ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಒಂದು ಮಗು, ಇಬ್ಬರು ಮಹಿಳೆಯರನ್ನು ಹೊತ್ತು ಸಾಗುತ್ತಿದ್ದ ಬೈಕ್ ನಿಂದ ಆಯತಪ್ಪಿ ಬಿದ್ದ ಮಹಿಳೆಯ ಹಿಂದೆ ಬರುತ್ತಿದ್ದ ಟಿಪ್ಪರ್ ಲಾರಿ ಚಕ್ರಕ್ಕೆ ಸಿಲುಕಿ ಸಂಪೂರ್ಣ ಎಡಕಾಲು ಕಟ್ಟಾಗಿರುವ ಘಟನೆ ರಬಕವಿಯ ನಿಂಗಸಾನಿ ಪೆಟ್ರೋಲ್ ಬಂಕ್ ಎದುರು ಶುಕ್ರವಾರ ಸಂಜೆ ನಡೆದಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಒಂದು ಮಗು, ಇಬ್ಬರು ಮಹಿಳೆಯರನ್ನು ಹೊತ್ತು ಸಾಗುತ್ತಿದ್ದ ಬೈಕ್ ನಿಂದ ಆಯತಪ್ಪಿ ಬಿದ್ದ ಮಹಿಳೆಯ ಹಿಂದೆ ಬರುತ್ತಿದ್ದ ಟಿಪ್ಪರ್ ಲಾರಿ ಚಕ್ರಕ್ಕೆ ಸಿಲುಕಿ ಸಂಪೂರ್ಣ ಎಡಕಾಲು ಕಟ್ಟಾಗಿರುವ ಘಟನೆ ರಬಕವಿಯ ನಿಂಗಸಾನಿ ಪೆಟ್ರೋಲ್ ಬಂಕ್ ಎದುರು ಶುಕ್ರವಾರ ಸಂಜೆ ನಡೆದಿದೆ.
ಬನಹಟ್ಟಿಯ ತಬಸ್ಸುಮ್ ಸಿಕಂದರ ನದಾಫ(25) ಕಾಲು ಕಳೆದುಕೊಡ ಮಹಿಳೆ. ರಸ್ತೆ ಮಧ್ಯದ ಗುಂಡಿಗಳನ್ನು ತಪ್ಪಿಸಲು ಬೈಕ್ ಸವಾರ ಹರಸಾಹಸ ಪಟ್ಟು ಸಾಗುತ್ತಿದ್ದಾಗ, ಹಿಂದೆ ಕುಳಿತಿದ್ದಾಗ ಈ ಅವಘಡ ಸಂಭವಿಸಿದ್ದು, ಲಾರಿ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳು ಮಹಿಳೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.