ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಗೆ ಅಪ್ಪಾರಾವ ಸೌದಿ, ಅರುಣ ಕದಂ ಆಯ್ಕೆ

KannadaprabhaNewsNetwork |  
Published : Jul 17, 2025, 12:33 AM IST
1. ಅಪ್ಪಾರಾವ ಸೌದಿ | Kannada Prabha

ಸಾರಾಂಶ

Apparao Saudi, Arun Kadam selected for Kalyana Karnataka Journalist Award

-ಶಿಕ್ಷಣ ರಂಗದ ಸಾಧನೆಗಾಗಿ ಬಸವರಾಜ ದಿಗ್ಗಾವಿಗೆ ಪುರಸ್ಕಾರ

-------

ಕನ್ನಡಪ್ರಭ ವಾರ್ತೆ ಸೇಡಂ

ಸೇಡಂ ತಾಲೂಕಿನ ಬೊಮ್ಮನಳ್ಳಿ ಸುದ್ದಿ ಪ್ರತಿಷ್ಠಾನ ವತಿಯಿಂದ ಕೊಡಮಾಡುವ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಗೆ ಇಬ್ಬರು ಪತ್ರಕರ್ತರನ್ನು ಹಾಗೂ ಲಿಂ.ಶಿವಯ್ಯ ಮಠಪತಿ ಅವರ ಸ್ಮರಣಾರ್ಥ ಕೊಡುವ ಪ್ರಶಸ್ತಿಗೆ ಶೈಕ್ಷಣಿಕ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಬೊಮ್ನಳ್ಳಿ ಸುದ್ದಿ ಸಂಪಾದಕ ಸ್ಥಾಪಿಸಿರುವ ಯುವ ಪತ್ರಕರ್ತ ವೀರಭದ್ರ ಮಾಮನಿ ಸ್ಮರಣಾರ್ಥ 16ನೇ ವರ್ಷದ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಗೆ ಕಲಬುರಗಿ ದೃಶ್ಯಮಾಧ್ಯಮ ವರದಿಗಾರ ಅನಿಲ ಕದಂ ಹಾಗೂ ಬೀದರಿನ ಕನ್ನಡಪ್ರಭ ಪತ್ರಕರ್ತ ಅಪ್ಪಾರಾವ ಸೌದಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಿಕ್ಷಣ ತಜ್ಞ ಲಿಂ.ಶಿವಯ್ಯ ಮಠಪತಿ ಅವರ ಸ್ಮರಣಾರ್ಥ ಮೂರನೇ ವರ್ಷದ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಗುರುಕುಲ ವಿದ್ಯಾಪೀಠದ ಬಸವರಾಜ ಡಿಗ್ಗಾವಿ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರತಿಷ್ಠಾನದ ಅಧ್ಯಕ್ಷ ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಖಜಾಂಚಿ ಸಿದ್ದಪ್ಪ ತಳ್ಳಳ್ಳಿ, ಸ್ಥಾಪಕ ಸಂಚಾಲಕ ನಾಗಯ್ಯ ಸ್ವಾಮಿ ಬೊಮ್ನಳ್ಳಿ ಹಾಗೂ ಹಿರಿಯ ಪತ್ರಕರ್ತ ಪ್ರಭಾಕರ ಜೋಶಿ ಅವರು ಆಯ್ಕೆ ಸಮಿತಿಯಲ್ಲಿದ್ದರು.

ಇದೇ ಜುಲೈ 23 ರಂದು ಬೆಳಿಗ್ಗೆ 10.45 ಕ್ಕೆ ಸೇಡಂ ನಗರದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

---

ಫೋಟೋಗಳು

1. ಅಪ್ಪಾರಾವ ಸೌದಿ

2. ಅನಿಲ ಕದಂ

3. ಬಸವರಾಜ ಡಿಗ್ಗಾವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ