ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಟಿಎಪಿಸಿಎಂಎಸ್ ಕಚೇರಿ ಮುಂಭಾಗದ ಅವರ ಪ್ರತಿಮೆಗೆ ವಿವಿಧ ಸಂಘಟನೆಗಳು ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷರು, ಸಿಬ್ಬಂದಿ ಸೇರಿ ಪುಷ್ಪ ನಮನ ಸಲ್ಲಿಸಿದರು.
ನಂತರ ವೇದಿಕೆ ಸಂಚಾಲಕ ಸಿ.ಎಸ್.ವೆಂಕಟೇಶ್ ಮಾತನಾಡಿ, ಪ್ರಸಿದ್ಧ ವೈದ್ಯರಾಗಿದ್ದ ಡಾ.ಸಿ.ಬಂದೀಗೌಡರು ಗಾಂಧಿವಾದದ ಮೂಲಕ ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಒಂದು ಬಾರಿ ಎಂಎಲ್‌ಸಿಯಾಗಿ, ಟಿಎಪಿಸಿಎಂಎಸ್ ಸಂಸ್ಥೆಗೆ ತಮ್ಮ ಖಾಸಗಿ ಜಾಗವನ್ನು ದತ್ತಿಯಾಗಿ ನೀಡಿ, ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ನೆನೆಯುವುದು ನಮ್ಮ ಕರ್ತವ್ಯವಾಗಿದೆ. ಇಂತಹ ಮಹಾನ್ ಚೇತನ ನಮ್ಮ ಶ್ರೀರಂಗಪಟ್ಟಣಕ್ಕೆ ಒಂದು ಹಿರಿಮೆ ಎಂದರು.ಡಾ.ಬಂದೀಗೌಡರ ಪುತ್ರ ಹಾಗೂ ಹಿರಿಯ ಗಾಂಧಿವಾದಿ ಡಾ.ಬಿ ಸುಜಯ್ ಕುಮಾರ್ ಅವರು, ತಮ್ಮ ತಂದೆ ನೆನಪುಗಳನ್ನು ಸ್ಮರಿಸಿದರು. ಈ ವೇಳೆ ಟಿಪಿಸಿಎಂಎಸ್ ಅಧ್ಯಕ್ಷ ಎಸ್.ಎಂ.ನಾಗರಾಜು, ಐಕ್ಯ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ಎನ್.ಸರಸ್ವತಿ, ವಿವೇಕಾನಂದ ಯೋಗ ಕಿಶೋರ ಅಧ್ಯಕ್ಷ ಅಪ್ಪಾಜಿ ಕೆ.ಶೆಟ್ಟಹಳ್ಳಿ, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಜಯಶಂಕರ್, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಅರಕೆರೆ ಶಿವಯ್ಯ, ಟಿಎಪಿಸಿಎಂಎಸ್ ನಿರ್ದೇಶಕರಾದ ಎಲ್.ನಾಗರಾಜು, ಸುಚಿತ್ರ, ಪದ್ಮಮ್ಮ, ಶಿಕ್ಷಕಿ ಎಚ್.ಜೆ. ಶೀಲಾ, ವ್ಯವಸ್ಥಾಪಕ ಶಂಕರ್, ನಗುವಿನಹಳ್ಳಿ ರಾಮಣ್ಣ, ಚಿಕ್ಕ ತಮ್ಮೇಗೌಡ ಸೇರಿದಂತೆ ಇತರರು ಇದ್ದರು.
ಕೆ.ಎಂ.ದೊಡ್ಡಿ: ಮೆಣಸಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಲೂರಯ್ಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.ಹಿಂದಿನ ಅಧ್ಯಕ್ಷ ಮಧುಸೂದನ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಲೂರಯ್ಯರನ್ನು ಹೊರತುಪಡಿಸಿ ಬೇರೆ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಸಂಘದ ಕಾರ್ಯದರ್ಶಿ ಎಂ.ಟಿ.ಸುರೇಶ್ ಆಯ್ಕೆಯನ್ನು ಘೋಷಿಸಿದರು.