7ನೇ ಸ್ಥಾನ ಕಾಯ್ದಿರಿಸಿಕೊಂಡ ಬೀರೂರು ಶೈಕ್ಷಣಿಕ ವಲಯ

KannadaprabhaNewsNetwork |  
Published : Apr 24, 2026, 12:30 AM IST
2 ಬೀರೂರು 6ಧ್ವಿತೀಯ: ಭೂಮಿಕ 615ಕ್ರಮುಖ ಪ್ರೌಢ ಶಾಲೆ,ಬೀರೂರು. | Kannada Prabha

ಸಾರಾಂಶ

ಬೀರೂರು 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೀರೂರು ಶೈಕ್ಷಣಿಕ ವಲಯಕ್ಕೆಯೀ ಬಾರಿ ಶೇ.90.77 ಫಲಿತಾಂಶ ದೊರೆಯುವ ಮೂಲಕ ಕಳೆದ ಬಾರಿಯ ಶೇ 84 ರಷ್ಟು ಫಲಿತಾಂಶದಿಂದ ಏರಿಕೆ ಕಂಡಿದೆ.

ಸಖರಾಯಪಟ್ಟಣದ ಜಿ.ಜೆ.ಸಿ ಕಾಲೇಜಿನ ಹರ್ಷಿತ.ಪಿ.ಎಂ 616 ಅಂಕಗಳಿಸಿ ವಲಯಕ್ಕೆ ಅಗ್ರಸ್ಥಾನ

ಕನ್ನಡಪ್ರಭ ವಾರ್ತೆ, ಬೀರೂರು

2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೀರೂರು ಶೈಕ್ಷಣಿಕ ವಲಯಕ್ಕೆಯೀ ಬಾರಿ ಶೇ.90.77 ಫಲಿತಾಂಶ ದೊರೆಯುವ ಮೂಲಕ ಕಳೆದ ಬಾರಿಯ ಶೇ 84 ರಷ್ಟು ಫಲಿತಾಂಶದಿಂದ ಏರಿಕೆ ಕಂಡಿದೆ.

ಪರೀಕ್ಷೆ ಬರೆದ 1084 ವಿದ್ಯಾರ್ಥಿಗಳ ಪೈಕಿ 984 ಮಂದಿ ತೇರ್ಗಡೆಯಾಗಿದ್ದು, 100 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಸಖರಾಯಪಟ್ಟಣದ ಜಿಜೆಸಿ ಕಾಲೇಜಿನ ಹರ್ಷಿತ. ಪಿ.ಎಂ 616 ಅಂಕಗಳಿಸಿ ವಲಯಲ್ಲಿ ಅಗ್ರಸ್ಥಾನ ಪಡೆದರೆ, ಬೀರೂರಿನ ಕ್ರಮುಖ ಆಂಗ್ಲ ಮಾಧ್ಯಮ ಶಾಲೆ ಭೂಮಿಕ.ವೈ, 615 ಅಂಕ ಪಡೆದು ಧ್ವಿತೀಯ ಸ್ಥಾನ ಪಡೆದಿದ್ದಾರೆ. ಅದೇ ಶಾಲೆಯ ಗ್ರೀಷ್ಮಾ.ಬಿ.ಆರ್. 608 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಹ್ಹಾನುದ್ದೀನ್ ಚೋಪ್ದಾರ್ ತಿಳಿಸಿದರು.ಪರೀಕ್ಷೆ ಬರೆದ 490 ಬಾಲಕಿಯರು ಮತ್ತು 494 ಬಾಲಕರು ಉತ್ತೀರ್ಣರಾಗಿದ್ದು, ಈ ಬಾರಿ ಬಾಲಕರು ಮೇಲುಗೈ ಸಾಧಿಸಿದ್ದಾರೆ.17 ಸರ್ಕಾರಿ ಪ್ರೌಢ ಶಾಲೆಗಳಿಗೆ ಶೇ100 ಫಲಿತಾಂಶ:ಶೈಕ್ಷಣಿಕ ವಲಯದ 37 ಪ್ರೌಢಶಾಲೆಗಳಲ್ಲಿ ಶಾಲೆಗಳ ಪೈಕಿ 17 ಸರ್ಕಾರಿ ಪ್ರೌಢ ಶಾಲೆಗಳಿಗೆ ಶೇ100ರಷ್ಟು ಫಲಿತಾಂ ಶ ಗಳಿಸಿವೆ .ಫ್ರೌಢಶಾಲೆಗಳಾದ, ಜೋಡಿ ತಿಮ್ಮಾಪುರ, ಜೋಡಿ ಹೋಚಿಹಳ್ಳಿ, ಗುಬ್ಬಿಹಳ್ಳಿ, ಜಿಗಣೇಹಳ್ಳಿ, ಆಲಘಟ್ಟ, ಮಾಚ ಗೊಂಡನಹಳ್ಳಿ, ಎಸ್.ಬಿದರೆ, ಬಳ್ಳಾವರ, ಎಮ್ಮೆದೊಡ್ಡಿ ಶಾಲೆಗಳು ಶೇ100ರಷ್ಟು ಫಲಿತಾಂಶ ಗಳಿಸಿದರೆ, ಅನುದಾನ ರಹಿತ ಪ್ರೌಢಶಾಲೆಗಳಾದ ಬಳ್ಳಾವರದ ಸೆಂಟ್ ಜಾನ್ಸ್, ಬೀರೂರಿನ ಪರಿವರ್ತನ, ಕ್ರಮುಖ ಆಂಗ್ಲ ಪ್ರೌಢಶಾಲೆಗಳು ಶೇ100ರಷ್ಟು ಫಲಿತಾಂಶ ಗಳಿಸಿವೆ. ಉಳಿದಂತೆ ಅನುದಾನ ಸಹಿತ ಪ್ರೌಢ ಶಾಲೆಗಳಾದ ನಾಗೇನಹಳ್ಳಿ ಆಂಜನೇಯಸ್ವಾಮಿ ಪ್ರೌಡ ಶಾಲೆ, ಜೋಡಿ ಲಿಂಗದಹಳ್ಳಿ ಶಂಭುಲಿಂಗೇಶ್ವರ ಪ್ರೌಢ ಶಾಲೆಗಳು ಶೇ100ರಷ್ಟು ಫಲಿತಾಂಶ ಪಡೆದಿವೆ.ವಲಯದ 4 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪೈಕಿ ಜೋಡಿಹೋಚಿಹಳ್ಳಿ, ಜೋಡಿ ಲಿಂಗದಹಳ್ಳಿ, ಜೋಡಿಹೋಚಿಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳು ಶೇ100ರಷ್ಟು ಫಲಿತಾಂಶ ಗಳಿಸಿವೆ.ಶತತ ಶ್ರಮದಿಂದ ಉತ್ತಮ ಅಂಕ: ಹರ್ಷಿತ.ಪಿ.ಎಂ (616 ) ಸಖರಾಯಪಟ್ಟಣದ ಜಿಜೆಸಿ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಓದುತ್ತಿದ್ದ ಹರ್ಷಿತ.ಪಿ.ಎಂ ಶಾಲೆಯಲ್ಲಿ ಇನ್ನು ಪರೀಕ್ಷಾ ಸಮಯದ 3ತಿಂಗಳ ಮುಂಚೆಯೇ ನಮ್ಮ ಶಾಲೆಯಲ್ಲಿ ಶಿಕ್ಷಕರು ಮನೆಗಳಲ್ಲಿ ತಂದೆ ತಾಯಿಗಳು ವಿದ್ಯಾರ್ಥಿಗಳನ್ನು ಬೆಳಗ್ಗೆ ಬೇಗ ಎಬ್ಬಸಿ, ಓದಲು ಆರಂಬಿಸುವಂತೆ ಸೂಚಿಸುತ್ತಿದ್ದರು. ಜೊತೆಗೆ ರಾತ್ರಿ 12ಗಂಟೆ ಕೂಡ ಕಠಿಣ ಪ್ರಶ್ನೆಗಳ ಬಗ್ಗೆ ಹೆಚ್ಚು ಒತ್ತು ನೀಡಿ ಅಭ್ಯಾಸ ಮಾಡುವಂತೆ ತಿಳಿಸಿದ ಕಾರಣ ನನಗೆ 616 ಅಂಕ ಗಳಿಸಲು ಕಾರಣವಾಯಿತು. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪೋಷಕರಿಗೆ ಈ ಅಂಕ ಮಾದರಿಯಾಗಲಿ. ಉತ್ತಮ ಅಂಕ ಪಡೆಯಲು ಶ್ರಮಿಸಿದ ನನ್ನ ಶಾಲೆಯ ಎಲ್ಲಾ ಶಿಕ್ಷಕರಿಗೂ ಧನ್ಯವಾದಗಳು ಎನ್ನುತ್ತಾಳೆ . ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹೆಚ್ಚಿನ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಎಲ್ಲಾ ಪ್ರೌಢಶಾಲೆಗಳಿಗೂ ನಿಯಮಿತ ಭೇಟಿ ಮಾಡಿ, ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳು ಭಯ ಮುಕ್ತವಾಗಿ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ತುಂಬಲಾಗಿತ್ತು.ಎಲ್ಲಾ ಶಾಲೆಗಳಲ್ಲೂ ಪರೀಕ್ಷಾ ಕಾರ್ಯಗಾರ ನಡೆಸಲಾಗಿತ್ತು. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಫಲಿತಾಂಶ ದೊರೆತಿದೆ. ವಲಯದ ಎಲ್ಲಾ ಶಿಕ್ಷಕರು ಕೂಡ ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ್ದಾರೆ. ಶಿಕ್ಷಣಾಧಿಕಾರಿ ಬಹ್ಹಾನುದ್ದೀನ್ ಚೋಪ್ದಾರ್2 ಬೀರೂರು 5ಪ್ರಥಮ: ಹರ್ಷಿತ.ಪಿ.ಎಂ (616 ) ಜಿ.ಜೆ.ಸಿ,ಸಖರಾಯಪಟ್ಟಣ2 ಬೀರೂರು 6ಧ್ವಿತೀಯ: ಭೂಮಿಕ 615ಕ್ರಮುಖ ಪ್ರೌಢ ಶಾಲೆ,ಬೀರೂರು.2 ಬೀರೂರು7ತೃತೀಯ: ಗ್ರೀಷ್ಮಾ.ಬಿ.ಆರ್. 608ಕ್ರಮುಖ ಪ್ರೌಢ ಶಾಲೆ,ಬೀರೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗೀರಥ ಮಹರ್ಷಿಗಳ ದೃಢ ಪ್ರಯತ್ನ ಎಲ್ಲರಿಗೂ ಸ್ಫೂರ್ತಿ
ಕುಡಿವ ನೀರಿನ ಘಟಕ ದುರಸ್ತಿಗೆ ಬಂದ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗೆ ಗ್ರಾಮಸ್ಥರ ಅಡ್ಡಿ