ಕನ್ನಡಪ್ರಭ ವಾರ್ತೆ ಕೋಲಾರ
ಮಾಜಿ ಸಹಕಾರ ಸಚಿವ ರಾಜಣ್ಣನವರು ನವೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂದಿರುವುದು ಅವರ ವೈಯುಕ್ತಿ ಅಭಿಪ್ರಾಯವಾಗಿದೆ. ಇದಕ್ಕೆ ನಾನು ಯಾವೂದೇ ರೀತಿ ಪ್ರತಿಕ್ರಿಯಿಸುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಒಗ್ಗಟ್ಟಾಗಿದ್ದೇವೆ. ಮುಂಬರಲಿರುವ ಸ್ಥಳೀಯ ಸಂಸ್ಥೆಗಳ ಹಾಗೂ ಪಂಚಾಯಿತಿ ಚುನಾವಣೆಯನ್ನು ಎದುರಿಸಲು ಸಿದ್ದರಾಗಿದ್ದೇವೆ. ನಮ್ಮ ಪಕ್ಷವು ನುಡಿದಂತೆ ನಡೆಯುವ ಮೂಲಕ ಚುನಾವಣೆಗೆ ಮುನ್ನ ನೀಡಿದ್ದಪ್ರಶ್ನೆಯೊಂದಕ್ಕೆ ಮುಖ್ಯ ಮಂತ್ರಿಗಳ ಬದಲಾವಣೆ ಬಗ್ಗೆ ಹೈ ಕಮಾಂಡ್ ಅಂತಿಮ ನಿರ್ಧಾರವಾಗಲಿದೆ. ಈಗ ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗಲಿದೆ. ಜಿಲ್ಲೆಯ ೬ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು ಎಲ್ಲಾ ಶಾಸಕರು ಸಚಿವ ಸ್ಥಾನಕ್ಕೆ ಆರ್ಹರಾಗಿದ್ದಾರೆ. ೀ ಬಗ್ಗೆ ಹೈಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಪ್ರಸ್ತವನೆ ಕೆ.ಪಿ.ಸಿ.ಸಿ. ಮುಂದೆ ಇಲ್ಲ ಎಂದು ಸ್ವಷ್ಟ ಪಡೆಸಿದರು,
ಸ್ಥಳೀಯರಿಗೆ ಜಿಲ್ಲಾ ಉಸ್ತುವಾರಿ ನೀಡಲಿಸಚಿವ ಸಂಪುಟ ಪುನರ್ ರಚನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಸ್ಥಳೀಯರಿಗೆ ನೀಡ ಬೇಕೆಂಬುವುದು ಎಲ್ಲಾರ ಒತ್ತಾಸೆಯಾಗಿದೆ. ಸಚಿವ ಸ್ಥಾನಕ್ಕೆ ನಾನು ಸಹ ಆಶಾ ಭಾವನೆ ಹೊಂದಿದ್ದೇನೆ. ಈ ಬಗ್ಗೆ ಎಲ್ಲವನ್ನು ಪಕ್ಷದ ಹೈ ಕಮಾಂಡ್ ತೀರ್ಮಾನಿಸಲಿದೆ. ಅವರ ತೀರ್ಮಾನಕ್ಕೆ ನಾವೆಲ್ಲಾ ಬದ್ದರಾಗಿದ್ದೇವೆ. ಜಿಲ್ಲೆಯಲ್ಲಿ ಯಾರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಕಳೆದ ಎರಡೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಎಲ್ಲಾ ಕ್ಷೇತ್ರದಲ್ಲೂ ಅಗಿದೆ. ಅದರೂ ಇನ್ನು ಹಲವಾರು ಅಭಿವೃದ್ದಿ ಕಾರ್ಯಕ್ರಮಗಳಿಗೆ ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡುವುದು ಅವಶ್ಯವಿದೆ ಎಂದರು
ಕೆ.ಎಂ.ಎಫ್ ಗೆ ಜಿಲ್ಲಾ ಪ್ರತಿನಿಧಿಯಾಗಿ ಶಾಸಕ ಕೆ.ವೈ. ನಂಜೇಗೌಡರನ್ನು ಕಳುಹಿಸಲು ಜಿಲ್ಲಾ ಹಾಲು ಒಕ್ಕೂಟದ ಎಲ್ಲಾ ನಿರ್ದೇಶಕರು ಒಮ್ಮತದ ತೀರ್ಮಾನದಂತೆ ಶಿಫಾರಸ್ಸು ಮಾಡಲಾಗಿದೆ. ನಾನು ಸಹ ಆಕಾಂಕ್ಷಿಯಾಗಿದ್ದು ಎಲ್ಲಾ ನಾಯಕರಲ್ಲೂ ಮನವಿ ಮಾಡಿದ್ದೆ ಎಂದರು. ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲಜಿಲ್ಲೆಯಲ್ಲಿ ಯಾವ ಗುಂಪುಗಾರಿಕೆಯೂ ಕಾಂಗ್ರೇಸ್ ಪಕ್ಷದಲ್ಲಿ ಇಲ್ಲ ಅದು ಬಿಜೆಪಿಯಷ್ಟು ಯಾವ ಪಕ್ಷದಲ್ಲಿ ಇಲ್ಲ ಕಾಂಗ್ರೇಸ್ ಪಕ್ಷದಲ್ಲಿ ಏನೇ ಭಿನ್ನಭಿಪ್ರಾಯಗಳು ವೈಯುಕ್ತ ಅದರೆ ಪಕ್ಷದ ವಿಚಾರವಾಗಿ ನಾವೇಲ್ಲಾ ಸಂಘಟಿತರಾಗಿ ಕೈ ಜೋಡಿಸುತ್ತೇವೆ ಎಂಬುವುದಕ್ಕೆ ರಾಜ್ಯದಲ್ಲಿ ೧೩೬ ಸ್ಥಾನ ಪಡೆದಿದ್ದು ಜಿಲ್ಲೆಯಲ್ಲಿ ೪ ಸ್ಥಾನ ಪಡೆದಿರುವುದೆ ಸಾಕ್ಷಿಯಾಗಿದೆ. ಎಂದು ತಿಳಿಸಿದರು, ರಾಜ್ಯ ಕಾಂಗ್ರೇಸ್ ಪಕ್ಷ ವಕ್ತಾರ ದಳಸನೂರು ಗೋಪಾಲ್ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಮಾಜಿ ಅಧ್ಯಕ್ಷ ಕೆ.ಚಂದ್ರರೆಡ್ಡಿ, ನಗರ ಬ್ಲಾಕ್ ಕಾಂಗ್ರೇಸ್ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಬಾಬು, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಜಯದೇವ್, ಹಿಂದುಳಿದ ಘಟಕದ ಅಧ್ಯಕ್ಷ ಮಧುಸೂಧನ್, ಜಿಲ್ಲಾ ಕಾರ್ಯದರ್ಶಿ ವೆಂಕಟಪತಪ್ಪ ಉಪಸ್ಥಿತರಿದ್ದರು.