ಹರಪನಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬೈಕ್ ರ‍್ಯಾಲಿ

KannadaprabhaNewsNetwork |  
Published : Aug 15, 2026, 03:30 AM IST
ಹರಪನಹಳ್ಳಿ: 80 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿನಗರದಲ್ಲಿ  ಶುಕ್ರವಾರ ಬಿಜೆಪಿ ಕಾರ್ಯಕರ್ತರು  ಹರ್ ಘರ್ ತಿರಂಗಾ ಅಭಿಯಾನ ಯಾತ್ರೆ ನಡೆಸಿದರು.  | Kannada Prabha

ಸಾರಾಂಶ

80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಹರ್ ಘರ್ ತಿರಂಗಾ ಅಭಿಯಾನದ ತ್ರಿವರ್ಣ ಯಾತ್ರೆ ನಡೆಸಿದರು. ನಗರದ ಹರಿಹರ ವೃತ್ತದಿಂದ ಐ.ಬಿ. ವೃತ್ತದ ವರೆಗೆ ನೂರಾರು ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾ ಲಿ ನಡೆಸಿದರು.

ಹರಪನಹಳ್ಳಿ: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಹರ್ ಘರ್ ತಿರಂಗಾ ಅಭಿಯಾನದ ತ್ರಿವರ್ಣ ಯಾತ್ರೆ ನಡೆಸಿದರು. ನಗರದ ಹರಿಹರ ವೃತ್ತದಿಂದ ಐ.ಬಿ. ವೃತ್ತದ ವರೆಗೆ ನೂರಾರು ಬಿಜೆಪಿ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಕೆ.ಶೇಖರಪ್ಪ, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎನ್.ಜಿ.ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಉದಯಕುಮಾರ್, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಆರ್.ಮಂಜುನಾಥ್ ನಾಯ್ಕ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಎಂ.ದ್ಯಾಮಪ್ಪ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಗಮೇಶ, ತಾಲೂಕು ಪ್ರಧಾನ ಕಾರ್ಯದರ್ಶಿ ಪಂಪಾ ನಾಯ್ಕ, ಉಪಾಧ್ಯಕ್ಷರಾದ ಕಲ್ಲನಗೌಡ, ಗಂಗಾನಾಯ್ಕ, ಪೂರ್ಯ ನಾಯ್ಕ, ಕಾರ್ಯದರ್ಶಿಗಳಾದ ಪ್ರಸನ್ನ, ಮಲ್ಲೇಶ್, ಮಹಾಂತೇಶ್, ಎಸ್ಟಿ ಮೋರ್ಚಾ ಅಧ್ಯಕ್ಷ ಮನೋಜ್, ಒಬಿಸಿ ಮೋರ್ಚಾ ಅಧ್ಯಕ್ಷ ಮಂಜುನಾಥ, ನಗರ ಘಟಕ ಅಧ್ಯಕ್ಷ ಕೊಟ್ರಯ್ಯ, ಯುವ ಮೋರ್ಚಾ ಅಧ್ಯಕ್ಷ ಪ್ರಕಾಶ್, ಎಸ್ಸಿ ಮೋರ್ಚಾ ಅಧ್ಯಕ್ಷ ಲಿಂಗರಾಜ, ಪುರಸಭಾ ಮಾಜಿ ಸದಸ್ಯರಾದ ಕಿರಣ್, ಜಾವೀದ್, ತರಕಾರಿ ಹನುಮಂತಪ್ಪ, ವಿನಯ್ ಸೇರಿದಂತೆ ಮುಖಂಡರು ಕಾರ್ಯಕರ್ತರು ಇದ್ದರು‌.ಹರ್ ಘರ್ ತಿರಂಗಾ ಅಂಗವಾಗಿ ಬೈಕ್ ರ್‍ಯಾಲಿ

ಕೊಟ್ಟೂರು: ಸ್ವಾತಂತ್ರ್ಯ ದಿನೋತ್ಸವದ ಮುನ್ನಾ ದಿನವಾದ ಶುಕ್ರವಾರ ಕೊಟ್ಟೂರು ಬಿಜೆಪಿ ಮಹಾಶಕ್ತಿ ಕೇಂದ್ರ ಮತ್ತು ಹಗರಿಬೊಮ್ಮನಹಳ್ಳಿ ಮಂಡಲ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಪಟ್ಟಣದಲ್ಲಿ ಬೈಕ್ ರ್‍ಯಾಲಿ ನಡೆಯಿತು. ಮಹಾಶಕ್ತಿ ಕೇಂದ್ರದ ಕೊಟ್ಟೂರು ಅಧ್ಯಕ್ಷ ಪಂಪಾಪತಿ ಅಂಗಡಿ, ಅಧ್ಯಕ್ಷ ಬಿ. ನಾಗರಾಜ ನೇತೃತ್ವದಲ್ಲಿ ನಡೆದ ಬೈಕ್ ರ್‍ಯಾಲಿಯಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಮತ್ತಿತರರು ಭಾಗವಹಿಸಿದ್ದರು. ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ ಆರಂಭಗೊಂಡು ವಿವಿಧ ರಸ್ತೆಗಳಲ್ಲಿ ಸಂಚರಿಸಿತು. ಹಗರಿಬೊಮ್ಮನಹಳ್ಳಿ ಮಂಡಲ ಅಧ್ಯಕ್ಷ ಕೆ.ಎಸ್. ಪ್ರಕಾಶ, ಜಿಲ್ಲಾಧ್ಯಕ್ಷ ಎಸ್. ಸಂಜೀವ್ ರೆಡ್ಡಿ , ಜಿಲ್ಲಾ ಉಪಾಧ್ಯಕ್ಷ ಬಲ್ಲಾ ಹುಣ್ಸಿ ರಾಮಣ್ಣ, ಮುಖಂಡರಾದ ತಿಂದಪ್ಪ, ಪಿ.ಎಚ್. ಕೊಟ್ರೇಶ, ಬೋರ್ ವೆಲ್ ತಿಪ್ಪೇಸ್ವಾಮಿ, ಡಾ. ರಾಕೇಶ, ನಂದಿ ವಿಕ್ರಮ್, ಮರಬದ ಕೊಟ್ರೇಶ, ಎಸ್. ಗುರುಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳೊಂದಿಗೆ ನಾಗರ ಪಂಚಮಿ ಆಚರಣೆ
ಸರ್ಕಾರಿ ಉದ್ಯೋಗದ ಬೆನ್ನು ಬೀಳದೆ ಜೀವನ ಕಟ್ಟಿಕೊಳ್ಳಿ