ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯಿಂದ ಮತದಾನ

KannadaprabhaNewsNetwork |  
Published : May 08, 2024, 01:02 AM ISTUpdated : May 08, 2024, 01:03 AM IST
ಕುಳವೆ-ಬರೂರು ಜನತಾ ವಿದ್ಯಾಲಯದಲ್ಲಿ ಮತ ಚಲಾಯಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ | Kannada Prabha

ಸಾರಾಂಶ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಾಲೂಕಿನ ಕುಳವೆ-ಬರೂರು ಜನತಾ ವಿದ್ಯಾಲಯದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಾಲೂಕಿನ ಕುಳವೆ-ಬರೂರು ಜನತಾ ವಿದ್ಯಾಲಯದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ಬರೂರಿನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪತ್ನಿ ಹಾಗೂ ಮೂವರು ಪುತ್ರಿಯರೊಂದಿಗೆ ಬೆಳಗ್ಗೆ ೧೧ ಗಂಟೆ ಸುಮಾರಿಗೆ ಮತಗಟ್ಟೆಗೆ ಆಗಮಿಸಿದ ಅವರು, ಮತಗಟ್ಟೆ ಸಂಖ್ಯೆ ೧೨೭ರಲ್ಲಿ ತಮ್ಮ ಮತ ಚಲಾಯಿಸಿದರು.

ನಂತರ ಮಾಧ್ಯಮದವರ ಜತೆ ಮಾತನಾಡಿದ ಕಾಗೇರಿ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಸಂವಿಧಾನ ಶಿಲ್ಪಿ ಹಾಗೂ ಸಂವಿಧಾನದ ರಚನಾ ಸಮಿತಿ ಸದಸ್ಯರ ಫಲವಾಗಿ ನಮ್ಮ ದೇಶದಲ್ಲಿ ಶ್ರೇಷ್ಠ ಮತ್ತು ಅತ್ಯುತ್ತಮ ಸಂವಿಧಾನ ಲಭ್ಯವಾಗಿದೆ. ಈ ಸಂವಿಧಾನದ ಆಶಯದಂತೆ ೫ ವರ್ಷಗಳಿಗೊಮ್ಮೆ ಚುನಾವಣೆಯಲ್ಲಿ ಶಾಸಕಾಂಗ ವ್ಯವಸ್ಥೆ ಬಲಪಡಿಸುವಂತೆ ನಾವೆಲ್ಲರೂ ತಪ್ಪದೇ ಮತ ಚಲಾಯಿಸಬೇಕು ಎಂದರು.

ಚುನಾವಣಾ ಆಯೋಗದ ಸತತ ಪರಿಶ್ರಮದಿಂದ ಚುನಾವಣೆಯು ಅತ್ಯುತ್ತಮವಾಗಿ ಮತ್ತು ಜಗತ್ತಿಗೆ ಮಾದರಿಯಾಗಿ ನಡೆಯುತ್ತಿದೆ. ಲೋಕಸಭೆಯಲ್ಲಿ ಸುಮಾರು ೧೦೦ ಕೋಟಿ ಮತದಾರರಿದ್ದು, ದೇಶದಲ್ಲಿ ಚುನಾವಣೆ ಬಹಳ ದೊಡ್ಡ ಹಬ್ಬವಾಗಿದ್ದು, ಉತ್ಸವದ ರೀತಿಯಲ್ಲಿ ಸಂಭ್ರಮದ ವಾತಾವರಣದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಪಾಲ್ಗೊಂಡಿದ್ದಾರೆ ಎಂದು ಹೇಳಿದರು.

ಕಿತ್ತೂರ, ಖಾನಾಪುರ ಒಳಗೊಂಡ ಉತ್ತರ ಕನ್ನಡ ಕ್ಷೇತ್ರದ ಉದ್ದಗಲದಲ್ಲಿ ಮೂರ್ನಾಲ್ಕು ಬಾರಿ ಪ್ರವಾಸ ಮಾಡಿದ್ದೇನೆ. ಅಭೂತಪೂರ್ವ ಜನ ಬೆಂಬಲ ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಕಾಲಿಟ್ಟ ಮೇಲೆ ಜನರಲ್ಲಿ ಹೊಸ ಸಂಚಲನ ಮೂಡಿಸಿದೆ. ನಮ್ಮ ಕಾರ್ಯಕರ್ತರಲ್ಲಿ ಮತ್ತು ಮುಖಂಡರಲ್ಲಿ ಬಿಜೆಪಿ ದಾಖಲೆಯ ಮತಗಳ ಗೆಲುವಿನ ವಿಶ್ವಾಸ ಬಂದಿದೆ. ಕಾರ್ಯಕರ್ತರಿಗೆ ಉತ್ಸಾಹ ಮತ್ತು ಪ್ರೇರಣೆ ಸಿಕ್ಕಿದೆ. ಮೂರನೆಯ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬುದನ್ನು ಸಾರ್ವತ್ರಿಕವಾಗಿ ಕಾಣುತ್ತಿದ್ದೇವೆ ಎಂದು ಹೇಳಿದರು.

ಕುಳವೆ ಗ್ರಾಪಂ ಅಧ್ಯಕ್ಷೆ ರಂಜಿತಾ ಹೆಗಡೆ, ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ, ಪ್ರಮುಖರಾದ ಗಣಪತಿ ಶೇಟ್ ಕಾಗೇರಿ, ವಿನಯ ಭಟ್ಟ, ನಾಗರಾಜ ಶೆಟ್ಟಿ, ಸುದರ್ಶನ ಹೆಗಡೆ ಕಾಗೇರಿ ಮತ್ತಿತರರು ಇದ್ದರು.

ಕುಟುಂಬದೊಂದಿಗೆ ಮತದಾನ: ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ನಿ ಭಾರತಿ ಹೆಗಡೆ, ಪುತ್ರಿಯರಾದ ಜಯಲಕ್ಷ್ಮೀ ಹೆಗಡೆ, ರಾಜಲಕ್ಷ್ಮೀ ಹೆಗಡೆ ಹಾಗೂ ಶ್ರೀಲಕ್ಷ್ಮೀ ಹೆಗಡೆ ಮತ ಚಲಾಯಿಸುವ ವೇಳೆ ಸಾಥ್ ನೀಡಿದರು.ಮೊದಲ ಬಾರಿಗೆ ಮತ ಚಲಾಯಿಸಿದ ಪುತ್ರಿ: ಕಾಗೇರಿ ಅವರ ತೃತೀಯ ಪುತ್ರಿ ಶ್ರೀಲಕ್ಷ್ಮೀ ಹೆಗಡೆ ಕುಳವೆ-ಬರೂರು ಜನತಾ-ವಿದ್ಯಾಲಯ ಮತಗಟ್ಟೆಗೆ ಆಗಮಿಸಿ, ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಿ, ಮತದಾನದ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಖುಷಿಪಟ್ಟಳು.ಮತದಾರರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ. ಕಾರ್ಯಕರ್ತರ, ಮುಖಂಡರ ಸತತ ಪರಿಶ್ರಮದಿಂದ ಬಿಜೆಪಿಯು ವಿಜಯಪತಾಕಿ ಹಾರಿಸಲಿದೆ. ಅಭಿವೃದ್ಧಿಯೇ ನನ್ನ ಮೊದಲ ಗುರಿ ಮತ್ತು ಆದ್ಯತೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ