ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರದೀಪ ಗುಂಟಿ ಅವರ ಮಾರ್ಗದರ್ಶನದಲ್ಲಿ ಜ. 2023ರಿಂದ 27 ಜುಲೈ 2026ರ ವರೆಗೆ ನಡೆಸಲಾದ ನಿರಂತರ ದಾಳಿ ಹಾಗೂ ತನಿಖೆಗಳ ಫಲವಾಗಿ ಮಾದಕದ್ರವ್ಯ ಜಾಲಕ್ಕೆ ದೊಡ್ಡ ಮಟ್ಟದ ತಡೆ ಬಿದ್ದಿದೆ.
ಈ ಮೂರು ಮುಕ್ಕಾಲು ವರ್ಷಗಳ ಅವಧಿಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 145 ಅಕ್ರಮ ಮಾದಕದ್ರವ್ಯ ಪ್ರಕರಣಗಳನ್ನು ದಾಖಲಿಸಿಕೊಳ್ಳ ಲಾಗಿದ್ದು, ಜಾಲದಲ್ಲಿ ಭಾಗಿಯಾಗಿದ್ದ 202 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.ಕೋಟಿ ಮೌಲ್ಯದ ಮಾದಕ ವಸ್ತು ವಶ: ಕಾರ್ಯಾಚರಣೆಯ ವೇಳೆ ಪೊಲೀಸರು ಒಟ್ಟು 28,92,45,989 (ಸುಮಾರು ₹28.92 ಕೋಟಿ ರುಪಾಯಿ) ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಮುದ್ದೆಮಾಲಿನಲ್ಲಿ 3,524.647 ಕೆಜಿ ಗಾಂಜಾ, 66,955 ನಿಷೇಧಿತ ಗುಳಿಗೆಗಳು, 1,991 ಕೆಮ್ಮಿನ ಸಿರಪ್ ಬಾಟಲಿಗಳು, 366 ಗ್ರಾಂ ಕೊಕೇನ್, 499 ಗ್ರಾಂ ಎಂಡಿ ಮೆಥಾಂ ಫಿಟಮೈನ್, 6.75 ಗ್ರಾಂ ಎಂಡಿಎಂಎ ಹಾಗೂ 5 ಎಂಡಿಎಂಎ ಮಾತ್ರೆಗಳು ಸೇರಿವೆ.
ಕೇವಲ ಅಪರಾಧಗಳ ತಡೆಗಟ್ಟುವಿಕೆ ಮಾತ್ರವಲ್ಲದೆ, ಯುವಜನತೆ ಮತ್ತು ಸಾರ್ವಜನಿಕರನ್ನು ಮಾದಕ ವ್ಯಸನದಿಂದ ದೂರವಿಡಲು ಜಾಗೃತಿ ಕಾರ್ಯಕ್ರಮ ಗಳಿಗೂ ಒತ್ತು ನೀಡಲಾಗಿದೆ. 2024ರಿಂದ 2026ರ ಅವಧಿಯಲ್ಲಿ ಸಾವಿರಾರು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರಲ್ಲಿ ಭಾಗವಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದ್ದು, ಎನ್‌ಸಿಸಿಒಆರ್‌ಡಿ (NCORD) ಸಭೆಗಳ ಮೂಲಕ ಪೊಲೀಸ್ ಇಲಾಖೆಯು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.
ವರ್ಷವಾರಿ ಪ್ರಕರಣಗಳ ಸಾರಾಂಶ: