ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಳೆದ ಫೆಬ್ರುವರಿ/ಮಾರ್ಚ್ ತಿಂಗಳಿನಲ್ಲಿ ನಡೆದ 10ನೇ ತರಗತಿಯ ಸಿಬಿಎಸ್ಇ ವಾರ್ಷಿಕ ಪರೀಕ್ಷೆಯಲ್ಲಿ ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಬಸವೇಶ್ವರ ಅಂತಾರಾಷ್ಟ್ರೀಯ (ಸಿಬಿಎಸ್ಇ) ಪಬ್ಲಿಕ್ ಶಾಲೆ0ು ವಿದ್ಯಾರ್ಥಿಗಳು ಪ್ರತಿವರ್ಷದಂತೆ ಈ ಸಲವೂ ಪ್ರತಿಶತ 100ರಷ್ಟು ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.ಜ್ಯೋತ್ಸ್ನಾ ಮೂಲಿಮನಿ ಶೇ.95.6ರಷ್ಟು ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದರೆ, ಗಾಯತ್ರಿ ಹಗನೂರ ಶೇ.95.4ರಷ್ಟು ಅಂಕ ಗಳಿಸಿ ದ್ವಿತೀಯ ಹಾಗೂ ಸಾಕ್ಷಿ ಮಠಪತಿ ಶೇ.94.8ರಷ್ಟು ಅಂಕ ಪಡೆದು ಮೂಲಕ ಮೂರನೇ ಸ್ಥಾನ ಗಳಿಸಿದ್ದಾಳೆ.
ಗಣಿತ ವಿಷಯದಲ್ಲಿ ಗಾಯತ್ರಿ ಹಗನೂರ ಹಾಗೂ ಚಿನ್ಮಯಿ ಹಲಕುರ್ಕಿ ಪ್ರತಿಶತ100 ಅಂಕ ಗಳಿಸಿ ಅಪೂರ್ವ ಸಾಧನೆ ಗೈದಿದ್ದಾರೆ.ಪರೀಕ್ಷೆಗೆ ಕುಳಿತ 148 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಶೇ.90ಕ್ಕೂ ಅಧಿಕ ಅಂಕ ಗಳಿಸಿ ಪ್ರಶಸ್ತಿ ಸಹಿತ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೆ, 56 ವಿದ್ಯಾರ್ಥಿಗಳು 80 ರಿಂದ 89ರಷ್ಟು ಅಂಕ ಹಾಗೂ 65 ವಿದ್ಯಾರ್ಥಿಗಳು 60 ರಿಂದ 79ರಷ್ಟು ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೆ, 7 ವಿದ್ಯಾರ್ಥಿಗಳು 57 ರಿಂದ 59ರಷ್ಟು ಅಂಕ ಗಳಿಸಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ವರುಣ ಪಟ್ಟಣಶೆಟ್ಟಿ (ಶೇ. 94.2), ನಿಶಿತಾ ಮೂಲಿಮನಿ (ಶೇ.93.2), ರಶ್ಮಿ ವಿ. ಗೌರಿಮಠ (ಶೇ.93.2), ಸುಮಂತ್ ಎಸ್. (ಶೇ.93) ಶ್ರೇಯಸ್ ಪದರಾ (ಶೇ.92.8), ಚಿನ್ಮಯಿ ಹಲಕುರ್ಕಿ (ಶೇ. 92.6), ಮಹಮ್ಮದ್ ಜುನೈದ್ ಸೌದಾಗರ್ (ಶೇ.92.6), ಗೌರಿ ನಾಗಠಾಣ (ಶೇ.92.6), ಶ್ರೇಯಾ ಸಣಕಲ್ (ಶೇ.92.6), ಭೂಷಿತಾ ಗೌಡರ್ (ಶೇ.91.4), ಪೂಜಾ ಬೆನ್ನೂರ (ಶೇ.91.4), ಶ್ರವಣಾ ಪತ್ತಾರ (ಶೇ.91.4), ಶುಭನ್ ಸಿರಿಗೆರೆ, (ಶೇ.90.8) ಶ್ರೇಯಾ ಏಳಂಗಡಿ (ಶೇ.90.8), ಸಾನಿಕಾ ಸೋಮಾನಿ (ಶೇ.90), ಶ್ರೀಶಾಂತ ಗಾಣಿಗೇರ (ಶೇ.90), ಸಿದ್ದು ಬಿರಾದಾರ (ಶೇ.89.6) ಶೇ. 90ಕ್ಕೂ ಅಧಿಕ ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಶಾಲಾ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ್, ಶಾಲೆಯ ಪ್ರಾಚಾರ್ಯ ಸಿ.ಬಿ. ಸುರೇಶ ಹೆಗ್ಡೆ, ಉಪಪ್ರಾಚಾರ್ಯ ಮಂಗಳಗೌರಿ ಹೆಗ್ಡೆ ಹಾಗೂ ಶಾಲೆಯ ಶಿಕ್ಷಕ /ಶಿಕ್ಷಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.