ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬುದ್ಧ, ಬಸವ, ಅಂಬೇಡ್ಕರ್ ಅವರ ಸಿದ್ದಾಂತ, ನಿಲುವು, ಗುರಿ ಒಂದೇ ಆಗಿದ್ದವು. ಅವರ ನಿಲುವು ಮತ್ತು ಗುರಿ ಸುಖಿ ರಾಜ್ಯದ ಸ್ಥಾಪನೆ ಹಾಗೂ ಸಮ ಸಮಾಜದ ನಿರ್ಮಾಣವೇ ಆಗಿತ್ತು. ಇದು ಈ ಮೂರು ಮಹಾ ನಾಯಕರ ಸಿದ್ಧಾಂತ ಹಾಗೂ ತತ್ವಗಳಾಗಿದ್ದವು ಎಂದರು. ಸಾರ್ವಜನಿಕ ಮಹತ್ವ ಹಾಗೂ ಪಾವಿತ್ರ್ಯತೆ ಗೊತ್ತಿಲ್ಲದವರು ಬದ್ಧತೆ ಹಾಗೂ ನೀತಿ ಇಲ್ಲದವರ ಕೈಯಲ್ಲಿ ರಾಜಕೀಯ ಅಧಿಕಾರವನ್ನು ಕೊಟ್ಟರೆ ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಕಿಂಚಿತ್ತುಬೆಲೆ ಕೊಡಲಾರರು, ಆ ದಿಕ್ಕಿನಲ್ಲಿ ಕೆಲಸ ಮಾಡಲಾರರು ಎಂದರು. ಅಂಬೇಡ್ಕರ್ ಅವರ ದೇಶದ ಅನರ್ಘ್ಯ ರತ್ನ ಅವರ ಸಂವಿಧಾನವನ್ನು ಯಥಾವತ್ತಾಗಿ ಇಡೀ ಭಾರತ ರಾಜಕೀಯ ವ್ಯವಸ್ಥೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯರ ಪಾಲಿಗೆ ಡಾ.ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ಧಾಂತ ಸಾರ್ವಕಾಲಿಕವಾದದ್ದು. ಇಂದು ಎಲ್ಲ ಧರ್ಮ, ಎಲ್ಲ ಸಮುದಾಯದ ಸರ್ವರಿಗೂ ಮೀಸಲಾತಿ ಸಿಗುವ ಅವಕಾಶವನ್ನು ಸಂವಿಧಾನದ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಅವರು ಮಾಡಿಕೊಟ್ಟಿದ್ದಾರೆ ಎಂದರು. ಇಂದು ಎಲ್ಲ ವರ್ಗದ ಜನರು ಜನಸಂಖ್ಯೆ ಆಧಾರದ ಮೇಲೆ ತಾವು ಹೆಚ್ಚು ಎನ್ನುವ ಭಾವನೆಯಿಂದ, ಪರಸ್ಪರ ಮೀಸಲಾತಿಯನ್ನು ಹೆಚ್ಚಳ ಮಾಡಿಕೊಳ್ಳುವ ವಿಚಾರದಲ್ಲಿ ಪೈಪೋಟಿಯಲ್ಲಿ ಇದ್ದಾರೆ.ಆದರೆ, ಯಾರೂ ಸಹ ಈ ಮೀಸಲಾತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಸಂವಿಧಾನದ ಮೂಲಕ ನಮಗೆ ದೊರೆತಿದೆ ಎನ್ನುವ ಭಾವನೆಗಳನ್ನು ಹೊಂದಿಲ್ಲ. ಸರ್ಕಾರದ ಸವಲತ್ತುಗಳನ್ನು ಹಾಗೂ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಅಂಬೇಡ್ಕರ್ ಅವರು ನೀಡಿರುವ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಬೇಡ್ಕರ್ ಅವರ ವಿಚಾರಧಾರೆಗಳು ಬಂದಾಗ ಯಾರೂ ಸಹ ಅವರಿಗೆ ಗೌರವ ಪೂರಕವಾದ ನಿಟ್ಟಿನಲ್ಲಿ ನಡೆದುಕೊಳ್ಳುವ ರೀತಿ ಇಲ್ಲವಾಗಿದ್ದಾರೆ ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಕೆ.ಎಂ.ನಾಗರಾಜು ಪ್ರಾಸ್ತಾವಿಕ ಭಾಷಣ ಮಾಡಿದರು. ಟಿ.ನರಸೀಪುರ ನಳಂದ ಬುದ್ದ ವಿಹಾರ ಬೋಧಿರತ್ನ ಬಂತೇಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಗ್ರಾಪಂ ಅಧ್ಯಕ್ಷ ಕೆ.ಸಿ.ನಾಗರಾಜು, ಜಿಪಂ ಮಾಜಿ ಉಪಾಧ್ಯಕ್ಷ ಯೋಗೇಶ್, ಯಳಂದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಜೇಂದ್ರ, ಎಎಸ್ಪಿ ಶಶಿಧರ್, ಸಮಾಜ ಸೇವಕ ದುಗ್ಗಟಿ ವೀರಭದ್ರಪ್ಪ, ರೈತ ಸಂಘದ ಮುಖಂಡ ಮಹೇಶ್ ಪ್ರಭ, ಹೆಗ್ಗವಾಡಿ ಮಹೇಶ್ ಕುಮಾರ್, ಮುಖಂಡರಾದ ಕಂದಹಳ್ಳಿ ನಂಜುಂಡ ಸ್ವಾಮಿ, ಪುಟ್ಟಸ್ವಾಮಿ, ಗ್ರಾಪಂ ಸದಸ್ಯರಾದ ಎಸ್. ಮಹಾದೇವಸ್ವಾಮಿ, ಎ.ಪ್ರಕಾಶ್, ಯಜಮಾನರಾದ ಕೆ.ಎಂ.ನಾಗರಾಜು, ನಂಜಯ್ಯ, ಮಲ್ಲಯ್ಯ, ಮೈಸೂ ರು ಡಿಎಸ್ ಎಸ್ ಸಂಚಾಲಕ ಕೆ.ವಿ.ದೇವೇಂದ್ರ, ಜೈಭೀಮ್ ಮಹಾಪುರುಷ ಯುವಕರ ಸಂಘದ ಎನ್.ರಾಜೇಶ್ ಇತರರು ಹಾಜರಿದ್ದರು.