ಹುಬ್ಬಳ್ಳಿ:
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಶೇ. 40 ಭ್ರಷ್ಟಾಚಾರ ಮಾಡಿದ್ದರ ಬಗ್ಗೆ ಗುತ್ತಿಗೆದಾರರು ಪ್ರಧಾನಿ ಕಚೇರಿಗೆ ಖುದ್ದು ದೂರು ಸಲ್ಲಿಸಿದಾಗ ಇಡಿ ಎಲ್ಲಿತ್ತು? ಚೆಕ್ ಮೂಲಕ ಲಂಚ ಪಡೆದವರು ಜೈಲಿಗೆ ಹೋಗಿದ್ದು ನೆನಪಿಲ್ಲವೆ? ಬಿಜೆಪಿ ಸರ್ಕಾರ ಶೇ. 40ರಷ್ಟು ಕಮಿಷನ್ ಹಣ ಎಲ್ಲಿ ಹೋಯಿತು? ಕೋವಿಡ್ ಹಗರಣವಾಗಿದ್ದ ವೇಳೆ ಇಡಿ, ಸಿಬಿಐದವರು ಎಲ್ಲಿದ್ದರು? ಎಂದು ಪ್ರಶ್ನಿಸಿದರು.
ಹರಿಶ್ಚಂದ್ರರ ಮೊಮ್ಮಕ್ಕಳಾ?ಸಿಬಿಐದವರು ಒಮ್ಮೆಯಾದರೂ ಬಿಜೆಪಿಯವರ ಮೇಲೆ ಕ್ರಮಕೈಗೊಂಡಿದ್ದಾರೆಯೇ? ಅವರೆಲ್ಲ ಹರಿಶ್ಚಂದ್ರನ ಮೊಮ್ಮಕ್ಕಳಾ, ಯಡಿಯೂರಪ್ಪ ಅವರದೇ ಸರ್ಕಾರ ಅಧಿಕಾರದಲ್ಲಿದ್ದಾಗ ಜೈಲಿಗೆ ಹೋಗಿದ್ದು ನೆನಪಿಲ್ಲವೆ? ಕಮಿಷನ್ ಬಗ್ಗೆ ಗುತ್ತಿಗೆದಾರರು ಪಿಎಂ ಕಚೇರಿಗೆ ನೀಡಿದಾಗ ಕೇಂದ್ರ ಸರ್ಕಾರ ಏಕೆ ತನಿಖೆ ನಡೆಸಲಿಲ್ಲ ಎಂದು ನಲಪಾಡ್ ಪ್ರಶ್ನಿಸಿದರು.
ಇಡಿ, ಸಿಬಿಐಗೆ ಕಾಂಗ್ರೆಸ್ ನವರು ಮಾತ್ರ ಕಾಣುತ್ತಾರೆ. ಇದೀಗ ನಾವು ಯಾವ ಸಿಬಿಐ, ಇಡಿಗೆ ಹೆದರಲ್ಲ. ಧಮ್, ತಾಕತ್ತು ಬಗ್ಗೆ ಮಾತನಾಡುವ ಬಿಜೆಪಿಯವರು ನ್ಯಾಯಯುತವಾಗಿ ಹೋರಾಟ ಮಾಡಲಿ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣ ಬಿಜೆಪಿ ಸರ್ಕಾರದಲ್ಲಿದ್ದಾಗ ಆಗಿರುವುದು ಎಂದರು.
ಬಿಜೆಪಿಯವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಮುಟ್ಟಿದ್ದಕ್ಕೆ ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 66 ಸ್ಥಾನಗಳಿಗೆ ಇಳಿಯಿತು. ಮತ್ತೊಮ್ಮೆ ಏನಾದರೂ ಮುಟ್ಟಿದ್ದೇ ಆದಲ್ಲಿ ರಾಜ್ಯದಲ್ಲಿ ಬಿಜೆಪಿ ಸಂಪೂರ್ಣವಾಗಿ ನಿರ್ಮೂಲನೆಯಾಗಲಿದೆ ಎಂಬುದನ್ನು ಅರಿತುಕೊಳ್ಳಲಿ ಎಂದು ಎಚ್ಚರಿಸಿದರು.