ಬೇಲೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ

KannadaprabhaNewsNetwork |  
Published : Jun 30, 2026, 01:45 AM IST
29ಎಚ್ಎಸ್ಎನ್5 : ಬೇಲೂರಿನಲ್ಲಿ ನಾಡಪ್ರಭು ಕೆಂಪೇಗೌಡರ 517 ನೇ ಜಯಂತಿಯನ್ನು  ವಿಜೃಂಭಣೆಯಿಂದ ಸೋಮವಾರ  ಆಚರಿಸಲಾಯಿತು. | Kannada Prabha

ಸಾರಾಂಶ

ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ ಕೆಂಪೇಗೌಡರು ಮಹಾನ್ ಆಡಳಿತಗಾರರಾಗಿ ರೂಪುಗೊಳ್ಳಲು ಅವರ ತಂದೆ-ತಾಯಿ ನೀಡಿದ ಮೌಲ್ಯಯುತ ಸಂಸ್ಕಾರವೇ ಪ್ರಮುಖ ಕಾರಣವಾಗಿತ್ತು. ಸುಮಾರು 450 ವರ್ಷಗಳ ಹಿಂದೆಯೇ ಬೆಂಗಳೂರು ನಗರವನ್ನು ಯೋಜನಾಬದ್ಧವಾಗಿ ನಿರ್ಮಿಸಿದ ಕೆಂಪೇಗೌಡರ ದೂರದೃಷ್ಟಿಯ ಫಲವಾಗಿಯೇ ಇಂದು ವಿಶ್ವದ ವಿವಿಧ ರಾಷ್ಟ್ರಗಳ ಹೂಡಿಕೆದಾರರು ಬೆಂಗಳೂರಿನತ್ತ ಆಕರ್ಷಿತರಾಗುತ್ತಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕು ಒಕ್ಕಲಿಗ ಕುಲಬಾಂಧವರ ವತಿಯಿಂದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಹಾಗೂ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಜೊತೆಗೆ ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆ ನಡೆಸಿ ನಂತರ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ‌ಹಾಗೂ ಕೆಂಪೇಗೌಡ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ ಕೆಂಪೇಗೌಡರು ಮಹಾನ್ ಆಡಳಿತಗಾರರಾಗಿ ರೂಪುಗೊಳ್ಳಲು ಅವರ ತಂದೆ-ತಾಯಿ ನೀಡಿದ ಮೌಲ್ಯಯುತ ಸಂಸ್ಕಾರವೇ ಪ್ರಮುಖ ಕಾರಣವಾಗಿತ್ತು. ಸುಮಾರು 450 ವರ್ಷಗಳ ಹಿಂದೆಯೇ ಬೆಂಗಳೂರು ನಗರವನ್ನು ಯೋಜನಾಬದ್ಧವಾಗಿ ನಿರ್ಮಿಸಿದ ಕೆಂಪೇಗೌಡರ ದೂರದೃಷ್ಟಿಯ ಫಲವಾಗಿಯೇ ಇಂದು ವಿಶ್ವದ ವಿವಿಧ ರಾಷ್ಟ್ರಗಳ ಹೂಡಿಕೆದಾರರು ಬೆಂಗಳೂರಿನತ್ತ ಆಕರ್ಷಿತರಾಗುತ್ತಿದ್ದಾರೆ ಎಂದರು.ಶಾಸಕ ಎಚ್.ಕೆ. ಸುರೇಶ್ ಮಾತನಾಡಿ , ಕೆಂಪೇಗೌಡರು ಕೇವಲ ಒಕ್ಕಲಿಗ ಸಮುದಾಯದ ನಾಯಕರಲ್ಲ, ಇಡೀ ಕರ್ನಾಟಕ ಮತ್ತು ದೇಶದ ಹೆಮ್ಮೆಯ ವ್ಯಕ್ತಿತ್ವವಾಗಿದೆ. ಬೆಂಗಳೂರು ಸೇರಿದಂತೆ ಅನೇಕ ಪಟ್ಟಣಗಳ ನಿರ್ಮಾಣ, ಕೆರೆ-ಕಟ್ಟೆಗಳ ಅಭಿವೃದ್ಧಿ ಹಾಗೂ ಅಕ್ಕಿಪೇಟೆ, ಚಿಕ್ಕಪೇಟೆ ಸೇರಿದಂತೆ ಹಲವು ವಾಣಿಜ್ಯ ಕೇಂದ್ರಗಳ ಸ್ಥಾಪನೆಯ ಮೂಲಕ ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೆಂಪೇಗೌಡರು ಭದ್ರ ಬುನಾದಿ ಹಾಕಿದ್ದರು ಎಂದು ಹೇಳಿದರು.ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಒಕ್ಕಲಿಗರ ಯಿವ ವೇಧಿಕೆ ಅದ್ಯಕ್ಷ ಹೆಚ್ ಎಂ ದಿನೇಶ್,ಗೌರವ ಅದ್ಯಕ್ಷ ಚಂದ್ರೇಗೌಡ,ಸಂಸ್ಥಾಪಕ ಅದ್ಯಕ್ಷ ಸಿ ಎಂ ಪೃಥ್ವಿ,ಪ್ರಧಾನ ಕಾರ್ಯದರ್ಶಿ ಗಣೇಶ್,ಉಪಾಧ್ಯಕ್ಷ ಪುಟ್ಟ ಸ್ವಾಮಿ ಗೌಡ,ಬಿ ಗಿರೀಶ್,ಮಹಿಳಾ ಅದ್ಯಕ್ಷೆ ಭಾರತೀಗೌಡ, ಖಜಾಂಚಿ ನಾರಾಯಣ್, ಮುಖಂಡರಾದ ಎಂ ಎ ನಾಗರಾಜ್, ಮಲ್ಲೇಶ್ ಗೌಡ, ವೈ ಎನ್ ಕೃಷ್ಣೇಗೌಡ, ಸಿ ಹೆಚ್ ಮಹೇಶ್, ಜಿ ಕೆ ಕುಮಾರ್, ಸಿ ಎಚ್ ಪ್ರಕಾಶ್ , ಲೋಹಿತ್ ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು-ಮಂಗಳೂರು ಚತುಷ್ಪಥ ರೈಲ್ವೆ ಮಾರ್ಗ
ಎಂಎಂಹಿಲ್ಸ್‌ನಿಂದ ಬರುತ್ತಿದ್ದ ಸಾರಿಗೆ ಬಸ್ಸಿನ ಟೈಯರ್‌ ಸ್ಫೋಟ: ಇಬ್ಬರು ಬಲಿ, 40 ಗಾಯ