ಕನ್ನಡಪ್ರಭ ವಾರ್ತೆ ಪರಶುರಾಂಪುರ
ಈ ಹಿಂದೆ ಅಪರಾದ ಪ್ರಕರಣವನ್ನು ನಿಯಂತ್ರಿಸುವ ಸಲುವಾಗಿ 3 ವರ್ಷಗಳ ಹಿಂದೆ ಅಳವಡಿಸಿದ್ದ ಸಿ.ಸಿ ಕ್ಯಾಮರಾಗಳು ನಿರ್ವಹಣೆ ಕೊರತೆಯಿಂದ ಕಣ್ಣುಮುಚ್ಚಿ ಕುಳಿತಿವೆ. ಸಂಬಂಧಪಟ್ಟ ಅಧಿಕಾರಿ ವರ್ಗದ ನಿರ್ಲಕ್ಷತೆಯಿಂದ ಸಿ.ಸಿ ಕ್ಯಾಮರಾಗಳು ಕಾರ್ಯ ನಿರ್ವಹಿಸದೇ ತುಕ್ಕು ಹಿಡಿದು ಹೋಗಿವೆ. ಇಂದು ಸಿ.ಸಿ ಕ್ಯಾಮರಾಗಳು ಕಾರ್ಯ ನಿರ್ವಹಿಸಿದರೆ ಅಪರಾದ ಪ್ರಕರಣಗಳ ಹಾಗೂ ಬೈಕ್ ಕಳ್ಳತನಗಳ ಸಂಖ್ಯೆ ಹೆಚ್ಚಾಗುತ್ತಿರಲಿಲ್ಲ. ಈಗಲಾದರೂ ತುಕ್ಕು ಹಿಡಿದಿರುವ ಸಿ.ಸಿ ಕ್ಯಾಮರಾಗಳನ್ನು ದುರಸ್ತಿಪಡಿಸಿ ಅಥವಾ ಗುಣಮಟ್ಟದ ಹೊಸ ಸಿ.ಸಿ ಕ್ಯಾಮರಾ ಅಳವಡಿಸಿ ಬೈಕ್ ಕಳ್ಳತನದಂತಹ ಹಲವಾರು ಅಪರಾಧ ಪ್ರಕರಣಗಳನ್ನು ತಡೆಗಟ್ಟಬೇಕು ಎಂದು ಚನ್ನಕೇಶವ, ಕೇಶವಾಚಾರಿ, ತಿಪ್ಪೇಸ್ವಾಮಿ, ಕೆ.ದ್ಯಾವರಪ್ಪ, ವೇದಮೂರ್ತಿ, ಮೀನಾಕ್ಷಮ್ಮ, ತಿಪ್ಪೇರುದ್ರಪ್ಪ, ರಂಗನಾಥ, ಭರಣಿ ಇನ್ನೂ ಅನೇಕ ಸ್ಥಳೀಯ ಮುಖಂಡರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.ಈಗಾಗಲೇ ಸುಮಾರು ನಾಲ್ಕಾರು ಬೈಕ್ ಗಳು ಕಳ್ಳತನವಾಗಿವೆ. ಅದಕ್ಕೆ ಮೂಲ ಕಾರಣ ಬೈಕ್ ಸವಾರರ ನಿರ್ಲಕ್ಷತೆ ಕೀ ಯನ್ನು ಬೈಕ್‌ನಲ್ಲೇ ಬಿಡುವುದು, ಹ್ಯಾಂಡ್ ಲಾಕ್ ಮಾಡದೇ ಇರುವುದು ಕಳ್ಳತನಕ್ಕೆ ಮುಖ್ಯ ಕಾರಣವಾಗಿದೆ. ನಾವು ಕಾರ್ಯಪ್ರವೃತ್ತರಾಗಿ ಬೈಕ್ ಕಳ್ಳರ ಶೋಧ ಕಾರ್ಯದಲ್ಲಿ ತೊಡಗಿದ್ದೇವೆ. ಬೈಕ್ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತೇವೆ.
- ಸಬ್ ಇನ್ಪ್‌ಪೆಕ್ಟರ್, ಪರಶುರಾಂಪುರ.ಆಸ್ಪತ್ರೆಗೆ ತೆರಳಿ ಹೊರರೋಗಿ ವಿಭಾಗದಲ್ಲಿ ಕಾಲಿಗೆ ಶುಶ್ರೂಷೆ ಮಾಡಿಸಿಕೊಂಡು ಬರುವುದರ ಒಳಗಾಗಿ ಬೈಕ್ ಕಾಣಿಸಲಿಲ್ಲ. ತಕ್ಷಣವೇ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.- ಬೈಕ್ ಕಳೆದುಕೊಂಡ ಸ್ಥಳೀಯ, ಚನ್ನಕೇಶವಪರಶುರಾಂಪುರ ಆಂದ್ರ ಗಡಿಯ ಮುಖ್ಯ ವ್ಯವಹಾರದ ಕೇಂದ್ರವಾಗಿರುವುದರಿಂದ ಸುತ್ತಲಿನ 25 ಹಳ್ಳಿಗಳಿಂದ ಜನರು ವಾಹನಗಳ ಸೌಲಭ್ಯವಿಲ್ಲದ ಕಾರಣ ದ್ವಿಚಕ್ರ ವಾಹನಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ಅವರ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಅವರು ಮತ್ತೆ ಮರಳಿ ಹಳ್ಳಿಗಳಿಗೆ ಹೇಗೆ ಹೋಗುವುದು ತಿಳಿಯದಾಗಿದೆ.