ಬೀರೂರು ಸರ್ವತೋಮುಖ ಅಭಿವೃದ್ಧಿಗೆ ಬದ್ಧ: ವನಿತಾ ಬಾವಿಮನೆ ಮಧು

KannadaprabhaNewsNetwork |  
Published : Feb 21, 2025, 12:50 AM IST
20 ಬೀರೂರು 2ಬೀರೂರು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ವನಿತಬಾವಿಮನೆ ಮಧು ನೇತೃತ್ವದಲ್ಲಿ 2025-26ನೇ ಸಾಲಿನ ಅಯವ್ಯಯ ಪುರಸಭೆಯಸದಸ್ಯರು ಬಜೆಟ್ ಮಂಡನೆಗೆ ಸಾಕ್ಷಿಯಾದರು . | Kannada Prabha

ಸಾರಾಂಶ

ಬೀರೂರು, ಪಟ್ಟಣದ ವಿವಿಧ ಮೂಲಭೂತ ಸೌಲಭ್ಯಗಳ ಆದ್ಯತೆ ಸೇರಿದಂತೆ ಸರಕಾರದ ಅನುದಾನ ಬಳಸಿಕೊಂಡು 2025-26ನೇ ಸಾಲಿಗೆ ಬೀರೂರು ಪುರಸಭೆ ಎಲ್ಲಾ ಮೂಲಗಳಿಂದ ಒಟ್ಟು ₹11.49 ಕೋಟಿ ಆದಾಯ ನಿರೀಕ್ಷಿಸಿದ್ದು ವೆಚ್ಚದ ಬಳಿಕ 3.84ಲಕ್ಷ ಉಳಿತಾಯ ಬಜೆಟ್ ಮಂಡನೆಗೆ ಆದ್ಯತೆ ನೀಡಲಾಗಿದೆ ಎಂದು ಪುರಸಭಾಧ್ಯಕ್ಷೆ ವನಿತಬಾವಿಮನೆ ಮಧು ತಿಳಿಸಿದರು.

- ಪುರಸಭೆ: 2025-26ನೇ ಸಾಲಿಗೆ ₹3.84ಲಕ್ಷ ಉಳಿತಾಯ ಬಜೆಟ್ ಮಂಡಣೆ

ಕನ್ನಡಪ್ರಭ ವಾರ್ತೆ, ಬೀರೂರು

ಪಟ್ಟಣದ ವಿವಿಧ ಮೂಲಭೂತ ಸೌಲಭ್ಯಗಳ ಆದ್ಯತೆ ಸೇರಿದಂತೆ ಸರಕಾರದ ಅನುದಾನ ಬಳಸಿಕೊಂಡು 2025-26ನೇ ಸಾಲಿಗೆ ಬೀರೂರು ಪುರಸಭೆ ಎಲ್ಲಾ ಮೂಲಗಳಿಂದ ಒಟ್ಟು ₹11.49 ಕೋಟಿ ಆದಾಯ ನಿರೀಕ್ಷಿಸಿದ್ದು ವೆಚ್ಚದ ಬಳಿಕ 3.84ಲಕ್ಷ ಉಳಿತಾಯ ಬಜೆಟ್ ಮಂಡನೆಗೆ ಆದ್ಯತೆ ನೀಡಲಾಗಿದೆ ಎಂದು ಪುರಸಭಾಧ್ಯಕ್ಷೆ ವನಿತಬಾವಿಮನೆ ಮಧು ತಿಳಿಸಿದರು.ಪುರಸಭಾ ಸಭಾಂಗಣದಲ್ಲಿ ಗುರುವಾರ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿ ಮಾತನಾಡಿ, ಬೀರೂರು ಪಟ್ಟಣದಲ್ಲಿ ಜಾತಿ ಮತ ಬೇದವಿಲ್ಲದೆ ವೀರಭದ್ರ ಸ್ವಾಮಿ ಹಾಗೂ ಕಾರ್ಣಿಕ ದೊಡೆಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಆಶೀರ್ವಾದದಿಂದ ಸೌಹಾರ್ದತೆಯಿಂದ ಶಾಂತಿಗೆ ಹೆಸರುವಾಸಿಯಾಗಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪುರಸಭೆ ವ್ಯಾಪ್ತಿ ನಾಗರಿಕರ ತೆರಿಗೆ ಅನುದಾನದ ಆದಾಯದ ಮೂಲಗಳಿಂದ ಕ್ರೂಢಿಕರಿಸಿಕೊಂಡು ಅಭಿವೃದ್ಧಿ ದೃಷ್ಟಿಕೋನದಲ್ಲಿ ಉಳಿತಾಯ ಬಜೆಟ್ ಮಂಡಿಸಲಾಗಿದೆ. ಪ್ರಮುಖವಾಗಿ ಕಟ್ಟಡ ಆಸ್ತಿ ತೆರಿಗೆ, ಆಸ್ತಿ ತೆರಿಗೆ ದಂಡ, ಉದ್ದಿಮೆ ಪರವಾನಗಿ ಶುಲ್ಕ, ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಗಿ ಶುಲ್ಕ, ನಿವೇಶನ ಅಭಿವೃದ್ಧಿ ಶುಲ್ಕ, ಬ್ಯಾಂಕ್ ಬಡ್ಡಿ, ಸಂಗ್ರಹಣಾ ಶುಲ್ಕ, ಮಾರುಕಟ್ಟೆ ಬಾಡಿಗೆ ಶುಲ್ಕ, ಖಾತೆ ಬದಲಾವಣೆ, ಖಾತಾ ನಕಲು, ಇತರೆ ಪ್ರಮಾಣ ಪತ್ರಗಳ ಶುಲ್ಕ, ಟೆಂಡರ್ ಫಾರಂಗಳ ಮಾರಾಟದಿಂದ, ನೀರಿನ ದರಗಳ ವಸೂಲಾತಿ, ನೀರಿನ ಸಂಪರ್ಕ ಮತ್ತು ಠೇವಣಿ ಆದಾಯ, ಕುಡಿಯುವ ನೀರು ಬರ ಪರಿಹಾರ, ಬೀದಿ ದೀಪಗಳ ವಿದ್ಯುತ್ ಬಿಲ್ ಪಾವತಿಗೆ ಎಸ್‌ಎಫ್‌ಸಿ ವಿದ್ಯುತ ಅನುದಾನ, ಪುರಸಭಾ ಅಧಿಕಾರಿ ಮತ್ತು ನೌಕರರ ವೇತನಕ್ಕಾಗಿ ಸರ್ಕಾರದಿಂದ ಬರುವ ಆದಾಯ, ಸರ್ಕಾರದಿಂದ ಇತರೆ ಅನುದಾನಗಳು ಸೇರಿದಂತೆ ಇತರೆ ಆದಾಯಗಳ ಮೂಲಗಳಿಂದ ಒಟ್ಟು ₹11.49 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.

ಪ್ರಮುಖ ಆದಾಯದ ಮೂಲಗಳು : • ಆಸ್ತಿ ತೆರಿಗೆ ₹1.61ಕೋಟಿ, • ಆಸ್ತಿ ತೆರಿಗೆ ದಂಡ ₹24 ಲಕ್ಷ, • ಖಾತೆ ಬದಲಾವಣೆ ಶುಲ್ಕ ₹4 ಲಕ್ಷ, • ಕಟ್ಟಡ ಮತ್ತು ನಿವೇಶನ ಆಸ್ತಿ ತೆರಿಗೆ ₹46. 40 ಲಕ್ಷ, • ಬ್ಯಾಂಕ್ ಖಾತೆಗಳಿಂದ ಬರುವ ಬಡ್ಡಿ ₹14 ಲಕ್ಷ, • ಘನತ್ಯಾಜ್ಯ ನಿರ್ವಹಣಾ ಶುಲ್ಕ ₹15 ಲಕ್ಷ

ಕೇಂದ್ರ, ರಾಜ್ಯ ಸರ್ಕಾರದ ಅನುದಾನ:

• ಎಸ್.ಎಫ್.ಸಿ ವೇತನ ಅನುದಾನ ₹ 3. 43 ಕೋಟಿ, • ಎಸ್.ಎಫ್.ಸಿ ವಿದ್ಯುತ್ ಅನುದಾನ ₹1.37 ಕೋಟಿ, • ಎಸ್.ಎಫ್.ಸಿ ಮುಕ್ತ ನಿಧಿ ₹54 ಲಕ್ಷ, • ಕಲ್ಯಾಣ ಕಾರ್ಯಕ್ರಮಗಳ ಅನುದಾನ ₹27 ಲಕ್ಷ, • ಘನತ್ಯಾಜ್ಯ ವಸ್ತು ನಿರ್ವಹಣೆ ಅನುದಾನ ₹ 2.2ಕೋಟಿ, • 15ನೇ ಹಣಕಾಸು ಹಾಗೂ ಇತರೆ ಸರಕಾರದ ಅನುದಾನ₹1.40 ಕೋಟಿ, • ಎಸ್.ಎಫ್‌ಸಿ ವಿಶೇಷ ಅನುದಾನ ₹ 2. 27ಕೋಟಿ, • ಘನತ್ಯಾಜ್ಯ ವಸ್ತು ನಿರ್ಮಾಣ ಘಟಕ ದ ಸ್ವಚ್ಚ ಭಾತರ್ ಮಿಷನ್ ಅನುದಾನ ₹12 ಲಕ್ಷ, ಕುಡಿಯುವ ನೀರು ಬರಪರಿಹಾರ₹ 6 ಲಕ್ಷ

ಪುರಸಭೆಯ 5 ಸದಸ್ಯರು ಗೈರಾಗಿದ್ದರೆ ಉಳಿದಂತೆ 18 ಜನ ಸದಸ್ಯರು ಬಜೆಟ್ ಮಂಡನೆಗೆ ಸಾಕ್ಷಿಯಾದರು. ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು

--ಬಾಕ್ಸ್--ಜಮಾ:• ಬಜೆಟ್ ಅಯವ್ಯಯದ ಪ್ರಾರಂಭಿಕ ಶುಲ್ಕ ₹11. 46 ಕೋಟಿ• ರಾಜಸ್ವ ಸ್ವೀಕೃತಿ ₹9.53 ಕೋಟಿ• ಬಂಡಾವಳ ಸ್ವೀಕೃತಿ ₹7.58 ಕೋಟಿ• ವಿಶೇಷ ವಸೂಲಾತಿ₹ 7.62 ಕೋಟಿಖರ್ಚು : • ರಾಜಸ್ವ ಪಾವತಿ ₹9.82 ಕೋಟಿ• ಬಂಡಾವಳ ಪಾವತಿ ₹7.26 ಕೋಟಿ• ವಿಶೇಷ ಪಾವತಿ ₹7.62 ಕೋಟಿ• ಅಂತಿಮ ಉಳಿತಾಯದ ಶುಲ್ಕ ₹3.84 ಲಕ್ಷ20 ಬೀರೂರು 1

ಬೀರೂರು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ವನಿತಾ ಬಾವಿಮನೆ ಮಧು ನೇತೃತ್ವದಲ್ಲಿ 2025-26ನೇ ಸಾಲಿನ ಅಯವ್ಯಯ ಮಂಡಿಸಿದರು. ಮುಖ್ಯಾಧಿಕಾರಿ ಜಿ.ಪ್ರಕಾಶ್ ಹಾಗೂ ಸದಸ್ಯರಿದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌