ಆಟೋ ನಿಲ್ದಾಣ ತೆರವು ಖಂಡಿಸಿ ಬಿಕ್ಕೋಡು ಆಟೋ ಚಾಲಕರ ಮೌನ ಪ್ರತಿಭಟನೆ

KannadaprabhaNewsNetwork |  
Published : Jun 19, 2025, 11:48 PM ISTUpdated : Jun 19, 2025, 11:49 PM IST
1ಹೆಚ್ಎಸ್ಎನ್6: ಬಿಕ್ಕೋಡು ಗ್ರಾಮಸ್ಥರು ಹಾಗು ಆಟೊ ಚಾಲಕರು ಬೇಲೂರು  ತಾಲೂಕು ಕಚೇರಿಯ ಮುಂಭಾಗದಲ್ಲಿ  ಮೌನ ಪ್ರತಿಭಟನೆ ನಡೆಸಿದರು.. | Kannada Prabha

ಸಾರಾಂಶ

ಸುಮಾರು ೨೫ ವರ್ಷಗಳಿಂದ ಇದ್ದ ಆಟೋ ನಿಲ್ದಾಣವನ್ಬು ರಾತ್ರೋರಾತ್ರಿ ತೆರವುಗೊಳಿಸಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಸರ್ಕಾರಿ ಭೂಮಿ ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಬಿಕ್ಕೋಡು ಗ್ರಾಮಸ್ಥರು ಹಾಗೂ ಆಟೋ ಚಾಲಕರು ತಾಲೂಕು ಕಚೇರಿಯ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಏಕಾಏಕಿ ರಾತ್ರಿ ಸಮಯದಲ್ಲಿ ಈ ನಿಲ್ದಾಣವನ್ನು ತೆರವುಗೊಳಿಸಿದ್ದಾರೆ. ಇದು ಸರ್ಕಾರಿ ಜಾಗವಾಗಿದ್ದು ಆ ಜಾಗವನ್ನು ಅತಿಕ್ರಮಣವಾಗಿ ಪ್ರವೇಶಿಸಿ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.ಇವರ ವಿರುದ್ಧ ಕ್ರಮ ಕೈಗೊಂಡು ಈ ಹಿಂದೆ ಇದ್ದ ಆಟೋ ನಿಲ್ದಾಣವನ್ನು ಯಥಾಸ್ಥಿತಿ ಕಾಪಾಡುವಂತೆ ಚಾಲಕರ ಪರವಾಗಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಸುಮಾರು ೨೫ ವರ್ಷಗಳಿಂದ ಇದ್ದ ಆಟೋ ನಿಲ್ದಾಣವನ್ಬು ರಾತ್ರೋರಾತ್ರಿ ತೆರವುಗೊಳಿಸಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಸರ್ಕಾರಿ ಭೂಮಿ ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಬಿಕ್ಕೋಡು ಗ್ರಾಮಸ್ಥರು ಹಾಗೂ ಆಟೋ ಚಾಲಕರು ತಾಲೂಕು ಕಚೇರಿಯ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಸರ್ಕಾರಿ ಜಾಗ ಉಳಿಸಿ ಗೋಮಾಳ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ವಾಣಿಜ್ಯ ಮಳಿಗೆಗೆಗಳನ್ನು ತಡೆಯುವಂತೆ ಉಪ ತಹಸೀಲ್ದಾರ್ ಅಶೋಕ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಕೆಡಿಪಿ ಸದಸ್ಯ ಹಾಗೂ ಗ್ರಾಮಸ್ಥರಾದ ಚೇತನ್ ಸಿ ಗೌಡ, ತಾಲೂಕಿನ ಬಿಕ್ಕೋಡು ಗ್ರಾಮದ ಸರ್ವೆ ನಂ. ೩೪ರಲ್ಲಿ ಗೋಮಾಳದ ೮ ಎಕರೆ ೩೦ ಕುಂಟೆ ಜಾಗವಿದ್ದು ಆ ಜಾಗದಲ್ಲಿ ಗಣಪತಿ ದೇವಾಲಯವಿದ್ದು, ಅದರ ಪಕ್ಕದ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಪಕ್ಕದಲ್ಲಿ ಸುಮಾರು ೨೫ ವರ್ಷಗಳಿಂದ ಮಲೆನಾಡು ಆಟೋ ಚಾಲಕರ ಸಂಘದವರು ತಮ್ಮ ಜೀವನೋಪಾಯಕ್ಕಾಗಿ ಆಟೋ ನಿಲ್ದಾಣ ದಾನಿಗಳ ಸಹಾಯದಿಂದ ನಿರ್ಮಾಣ ಮಾಡಿಕೊಂಡು ಬಂದಿದ್ದು, ಈ ಜಾಗದಲ್ಲಿ ಚಾಲಕರ ಹೆಸರಿನಲ್ಲಿ ಈ ನಿಲ್ದಾಣವನ್ನು ಸರ್ಕಾರದಿಂದ ನೋಂದಣಿಯಾಗಿದೆ. ಆದರೆ ಇಲ್ಲಿ ಕೆಲವರು ಈ ನಿಲ್ದಾಣ ತೆರವುಗೊಳಿಸಿ ವಾಣಿಜ್ಯ ಮಳಿಗೆಗಳನ್ನು ಯಾವುದೇ ಅನುಮತಿ ಪಡೆಯದೆ ನಿರ್ಮಾಣ ಮಾಡುತ್ತಿದ್ದು ಇಲ್ಲಿದ್ದ ಆಟೋ ನಿಲ್ದಾಣವನ್ನು ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ ಎಂದು ಕಿಡಿಕಾರಿದರು. ಇದರ ವಿರುದ್ಧ ಈಗಾಗಾಲೇ ಗ್ರಾಮ ಪಂಚಾಯತ್‌ ಹಾಗೂ ಲೋಕೋಪಯೋಗಿ ಇಲಾಖೆಗೆ ಅತಿಕ್ರಮಣ ಮಾಡಿರುವ ಹಾಗದ ಬಗ್ಗೆ ಸಂಪೂರ್ಣ ದಾಖಲೆ ಸಮೇತ ಗೋಮಾಳದ ಜಾಗವನ್ನು ಕಬಳಿಸಿದ್ದಾರೆಂದು ದೂರು ನೀಡಿದರೂ ಸಹ ಇವರು ಕಣ್ಣುಮುಚ್ಚಿಕುಳಿತಿದ್ದಾರೆ. ಈಗಾಗಲೇ ಮಳಿಗೆಗಳ ಕಾಮಗಾರಿ ನಡೆಯುತ್ತಿದ್ದು, ತಕ್ಷಣವೆ ಅದನ್ನು ತಡೆದು ಸಾರ್ವಜನಿಕರ ಸೇವೆಗೆ ಮೀಸಲಿಡುವಂತೆ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದು ಸರ್ಕಾರಿ ಜಾಗವನ್ನು ಉಳಿಸಲು ಮುಂದಾಗದಿದ್ದರೆ ಬಿಕ್ಕೋಡಿನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ನಂತರ ಮಾತನಾಡಿದ ಆಟೋ ಚಾಲಕರ ಸಂಘದ ಅಧ್ಯಕ್ಚ ಬಸವರಾಜು, ಸುಮಾರು ೨೫ ವರ್ಷಗಳ ಕಾಲ ಇಲ್ಲಿ ನಾವು ೫೦ಕ್ಕೂ ಹೆಚ್ಚು ಆಟೋಗಳನ್ನು ನಿಲ್ದಾಣದಲ್ಲಿ ನಿಲ್ಲಿಸಿಕೊಂಡು ತಮ್ಮ ಜೀವನ ನಡೆಸಿಕೊಂಡು ಬರುತ್ತಿದ್ದು ಇಲ್ಲಿ ಎಲ್ಲಾ ಬಡವರಾಗಿದ್ದು ಏಕಾಏಕಿ ರಾತ್ರಿ ಸಮಯದಲ್ಲಿ ಈ ನಿಲ್ದಾಣವನ್ನು ತೆರವುಗೊಳಿಸಿದ್ದಾರೆ. ಇದು ಸರ್ಕಾರಿ ಜಾಗವಾಗಿದ್ದು ಆ ಜಾಗವನ್ನು ಅತಿಕ್ರಮಣವಾಗಿ ಪ್ರವೇಶಿಸಿ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.ಇವರ ವಿರುದ್ಧ ಕ್ರಮ ಕೈಗೊಂಡು ಈ ಹಿಂದೆ ಇದ್ದ ಆಟೋ ನಿಲ್ದಾಣವನ್ನು ಯಥಾಸ್ಥಿತಿ ಕಾಪಾಡುವಂತೆ ಚಾಲಕರ ಪರವಾಗಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕಾಂತರಾಜು, ಹೊಯ್ಸಳ ಆಟೋ ಸಂಘದ ಪುಟ್ಟರಾಜು,‌‌‌‌‍ ಮಂಜೇಗೌಡ, ರವೀಶ್, ಅಭಿಷೇಕ್, ಚನ್ನಯ್ಯ, ಜಗದೀಶ್, ತೇಜು, ಶಿವಣ್ಣ, ಚನ್ನಕೇಶವ, ತಮ್ಮಯ್ಯ, ಧರ್ಮೇಶ್, ಕಿರಣ್, ಸತೀಶ್, ರಾಕೇಶ್, ಧರಣೇಶ್, ಲಕ್ಷ್ಮೀಶ್ ಸೆರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ