದರೂ ಕಳೆದ 2019ರ ಚುನಾವಣೆಯಲ್ಲಿ ಶೇ. 62.76ರಷ್ಟು ಮತದಾ ಹಾಗೂ ಈ ಬಾರಿಯ ಶೇ. 65.13 ಮತದಾನವನ್ನು ಹೋಲಿಸಿದರೆ ಶೇ. 3ರಷ್ಟ್ರು ಏರಿಕೆಯಾಗಿರುವುದು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮಹತ್ವ ಪಡೆಯುತ್ತದೆ ಎಂಬುವದೇನೋ ಸತ್ಯ.

ಕನ್ನಡಪ್ರಭ ವಾರ್ತೆ ಬೀದರ್

ಬೀದರ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಗೆ ಮತದಾನ ಬೆಳಗ್ಗೆಯಿಂದ ಬಿರುಸಿನಿಂದ ನಡೆದಿದ್ದು, ಬೆ.7ರಿಂದ ಸಂ.5ರ ವೇಳೆಗೆ ಶೇ. 60.02ರಷ್ಟು ಮತದಾನ ದಾಖಲಾಗಿದ್ದರೆ ಹಲವೆಡೆ ಮತದಾರರು ಕೊನೆ ಘಳಿಗೆ ಮತಗಟ್ಟೆಗೆ ಬಂದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ವಿಳಂಬವಾದ ಮತದಾನ ರಾತ್ರಿ 8ರವರೆಗೆ ನಡೆದಿದೆ. ಅಂತಿಮ ಅಂಕಿ ಅಂಶಗಳನ್ನು ಮಂಗಳವಾರ ತಡ ರಾತ್ರಿಯವರೆಗೆ ನಿರೀಕ್ಷಿಸಿದ್ದು ಶೇ. 65.13ರಷ್ಟು ಮತದಾನ ದಾಖಲಾಗಿರುವುದು ವರದಿಯಾಗಿದೆ.

ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಭಾರಿ ಬಿರುಸಿನ ಮತದಾನ ಪ್ರಕ್ರಿಯೆ ನಡೆದಿದ್ದರೂ ಪ್ರಾಥಮಿಕ ವರದಿಗಳನ್ವಯ ಮತದಾನ ಪ್ರಮಾಣದಲ್ಲಿ ಅಂತಹ ಏರಿಕೆಯನ್ನೇನೂ ಕಂಡಿಲ್ಲವಾದರೂ ಕಳೆದ 2019ರ ಚುನಾವಣೆಯಲ್ಲಿ ಶೇ. 62.76ರಷ್ಟು ಮತದಾ ಹಾಗೂ ಈ ಬಾರಿಯ ಶೇ. 65.13 ಮತದಾನವನ್ನು ಹೋಲಿಸಿದರೆ ಶೇ. 3ರಷ್ಟ್ರು ಏರಿಕೆಯಾಗಿರುವುದು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮಹತ್ವ ಪಡೆಯುತ್ತದೆ ಎಂಬುವದೇನೋ ಸತ್ಯ.

ಬೀದರ್‌ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಹಾಗೂ ಕಲಬುರಗಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳೊಂದಿಗೆ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವ ಬೀದರ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಇನ್ನೂ ಸ್ಪಷ್ಟ ಅಂಕಿ ಅಂಶಗಳು ಬಾಕಿ ಇರುವಂತೆ ಕ್ಷೇತ್ರದಾದ್ಯಂತ ಶೇ. 65.13ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿ ಬುಧವಾರ ಸ್ಪಷ್ಟ ಅಂಕಿ ಅಂಶಗಳು ದೊರಕಲಿವೆ.

ಬೆಳಿಗ್ಗೆ ಆರಂಭದಲ್ಲಿ ಕೊಂಚ ಬಿರುಸಾಗಿದ್ದ ಮತದಾನ ಪ್ರಕ್ರಿಯೆ ಬಿಸಿಲೇರುತ್ತಿದ್ದಂತೆ ನೀರಸವಾಗಿ 4ರ ನಂತರ ಮತ್ತೇ ಬಿರುಸು ಕಂಡುಕೊಂಡಿದ್ದು ಕಳೆದ ಬಾರಿಯ ಮತದಾನದ ದಾಖಲೆಯನ್ನು ಮುರಿದು ಶೇ. 3ರಿಂದ 4ರಷ್ಟು ಮತದಾನ ಹೆಚ್ಚಳವಾಗಿರುವ ಸಾಧ್ಯತೆಯಿದೆ.

ಪ್ರಾಥಮಿಕ ವರದಿಯಂತೆ ಅಂಕಿ ಅಂಶಗಳು :

ಭಾಲ್ಕಿ ವಿಧಾನಸಭಾ ಕ್ಷೇತ್ರ ಮತದಾನದಲ್ಲಿ ಭಾರಿ ಏರಿಕೆ ಕಂಡಿದ್ದು ಶೇ. 79.07 ಮತದಾನ ದಾಖಲಿಸಿದ್ದರೆ ಆಳಂದ ಕ್ಷೇತ್ರ ಅತೀ ಕಡಿಮೆ ಅಂದರೆ ಶೇ. 58.5, ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಶೇ. 68.16, ಔರಾದ್ ಶೇ. 66.9, ಹುಮನಾಬಾದ್ ಶೇ. 66.27, ಬೀದರ್ ಶೇ. 64.9, ಬಸವಕಲ್ಯಾಣ ಶೇ. 63.51 ಹಾಗೂ ಚಿಂಚೋಳಿಯಲ್ಲಿ ಶೇ. 63.28 ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.

---

Share this article