ಬೈಕ್‌ ಡಿಕ್ಕಿ- ಓರ್ವ ಸಾವು

KannadaprabhaNewsNetwork |  
Published : Nov 07, 2023, 01:31 AM IST

ಸಾರಾಂಶ

ಬೈಕ್‌ ಡಿಕ್ಕಿ- ಓರ್ವ ಸಾವು

ಚಿಕ್ಕಮಗಳೂರು: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವರು ಮೃತಪಟ್ಟಿರುವ ಘಟನೆ ತಾಲೂಕಿನ ಹರಿಹರದಹಳ್ಳಿ ಗ್ರಾಮದ ಬಳಿ ಭಾನುವಾರ ರಾತ್ರಿ ನಡೆದಿದೆ.ಹರಿಹರದಹಳ್ಳಿ ಗ್ರಾಮದ ಚೇತನ್‌ಕುಮಾರ್‌ ಮೃತಪಟ್ಟ ದುರ್ದೈವಿ. ಚೇತನ್‌ ಕುಮಾರ್‌ ಭಾನುವಾರ ರಾತ್ರಿ ಹರಿಹರದಹಳ್ಳಿ ಗ್ರಾಮಕ್ಕೆ ಬರುವ ವೇಳೆಯಲ್ಲಿ ವಿದ್ಯಾಕಾಫಿ ಕ್ಯೂರಿಂಗ್‌ ಬಳಿ ಎದುರಿಗೆ ಬಂದ ವಾಹನದ ಬೆಳಕಿಗೆ ರಸ್ತೆ ಕಾಣದ ಸ್ಕಿಡ್‌ ಆಗಿ ಬಿದ್ದಿದ್ದಾರೆ. ಇದೇ ವೇಳೆಗೆ ಅತಿ ವೇಗವಾಗಿ ನವೀನ್‌ ಚಾಲನೆ ಮಾಡುತ್ತಿದ್ದ ಬೈಕ್ ಚೇತನ್‌ಕುಮಾರ್‌ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದರಿಂದ ಚೇತನ್‌ಕುಮಾರ್‌ ಮೃತಪಟ್ಟಿದ್ದಾರೆ. ಅವರ ಪತ್ನಿ ಮಾನಸ ಅವರು ನೀಡಿರುವ ದೂರಿನನ್ವಯ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ