ಬಡವರ್ಗಕ್ಕೆ ನೆರವಾಗುವುದು ಶ್ಲಾಘನೀಯ: ನಳಿನ್‌ ಕುಮಾರ್‌ ಕಟೀಲ್‌

KannadaprabhaNewsNetwork |  
Published : Jun 05, 2025, 02:05 AM IST
ಬಿರುವೆರ್‌ ಕುಡ್ಲ-ಕಾರುಣ್ಯಸೇತು ಫೌಂಡೇಷನ್‌ ಸೇವಾ ಯೋಜನೆಗೆ ಚಾಲನೆ ನೀಡಿದ ಸಂದರ್ಭ  | Kannada Prabha

ಸಾರಾಂಶ

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಬಿರುವೆರ್‌ ಕುಡ್ಲ ಸ್ಪಂದನಾ ಹಾಗೂ ನೂತನ ಕಾರುಣಸೇತು ಫೌಂಡೇಷನ್‌ ಜತೆಗೂಡಿ ಸುಮಾರು 5 ಲಕ್ಷ ರು. ಮೊತ್ತದ ನೆರವನ್ನು ಹಾಗೂ ಕೃತಕ ಕಾಲುಜೋಡಣಾ ಸೌಲಭ್ಯವನ್ನು ವಿತರಿಸುವ ಕಾರ್ಯಕ್ರಮದಲ್ಲಿಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಫಲಾನುಭವಿಗಳಿಗೆ ಸೌಲಭ್ಯ ಹಸ್ತಾಂತರಿಸಿದರು.

ಬಿರುವೆರ್‌ ಕುಡ್ಲ -ಕಾರುಣ್ಯಸೇತು ಫೌಂಡೇಷನ್‌ ಜಂಟಿ ಸೇವಾ ಯೋಜನೆಗೆ ಚಾಲನೆ

ಕನ್ನಡಪ್ರಭ ವಾರ್ತೆ ಮಂಗಳೂರು

ಮಹಾನ್‌ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳು ಸಂಘಟನೆಯ ಮೂಲಕ ಒಗ್ಗಟ್ಟಾಗಿ ಬೆಳೆಯಿರಿ ಎಂಬ ಸಂದೇಶದಂತೆ ಉದಯಪೂಜಾರಿ ಬಳ್ಳಾಲ್‌ಬಾಗ್‌ ನೇತೃತ್ವದ ಸ್ನೇಹಿತರ ಬಳಗವು ಬಿರುವೆರ್‌ ಕುಡ್ಲ ಸಂಸ್ಥೆಯ ಸಮಾಜದಲ್ಲಿ ಶಕ್ತಿಯುತವಾಗಿ ಬೆಳೆದು ಆಶಕ್ತರಿಗೆ ಬಲತುಂಬುವ ಕೆಲಸ ಮಾಡುತ್ತಿದೆ. ಇದರೊಂದಿಗೆ ಸ್ವಸ್ಥಿಕ್‌ ಆರ್ಯ ಅವರು ಕಾರುಣ್ಯ ಸೇತು ಫೌಂಡೇಷನ್‌ ಮೂಲಕ ಜತೆಗೂಡಿ ಇದೀಗ ಬಡವರ್ಗದ ನೆರವಿಗೆ ಧಾವಿಸಿರುವುದು ಶ್ಲಾಘನೀಯ ಎಂದು ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಬಿರುವೆರ್‌ ಕುಡ್ಲ ಸ್ಪಂದನಾ ಹಾಗೂ ನೂತನ ಕಾರುಣಸೇತು ಫೌಂಡೇಷನ್‌ ಜತೆಗೂಡಿ ಸುಮಾರು 5 ಲಕ್ಷ ರು. ಮೊತ್ತದ ನೆರವನ್ನು ಹಾಗೂ ಕೃತಕ ಕಾಲುಜೋಡಣಾ ಸೌಲಭ್ಯವನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಫಲಾನುಭವಿಗಳಿಗೆ ಸೌಲಭ್ಯ ಹಸ್ತಾಂತರಿಸಿ ಮಾತನಾಡಿದರು.ಶಾಸಕರಾದ ಡಾ.ಭರತ್‌ ಶೆಟ್ಟಿ, ಹರೀಶ್‌ ಪೂಂಜಾ, ಶ್ರೀ ಗೋಕರ್ಣನಾಥ ಕ್ಷೇತ್ರದ ಮೊಕ್ತೇಸರ ಎಚ್‌.ಎಸ್‌ ಸಾಯಿರಾಮ್‌, ಕೋಶಾಧಿಕಾರಿ ಪದ್ಮರಾಜ್‌ ಆರ್‌., ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಶುಭಹಾರೈಸಿದರು.

ಸಹನ ಕುಂದರ್‌ ಸೂಡಾ ಪ್ರಸ್ತಾವಿಕ ಮಾತನಾಡಿದರು. ವಿವಿಧ ವೈದಕೀಯ ಸಲಕರಣೆಗಳನ್ನು ವಿತರಿಸಲಾಯಿತು.

ಬಿರುವೆರ್‌ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್‌ಪೂಜಾರಿ ಬಳ್ಳಾಲ್‌ಬಾಗ್‌, ಕಾರುಣ್ಯ ಸೇತು ಫೌಂಡೇಷನ್‌ ಸ್ಥಾಪಕರಾದ ಸ್ವಸ್ಥಿಕ್‌ ಆರ್ಯ, ಬಿರುವರ್‌ ಕುಡ್ಲ ಅಧ್ಯಕ್ಷ ರಾಕೇಶ್‌ ಪೂಜಾರಿ, ಜಿತೇಶ್‌ ಜೈನ್‌, ದರ್ಶನ್‌ ಜೈನ್‌, ಬೋಳೂರು ಮೊಗವೀರ ಸಭಾ ಅಧ್ಯಕ್ಷರು ಯಶವಂತ್‌ ಮೆಂಡನ್‌ ಬೋಳೂರು, ಪ್ರವೀಣ್‌ ಬಗಂಬಿಲ, ಬಿಜೆಪಿ ಮುಖಂಡ ವಸಂತ ಜೆ. ಪೂಜಾರಿ ಮತ್ತಿತರರಿದ್ದರು.

............ಒಟ್ಟು 10 ಕೋಟಿ ರು.ಗೂ ಹೆಚ್ಚು ನೆರವು

ಒಟ್ಟು 10 ಕೋಟಿ ರು.ಗೂ ಹೆಚ್ಚು ಮೊತ್ತವನ್ನು ಅಶಕ್ತ ಕುಟುಂಬಗಳ ಸಹಾಯಕ್ಕಾಗಿ ನೀಡಿದೆ. ಮನೆ ನಿರ್ಮಾಣ ಮಾತ್ರವಲ್ಲದೆ ಪ್ರತಿ ತಿಂಗಳು ಒಬ್ಬೊಬ್ಬ ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ 50 ಸಾವಿರ ರು. ಧನ ಸಹಾಯ ನೀಡುತ್ತಾ ಬಂದಿದೆ. ಇದರ ಜೊತೆ ಉಚಿತ ಆಂಬುಲೆನ್ಸ್‌ ಸೇವೆಯನ್ನು ಒದಗಿಸುತ್ತಿದೆ. ಈ ಸಂಘಟನೆಯಲ್ಲಿ ಮೂರು ಜಿಲ್ಲೆಯಲ್ಲಿ ಒಟ್ಟು 24 ಘಟಕಗಳಿದ್ದು ಇದರ ಸದಸ್ಯರೆಲ್ಲ ಒಟ್ಟು ಸೇರಿ ಸೇವಾ ಯೋಜನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶದಡಿ ಈ ಯುವಕರ ತಂಡ ಸೇವೆ ಮಾಡುತ್ತಿದೆ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ