ಬೀರೂರು ಪುರಸಭೆ ಅಧ್ಯಕ್ಷೆ ರಾಜೀನಾಮೆ ಅಂಗೀಕಾರ

KannadaprabhaNewsNetwork |  
Published : Jun 14, 2025, 12:48 AM IST
13ಬೀರೂರು1. | Kannada Prabha

ಸಾರಾಂಶ

ಬೀರೂರು, ಕಳೆದ 2024ರ ಆಗಸ್ಟ್ ತಿಂಗಳ 27ರಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಪುರಸಭೆ ಅಧ್ಯಕ್ಷೆ ಗಾಧಿಯನ್ನು ಬಿಜೆಪಿ ಹಿಡಿದು 21ನೇ ವಾರ್ಡಿನ ಟಿ.ಎಂ. ವನಿತಾಮಧು ಅವರನ್ನು 11 ತಿಂಗಳ ಅವಧಿಗೆ ಅಧ್ಯಕ್ಷೆಯಾಗಿ ಮಾಡಿತ್ತು. ಒಪ್ಪಂದಂತೆ ಬದ್ಧತೆಯಿಂದ ತರೀಕೆರೆ ಉಪವಿಭಾಗಾಧಿಕಾರಿಗೆ ಸಲ್ಲಿಸಿದ್ದ ರಾಜೀನಾಮೆ ಜೂ.13ರಂದು ಅಂಗೀಕಾರಗೊಂಡಿದೆ.

- 11 ತಿಂಗಳ ಅವಧಿ ಒಡಂಬಡಿಕೆ । ಯಾರಾಗಲಿದ್ದಾರೆ ಮುಂದಿನ ಅಧ್ಯಕ್ಷೆ?

ಕನ್ನಡಪ್ರಭ ವಾರ್ತೆ,ಬೀರೂರು.ಕಳೆದ 2024ರ ಆಗಸ್ಟ್ ತಿಂಗಳ 27ರಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಪುರಸಭೆ ಅಧ್ಯಕ್ಷೆ ಗಾಧಿಯನ್ನು ಬಿಜೆಪಿ ಹಿಡಿದು 21ನೇ ವಾರ್ಡಿನ ಟಿ.ಎಂ. ವನಿತಾಮಧು ಅವರನ್ನು 11 ತಿಂಗಳ ಅವಧಿಗೆ ಅಧ್ಯಕ್ಷೆಯಾಗಿ ಮಾಡಿತ್ತು. ಒಪ್ಪಂದಂತೆ ಬದ್ಧತೆಯಿಂದ ತರೀಕೆರೆ ಉಪವಿಭಾಗಾಧಿಕಾರಿಗೆ ಸಲ್ಲಿಸಿದ್ದ ರಾಜೀನಾಮೆ ಜೂ.13ರಂದು ಅಂಗೀಕಾರಗೊಂಡಿದೆ.ಬೀರೂರು ಪುರಸಭೆ 2ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಸಾಮಾನ್ಯ ಮಹಿಳೆಯನ್ನು ಮೀಸಲಿರಿಸಿತ್ತು. ಅದರಂತೆ ಚುನಾವಣೆ ಕಾವು ಪಡೆದು ಬಿಜೆಪಿ, ಕಾಂಗ್ರೆಸ್ ತೆಕ್ಕೆಗೆ ಅಧಿಕಾರ ನೀಡಬಾರದು ಎಂದು ಪ್ರತಿತಂತ್ರ ಮಾಡಿ ಜೆಡಿಎಸ್ ಸದಸ್ಯರನ್ನು ಮೈತ್ರಿ ಮಾಡಿಕೊಂಡು ಅಧ್ಯಕ್ಷೆ ಸ್ಥಾನ ಗಿಟ್ಟಿಸಿಕೊಂಡಿತ್ತು.ನಂತರ ಅಧ್ಯಕ್ಷೆ ವನಿತಾಮಧು ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿದು ವಿವಾಧಿತ ಪುರಸಭೆ ವಾಣಿಜ್ಯ ಮಳಿಗೆ, ಮಾಂಸ ಮಾರಾಟ ಮಳಿಗೆ ಹರಾಜು, ಪ್ರತಿ ವಾರ್ಡಿಗೆ ನೀಡಬೇಕಾದ ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ , ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಾರ್ಗದ ಕ್ಯಾಂಪ್ ನೂತನ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಮತ್ತು 4ಕೋಟಿಗಿಂತ ಅಧಿಕ ಮೊತ್ತದ ಘನತ್ಯಾಜ್ಯ ವಿಲೆವಾರಿ ಮತ್ತು ನಿರ್ವಹಣ ಘಟಕ ಕಾಮಗಾರಿ, ಕಡೂರು-ಬೀರೂರಿನ ಭದ್ರಾ ಕುಡಿಯುವ ನೀರನ್ನು ಸಮರ್ಪಕವಾಗಿ ನೀಡಿ ಜನಸ್ನೇಹಿ ಆಡಳಿತ ದಿಂದ ಉತ್ತಮ ಹೆಸರು ಗಳಿಸಿದ್ದರು.-- ಬಾಕ್ಸ್--

ಚುನಾವಣೆಯಲ್ಲಿ ಯಾರಿಗೆ ಒಲಿಯಲಿದೆ ಅಧ್ಯಕ್ಷೆ ಗಾದಿ ಸದ್ಯ ಜೆಡಿಎಸ್ ಪಕ್ಷದ ಮಹಿಳಾ ಅಧ್ಯಕ್ಷರ ಅವಧಿ ಮುಗಿದಿದ್ದು, ಬಿಜೆಪಿ ಮುಂಚೂಣಿಯಲ್ಲಿ 3ನೇ ವಾರ್ಡಿನ ಶಾರದ ರುದ್ರಪ್ಪ, 17ನೇ ವಾರ್ಡನ ಭಾಗ್ಯಲಕ್ಷ್ಮಿ ಮೋಹನ್, 20ನೇ ವಾರ್ಡನ ಸುಮಿತ್ರ ಕೃಷ್ಣಮೂರ್ತಿ, ಮೀನಾಕ್ಷಮ್ಮ, ಸಹನಾ ವೆಂಕಟೇಶ್ ಅಧ್ಯಕ್ಷಗಾಧಿ ರೇಸಿನಲ್ಲಿದ್ದಾರೆ.

-- ಕೋಟ್--

ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯುವವರೆಗೂ ಉಪಾಧ್ಯಕ್ಷ ಎನ್.ಎಂ.ನಾಗರಾಜ್ ಪ್ರಭಾರಿ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಇದೆ. ಕಳೆದ 10ದಿನಗಳ ಹಿಂದೆ ಬೀರೂರು ಪುರಸಭೆ ಅಧ್ಯಕ್ಷೆ ವನಿತಾ ಮಧು ತಮ್ಮಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ರಾಜೀನಾಮೆ ಅಂಗೀಕರಿಸಲಾಗಿದೆ. ತೆರವಾದ ಅಧ್ಯಕ್ಷ ಸ್ಥಾನಕ್ಕೆ‌ ಕಡೂರು ತಹಸೀಲ್ದಾರ್ ಚುನಾವಣಾ ದಿನಾಂಕ ನಿಗಧಿಪಡಿಸಲಿದ್ದಾರೆ. ಡಾ.ಕೆ.ಜೆ.ಕಾಂತರಾಜ್, ಉಪವಿಭಾಗಾಧಿಕಾರಿ ತರೀಕೆರೆ.

--

ಕಳೆದ 11 ತಿಂಗಳ ಅವಧಿಗೆ ಅಧ್ಯಕ್ಷರಾಗಲು ಸಹಕರಿಸಿದ ಮಾಜಿ ಶಾಸಕ ಬೆಳ್ಳಿಪ್ರಕಾಶ್, ವೈ.ಎಸ್.ವಿ.ದತ್ತ ಹಾಗೂ ಮೈತ್ರಿ ಪಕ್ಷದ ಎಲ್ಲಾ ಸದಸ್ಯರಿಗೂ ಕೃತಜ್ಞತೆ. ಸಿಕ್ಕ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ ಆತ್ಮತೃಪ್ತಿ ಇದೆ. ಶಾಸಕ ಆನಂದಣ್ಣ ಸಹಕಾರ ನೀಡಿದ್ದಾರೆ.

- ವನಿತಾ ಮಧು ಬಾವಿಮನೆ,

ಮಾಜಿ ಅಧ್ಯಕ್ಷೆ, ಪುರಸಭೆ13 ಬೀರೂರು 1ಬೀರೂರಿನ ಪುರಸಭೆ ಅಧ್ಯಕ್ಷೆ ವನಿತಮಧು ಬಾವಿಮನೆ ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಗೆ ಕಳೆದ ಜೂ.2ರಂದು ರಾಜೀನಾಮೆ ಸಲ್ಲಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ