ಬೈಕ್‌-ಬಸ್‌ ನಡುವೆ ಅಪಘಾತ: ಮೂವರು ಯುಕರ ಸಾವು

KannadaprabhaNewsNetwork |  
Published : May 28, 2024, 01:00 AM IST
ಫೋಟೋ- ಎಕ್ಸಿಡೆಂಟ್‌ 1, ಎಕ್ಸಿಡೆಂಟ್‌ 2, ಎಕ್ಸಿಡೆಂಟ್‌ 3 ಮತ್ತು ಎಕ್ಸಿಡೆಂಟ್‌ 4ಕಮಲಾಪುರ ಬಲಿ ಸಂಭವಿಸಿದ ದುರಂತದ ನೋಟಗಳು. ಸಾವನ್ನಪ್ಪಿದ ಯುವಕರು | Kannada Prabha

ಸಾರಾಂಶ

ಡೊಂಗರಗಾಂವ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಸೋಮವಾರ ಬೆಳಗ್ಗೆ 9ಕ್ಕೆ ಬೈಕ್ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಮೇಲೆ ತೆರಳಿದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಕಮಲಾಪುರ

ತಾಲೂಕಿನ ಡೊಂಗರಗಾಂವ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಸೋಮವಾರ ಬೆಳಗ್ಗೆ 9ಕ್ಕೆ ಬೈಕ್ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಮೇಲೆ ತೆರಳಿದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಿಣಿ ಸಡಕ್ ಗ್ರಾಮದ ಸಮೀರ್ ಜಮೀರ್ ಸಾಬ್(22) ವಿಶಾಲ್ ಸಂಜು ಕುಮಾರ್ ಜಾದವ್ (20) ಚಂದ್ರಕಾಂತ್ ನಿಂಗಪ್ಪ ಹೋಳಕುಂದಾ (23) ಮೃತಪಟ್ಟ ಯುವಕರು. ಮೂವರು ಸೇರಿ ಬೈಕ್ ಮೇಲೆ ಕಮಲಾಪುರಕ್ಕೆ ಬರುತ್ತಿದ್ದರು. ಕಲ್ಬುರ್ಗಿಯಿಂದ ಹುಮ್ನಾಬಾದ್ ಗೆ ತೆರಳುತ್ತಿರುವ ವಿಜಯಪುರ- ಬಸವಕಲ್ಯಾಣ ಬಸ್ ಗೆ ಇವರ ಬೈಕ್‌ ಢಿಕ್ಕಿಯಾಗಿದೆ. ಡಿಕ್ಕಿಯಿಂದ ರಸ್ತೆಗೆ ಬಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕಮಲಾಪುರ ಪೊಲೀಸರು ತಿಳಿಸಿದ್ದಾರೆ.

ಚಂದ್ರಕಾಂತ್ ಅವರು ಕೆಲ ದಿನಗಳ ಹಿಂದೆ ಎಲ್ ಅಂಡ್ ಟಿ ಕಂಪನಿಯಲ್ಲಿ ಕೆಲ ದಿನಗಳ ಹಿಂದೆ ಉದ್ಯೋಗ ಗಿಟ್ಟಿಸಿಕೊಂಡಿದ್ದು, ಮೇ 28ರಂದು ಹುಬ್ಬಳ್ಳಿಯಲ್ಲಿ ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನಕ್ಕೆ ತೆರಳೋದರಲ್ಲಿದ್ದರು. ಸ್ನೇಹಿತನಾದ ಜಮೀರ್, ಹಾಗೂ ವಿಶಾಲ್ ಸೇರಿ ಚಂದ್ರಕಾಂತನನ್ನು ಕಮಲಾಪುರವರೆಗೆ ಬಿಟ್ಟು ಬರಲು ಬೈಕ್ ಮೇಲೆ ಹೊರಟಿದ್ದರು. ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಕಮಲಾಪುರ್ ಪೊಲೀಸರು ಹೇಳಿದ್ದಾರೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶವಗಳನ್ನು ಸಾಗಿಸಲಾಗಿದೆ. ಕಮಲಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಕರಣ ದಾಖಲಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೇಲಿ ಕನ್ನಡಕ್ಕೆ ಅನ್ಯಾಯ: ಪರೀಕ್ಷೆ ಬಹಿಷ್ಕಾರ ನಿರ್ಧಾರ?
ಭತ್ತದ ನಾಡಿನಿಂದ ಅಕ್ಕಿಯ ರಫ್ತು ಬಂದ್