ಬಾಗಲಕೋಟೆ: ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ವತಿಯಿಂದ ಶಕ್ತಿ ವಂದನಾ ಅಭಿಯಾನ ನಿಮಿತ್ತ ಬೈಕ್ ರ್‍ಯಾಲಿ ಆಯೋಜಿಸಲಾಗಿತ್ತು.
ಬಾಗಲಕೋಟೆ: ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ವತಿಯಿಂದ ಶಕ್ತಿ ವಂದನಾ ಅಭಿಯಾನ ನಿಮಿತ್ತ ಬೈಕ್ ರ್‍ಯಾಲಿ ಆಯೋಜಿಸಲಾಗಿತ್ತು.
ನಗರದ ಬಿಳೂರು ಗುರು ಬಸವ ದೇವಸ್ಥಾನದಿಂದ ಪ್ರಾರಂಭವಾದ ಮಹಿಳೆಯರ ಬೈಕ್ ರ್‍ಯಾಲಿ ತೆಂಗಿನಮಠ, ಅಡತ್ ಬಜಾರ್, ರಸ್ತೆ ಮೂಲಕ ಹಾಯ್ದು ಪೊಲೀಸ್ ಚೌಕ್, ಟಾಂಗಾ ಸ್ಟ್ಯಾಂಡ, ಹಳೆ ಪೋಸ್ಟ್ ಆಫೀಸ್, ಸರದಾರ ವಲ್ಲಬಭಾಯಿ ಚೌಕ್, ಮಹಾತ್ಮಗಾಂಧಿ ರಸ್ತೆ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡಿತು. ರ್‍ಯಾಲಿಯುದ್ದಕ್ಕೂ ನರೇಂದ್ರ ಮೋದಿಯವರನ್ನು ಮೊತ್ತಮ್ಮೆ ಪ್ರಧಾನಿ ಮಾಡೋಣ ಎಂಬ ಜಯಘೋಷಗಳು ಕೇಳಿಬಂದವು.
ಬೈಕ್ ರ್‍ಯಾಲಿಯಲ್ಲಿ ಶಕ್ತಿವಂದನಾ ಕಾರ್ಯಕ್ರಮದ ಜಿಲ್ಲಾ ಉಸ್ತುವಾರಿ ಸುಜಾತಾ ಪ್ರಸನ್ನ ಶಿಂಧೆ, ಸಂಚಾಲಕಿಯರಾದ ಶಶಿಕಲಾ ಮಜ್ಜಗಿ, ಶೀವಲೀಲಾ ಪಟ್ಟಣಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾಗೀರಥಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಂಜುಳಾ ಮಿಸ್ಕಿನ್, ವೀಣಾ ಘಾಟಗೆ, ಜ್ಯೋತಿ ಚವ್ಹಾಣ, ಮಂಜುಳಾ ಛೆಬ್ಬಿ, ಶೋಭಾ ರಾವ, ಸ್ಮೀತಾ ಪವಾರ, ಡಾ.ರೇಖಾ ಕಲಬುರ್ಗಿ, ಸೌಮ್ಯ ಸುಳಾಖೆ, ರೇಣುಕಾ ಬಡಿಗೇರ, ಲಕ್ಷ್ಮೀ ಮಡಿವಾಳ, ನೆಹಾ ಇಂಜನಗೇರಿ, ವಿನಿತಾ ಕಲಬುರಗಿ, ವೃಶಾಲಿ ಆರಬ್ಬಿ, ಸುರೇಖಾ ಮನ್ನೋಳ್ಳಿ. ಶಿವಲೀಲಾ ಸಂಬನ್ನವರ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.