ರಟ್ಟೀಹಳ್ಳಿ: ಆ. 17ರಂದು ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆ 15 ವಾರ್ಡ್‌ಗಳ ಮುಖಂಡರ ಹಾಗೂ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಸಿದ್ದು, ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ 15 ವಾರ್ಡ್‌ಗಳಲ್ಲೂ 5- 6 ಆಕಾಂಕ್ಷಿಗಳು ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದು, ಅಲ್ಲಿನ ಮುಖಂಡರೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿ ಕಳಿಸಿದರೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಆಗ ಉಳಿದೆಲ್ಲ ಅಭ್ಯರ್ಥಿಗಳು ಬಿಜೆಪಿ ಮುಖಂಡರ ಆಯ್ಕೆಗೆ ಮನ್ನಣೆ ನೀಡಿ ಎಲ್ಲರೂ ಒಗ್ಗಟ್ಟಿನಿಂದ ಅಭ್ಯರ್ಥಿ ಪರ ಕೆಲಸ ಮಾಡಿ 15 ವಾರ್ಡ್‌ಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತ ಕಾರ್ಯವಾಗಬೇಕು ಎಂದರು.ಪಟ್ಟಣದ ಪ್ರಗತಿಗಾಗಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಅವುಗಳೇ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿವೆ. 110 ಕಿಲೋ ವ್ಯಾಟ್ ಗ್ರಿಡ್ ನಿರ್ಮಾಣ, ರಟ್ಟೀಹಳ್ಳಿಯನ್ನು ತಾಲೂಕನ್ನಾಗಿ ಮಾಡಿದ್ದೇನೆ, ಕಾರ್ಮಿಕರ ಭವನ, ಫೈರ್ ಎಂಜಿನ್ ಆಫೀಸ್, ಕೃಷಿ ಕಚೇರಿ, ಪ್ರವಾಸಿಮಂದಿರ, ರಾಷ್ಟ್ರೀಯ ಹೆದ್ದಾರಿ ಹೀಗೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ನನ್ನ ಅವಧಿಯಲ್ಲಿ ಮಾಡಲಾಗಿದೆ. ಕೃಷಿ ಇಲಾಖೆಯ 28 ಎಕರೆ ಜಾಗ ಅನ್ಯರ ಪಾಲಾಗುತ್ತಿದ್ದ ಸಂದರ್ಭದಲ್ಲಿ ಹೋರಾಡಿ ಸರ್ಕಾರದ ಆಸ್ತಿ ಉಳಿಸಲಾಗಿದೆ ಎಂದರು.ಸರ್ವರ ಏಳಿಗೆಗೆ ಶ್ರಮಿಸುವೆ: ಶಾಸಕ ಪಠಾಣ
ಸವಣೂರು: ನಾನು ಶಾಸಕನಾಗಲು ಎಲ್ಲ ಸಮಾಜದವರು ಶ್ರಮಿಸಿದ್ದಾರೆ. ಅದೇ ರೀತಿ ಯಾವುದೇ ತಾರತಮ್ಯ ಮಾಡದೇ ಸರ್ವರ ಪ್ರಗತಿಗೆ ಶ್ರಮಿಸುತ್ತೇನೆ ಎಂದು ಶಾಸಕ ಯಾಸೀರ ಅಹ್ಮದ ಖಾನ ಪಠಾಣ ಭರವಸೆ ನೀಡಿದರು.ಪಟ್ಟಣದ ಶಿಂಪಿಗಲ್ಲಿಯ ಖಂಡೋಬಾ ದೇವಸ್ಥಾನದಲ್ಲಿ ಖಂಡೋಬಾ ದೇವಸ್ಥಾನ ಟ್ರಸ್ಟ್ ಕಮಿಟಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಎಲ್ಲ ಸಮಾಜದವರು ಒಕ್ಕೊರಲಿನಿಂದ ನನ್ನನ್ನು ಶಾಸಕನ್ನಾಗಿ ಮಾಡಿರುವುದು ನನ್ನ ಸೌಭಾಗ್ಯ. ಎಲ್ಲರೂ ವಿವಿಧ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಸಹಿತ ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ನಾನು ಯಾವುದೇ ಸಮಾಜಕ್ಕೆ ಸೀಮಿತಗೊಳ್ಳದೆ ಮಾನವಕುಲ ಒಂದೇ ಎಂದು ಅರಿತು ಸರ್ವರ ಅಭಿವೃದ್ಧಿಗೆ ಪಣ ತೊಡುವುದಾಗಿ ತಿಳಿಸಿದರು.ಗ್ರಾಮದೇವಿ ದೇವಸ್ಥಾನಕ್ಕೆ ₹50 ಲಕ್ಷ, ವೀರಭದ್ರೇಶ್ವರ ದೇವಸ್ಥಾನಕ್ಕೆ ₹25 ಲಕ್ಷ, ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ₹50 ಲಕ್ಷ, ಖಂಡೋಬಾ ದೇವಸ್ಥಾನಕ್ಕೆ ₹50 ಲಕ್ಷ ಅನುದಾನವನ್ನು ನೀಡಿದೇನೆ ಎಂದರು.ಸಾನ್ನಿಧ್ಯವನ್ನು ವೇ.ಮೂ. ಗಂಗಾಧರಯ್ಯ ಸಾಲಿಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಅಲ್ಲಾವುದೀನ ಮನಿಯಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಸುಭಾಸ ಮಜ್ಜಗಿ, ಪುರಸಭೆ ಸದಸ್ಯರಾದ ಪೀರಹಮ್ಮದ ಗವಾರಿ, ಅಜೀಮ ಮಿರ್ಜಾ, ಶಿವಕುಮಾರಸ್ವಾಮಿ, ಅಡವಿಸ್ವಾಮಿಠ, ಖಂಡೋಬಾ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ನಾಗರಾಜ ರಾಶಿನಕರ, ಪದಾಧಿಕಾರಿಗಳಾದ ನಾಮದೇವ ರಾಶಿನಕರ, ಮಧುಕರ ರಾಶಿನಕರ ದೀಪಕ ರಾಶಿನಕರ, ಗುರು ರಾಶಿನಕರ, ಸಂದೀಪ ರಾಶಿನಕರ, ರಾಘವೇಂದ್ರ ರಾಶಿನಕರ, ಗೋಪಾಲರಾವ ರಾಶಿನಕರ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.