ಕನ್ನಡಪ್ರಭ ವಾರ್ತೆ ಉಡುಪಿ
ಮನೆಯ ದೇವರ ಸನ್ನಿಧಿಯಲ್ಲಿ ರಾಮದಾಸ್ ಭಟ್ ಪ್ರಾರ್ಥನೆಗೈದು, ಶ್ರೀ ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿ ಅಧ್ಯಕ್ಷ ಸತೀಶ್ ಕಿಣಿ ಮತ್ತು ಆತಿಥೇಯ ನರಸಿಂಹ ಶೆಣೈ ದಂಪತಿ ದೀಪ ಪ್ರಜ್ವಲನ ಮಾಡಿ ಭಜನಾ ಸಂಕೀರ್ತನೆ ಚಾಲನೆ ನೀಡಿದರು.
ನಂತರ ಉಡುಪಿಯಲ್ಲಿ ಈಗಾಗಲೇ ಸುಮಾರು 140ಕ್ಕೂ ಹೆಚ್ಚಿನ ಮನೆಯಲ್ಲಿ ಭಜನೆ ಮಾಡಿ ಪ್ರಸಿದ್ಧವಾಗಿರುವ ‘ಘರ್ ಘರ್ ಭಜನಾ ಮಂಡಳಿ’ ವತಿಯಿಂದ ಭಜನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಾರ್ಮೋನಿಯಂನಲ್ಲಿ ನಿತ್ಯಾನಂದ ನಾಯಕ್, ತಬಲಾದಲ್ಲಿ ಪುರಂದರ್ ಕಿಣಿ, ಅಚ್ಚುತ್ ಪೈ, ಭಜನೆಯಲ್ಲಿ ಜಯಂತ್ ನಾಯಕ್, ಶಾಂತಾರಾಮ ಪೈ, ಗಣಪತಿ ಶಾನಭೋಗ್, ರವೀಂದ್ರ ನಾಯಕ್, ದೇವದಾಸ್ ಕಾಮತ್ ಸಹಕರಿಸಿದರು. ಸಿಂಧೂ ಕಾಮತ್, ಸುಧೀಂದ್ರ ವಾಣಿಯನ್ನು ವಾಚಿಸಿದರು.