ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೆಳೆ ಕಟಾವು ಪ್ರಯೋಗಗಳ ಪ್ರಗತಿ ಪರಿಶೀಲನೆ, ಬೆಳೆ ಕ್ಷೇತ್ರ ಮರು ಹೊಂದಾಣಿಕೆ ಮತ್ತು ಜನನ-ಮರಣ ನಾಗರಿಕ ನೋಂದಣಿ ಪದ್ಧತಿಯ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜನನ ಘಟನೆಗಳ ಪ್ರಮಾಣವು ವಾರ್ಷಿಕ ಅಂದಾಜು 30 ಸಾವಿರವಿದೆ. ಪ್ರತಿ ತಿಂಗಳು, ಪ್ರತಿ ಆಸ್ಪತ್ರೆಗಳಲ್ಲಿ ಎಷ್ಟು ಜನನ ಘಟನೆಗಳು ಸಂಭವಿಸುತ್ತಿವೆ ಹಾಗೂ ಎಷ್ಟು ಮಂದಿ ಜನನ ಪ್ರಮಾಣ ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ, ಮಾಹಿತಿ ಸಂಗ್ರಹಿಸಬೇಕು. ಈ ಕುರಿತು ಆಯಾ ತಾಲ್ಲೂಕು ತಹಶೀಲ್ದಾರರ ನೇತೃತ್ವದಲ್ಲಿ ತಾಲೂಕು ಮಟ್ಟದ ಜನನ ಮತ್ತು ಮರಣ ಸಮನ್ವಯ ಸಮಿತಿ ಸಭೆಗಳನ್ನು ನಿಯಮಿತವಾಗಿ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.ಅದೇ ರೀತಿಯಾಗಿ ಮರಣ ಘಟನೆಗಳನ್ನು ಹೇಗೆ ಗಣತಿ ಮಾಡುತ್ತೀರಿ ಎಂದು ವಿಚಾರಿಸಿದ ಜಿಲ್ಲಾಧಿಕಾರಿಗಳು, ಮರಣ ಘಟನೆಗಳು ಕೇವಲ ಆಸ್ಪತ್ರೆಗಳಲ್ಲಿ ಸಂಭವಿಸಿದರೆ ಗೊತ್ತಾಗುತ್ತದೆ, ಆದರೆ ಸಮುದಾಯದಲ್ಲಿ ನಡೆದ ಮರಣ ಘಟನೆಗಳನ್ನು ಸಹ ತಪ್ಪದೇ ಗಣತಿ ಮಾಡಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜನನ ಘಟನೆಗಳು 21 ದಿನಗಳೊಳಗಾಗಿ ಸಂಭವಿಸಿದ್ದರೆ ಉಚಿತವಾಗಿ ಪ್ರಮಾಣ ಪತ್ರ ಪಡೆಯಬಹುದು. ಘಟನೆ ಸಂಭವಿಸಿ 21 ದಿನದಿಂದ 30 ದಿನಗಳೊಳಗಿದ್ದರೆ ಪ್ರಮಾಣ ಪತ್ರ ಪಡೆಯಲು ₹20 ಪಾವತಿಸಬೇಕು. 30 ದಿನಗಳ ನಂತರ ಪಡೆಯುವಂತಿದ್ದಲ್ಲಿ ₹50 ಪಾವತಿಸಬೇಕು ಎಂದು ಮಾಹಿತಿ ತಿಳಿಸಿದರು.
ಕೃಷಿ ಗಣತಿ ಕಾರ್ಯದಲ್ಲಿ ಸಹ ಈವರೆಗೆ ಜಿಲ್ಲೆಯಲ್ಲಿ ಬಿತ್ತನೆಯಾದ ಮತ್ತು ಬಿತ್ತನೆಯಾಗದಿರುವುದರ ಕುರಿತು ವಿವಿಧ ನಮೂನೆಗಳಲ್ಲಿ ಪ್ರಯೋಗದ ಮಾಹಿತಿಯನ್ನು ಆಯಾ ತಾಲೂಕುಗಳ ತಹಶೀಲ್ದಾರರು ತಪ್ಪದೇ ನಮೂದಿಸಬೇಕು ಎಂದು ಎಲ್ಲಾ ತಾಲೂಕುಗಳ ತಹಶೀಲ್ದಾರರಿಗೆ ತಿಳಿಸಿದರು.