ಕನ್ನಡಪ್ರಭ ವಾರ್ತೆ ಧಾರವಾಡ
ಬಿಜೆಪಿ ಸರ್ಕಾರ ಬಹಳಷ್ಟು ಸಂಖ್ಯೆಯಲ್ಲಿ ಟೆಂಡರ್ ಕರೆದಿತ್ತು. ಆದರೆ, ಬೊಕ್ಕಸದಲ್ಲಿ ಹಣವೇ ಇದ್ದಿರಲಿಲ್ಲ. ಹೀಗಾಗಿ, ಟೆಂಡರ್ ಕರೆದ ಕಾಮಗಾರಿಗಳಿಗೆ ಈಗ ಸಮಸ್ಯೆಯಾಗಿದೆ. ಅವುಗಳ ಪೈಕಿ ಮಹತ್ವದ ಕಾಮಗಾರಿಗಳನ್ನು ಗಮನಿಸಿ ಮಂಜೂರಾತಿ ನೀಡುತ್ತಿದ್ದೇವೆ. ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾತಿ ನೀಡಲಿದ್ದೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವಿವಸಿದರು.ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಎಟಿಎಂ ಮಾಡಿಕೊಂಡಿದೆ ಎಂಬ ಆರೋಪಕ್ಕೆ ಸಚಿವ ಲಾಡ್, ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅವರೇ ಅಧಿಕಾರದಲ್ಲಿದ್ದಾರೆ. ಅವರು ಹೇಳುವ ಪ್ರಕಾರ ಕೇಂದ್ರ ಸರ್ಕಾರವೂ ಪೇಟಿಎಂ ಸರ್ಕಾರ ಅಲ್ವಾ? ಚುನಾವಣೆ ಬಂದಾಗ ರಾಜಕೀಯ ಆರೋಪ ಮಾಡಿಯೇ ಮಾಡುತ್ತಾರೆ ಎಂದರು.
ಸತೀಶ ಜಾರಕಿಹೊಳಿ ಶಾಸಕರೊಂದಿಗೆ ಪ್ರವಾಸ ಹೋಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ಸಂಘಟನೆಗಾಗಿ ಅವರು ಹೋಗಿರಬಹುದು. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಹೋಗಿರಬಹುದು. ಈ ಬಗ್ಗೆ ಹೆಚ್ಚು ಮಾಹಿತಿ ಇಲ್ಲ ಎಂದರು.ಬಿಜೆಪಿಯಿಂದ ಕತ್ತಲೆ ಭಾಗ್ಯ ಆರೋಪ ವಿಚಾರವಾಗಿ ಇಡೀ ಕರ್ನಾಟಕದಾದ್ಯಂತ ವಿದ್ಯುತ್ ಕೊರತೆ ಇದೆ. ವಾತಾವರಣ ಬದಲಾವಣೆಯಿಂದ ಹೀಗಾಗಿದೆ. ಸರ್ಕಾರ ಕಷ್ಟಪಟ್ಟು ವಿದ್ಯುತ್ ನೀಡುತ್ತಿದೆ. ಮುಂದೆ ವಿದ್ಯುತ್‌ಚ್ಛಕ್ತಿ ಹೆಚ್ಚಾದಾಗ ಸರಿದೂಗಿಸುತ್ತೇವೆ ಎಂದರು.