ಕನ್ನಡಪ್ರಭ ವಾರ್ತೆ ಸಿದ್ದಾಪುರ
ನಂತರ ಮಾತನಾಡಿದ ಶಾಸಕರು, ಹಲವಾರು ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ತಣಲ್ ಸಂಸ್ಥೆಯ ಕಾರ್ಯವೈಖರಿ ಎಲ್ಲರಿಗೂ ಮಾದರಿ ಹಾಗೂ ಶ್ಲಾಘನೀಯ ಎಂದರು.
ತಣಲ್ ಸಂಸ್ಥೆಯು ಕೈಗೊಳ್ಳುತ್ತಿರುವ ಹಲವಾರು ಕಾರ್ಯಕ್ರಮಗಳು ಇಂದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದು, ಇದರಿಂದ ಎಲ್ಲರೂ ಇಂತಹ ಕಾರ್ಯಕ್ರಮಗಳನ್ನು ಮಾಡಲು ಪ್ರೇರೇಪಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಕೀಲ ಎಂ ಎಸ್ ವೆಂಕಟೇಶ್, ಎಸ್ ಎನ್ ಡಿ ಪಿ ಯೂನಿಯನ್ ಅಧ್ಯಕ್ಷ ವಿ ಕೆ ಲೋಕೇಶ್, ಸಿದ್ದಾಪುರ ವಲಯ ಅಧ್ಯಕ್ಷರು ಪ್ರತೀಶ್, ಸಿದ್ದಾಪುರ ಧರ್ಮ ಗುರುಗಳು, ಪಂಚಾಯಿತಿ ಉಪಾಧ್ಯಕ್ಷರು ಪಳನಿ ಸ್ವಾಮಿ, ಸದಸ್ಯರು ದೇವಯಾನಿ ಸೇರಿದಂತೆ ತಣಲ್ ಸಂಸ್ಥೆಯ ಪ್ರಮುಖರು ಸಾರ್ವಜನಿಕರು ಇದ್ದರು.