-ಕೃಷಿ ಅಂಕುರ ಸಮಾರೋಪ - ಕೆಲಸ ಅರಸುತ್ತ ನಗರಪಟ್ಟಣಗಳಿಗೆ ವಲಸೆ ಹೋಗದೆ ಆಧುನಿಕ ಕೃಷಿಯಲ್ಲಿ ತೊಡಗಿ ಹೆಚ್ಚು ಲಾಭ ಗಳಿಸಿಕನ್ನಡಪ್ರಭ ವಾರ್ತೆ ಸೂಲಿಬೆಲೆ
ಯುವ ಜನತೆ ಕೇವಲ ಕೈಗಾರಿಕೆ ಮತ್ತು ಸ್ವಯಂ ಉದ್ಯೋಗದ ಧಾವಂತದಲ್ಲಿ ಕೃಷಿ ಕ್ಷೇತ್ರವನ್ನು ಸಂಪೂರ್ಣ ಮರೆತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಕೃಷಿ ತಂತ್ರಜ್ಞರು ಸಂಸ್ಥೆಯ ಅಧ್ಯಕ್ಷೆ ನಂದಿನಿ ಕುಮಾರಿ ಕಳವಳ ವ್ಯಕ್ತಪಡಿಸಿದರು.ಹೋಬಳಿಯ ಬೇಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ಅಂಕುರ ವಾರ್ಷಿಕ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರ ಮಕ್ಕಳು ಕೃಷಿಯಲ್ಲಿ ಅಸಕ್ತಿ ಕಳೆದುಕೊಂಡಿದ್ದಾರೆ. ವಿದ್ಯಾಭ್ಯಾಸದ ನಂತರ ಕೆಲಸಕ್ಕಾಗಿ ನಗರಕ್ಕೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ವಿದ್ಯಾವಂತರು ತಂತ್ರಜ್ಞಾನ ಅಳವಡಿಕೆ ಮೂಲಕ ಕೃಷಿ ಕ್ಷೇತ್ರವನ್ನು ಮುಂಚೂಣಿಗೆ ತರಬೇಕು ಎಂದು ಹೇಳಿದರು.
ಬೇಗೂರು ಪ್ರೌಢಶಾಲೆಯ ೯ನೇ ತರಗತಿ ೬೦ ವಿದ್ಯಾರ್ಥಿಗಳಿಗೆ ಕೃಷಿ ಅಂಕುರ ಕಾರ್ಯಕ್ರಮದಡಿ ಒಂದು ವರ್ಷ ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕೃಷಿ ಸಂಬಂಧಿತ ವಿಷಯ ಬೋಧಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ಮಕ್ಕಳು ವಿಜ್ಞಾನ ವಿಷಯದ ಮೂಲಕ ಕೃಷಿ ಕ್ಷೇತ್ರದತ್ತ ಒಲವು ತೋರವ ಕೆಲಸವಾಗಲಿ ಎಂದು ಆಶಿಸಿದರು.ಜಂಟಿ ಕಾರ್ಯದರ್ಶಿ ಡಾ.ಜಿ.ಕೃಷ್ಣಮೂರ್ತಿ ಮಾತನಾಡಿ, ಕೃಷಿಯ ವಿಷಯಗಳ ಬಗ್ಗೆ ಪ್ರೌಢಶಾಲೆ ಹಂತದಲ್ಲಿ ಆಸಕ್ತಿ ಮೂಡಿಸುವ ವಿಭಿನ್ನ ಪ್ರಯತ್ನ ಮಾಡಲಾಗಿದೆ. ಕೃಷಿ ಚಟುವಟಿಕೆ, ತೋಟಗಾರಿಕೆ, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ, ಸಾವಯವ ಗೊಬ್ಬರ ತಯಾರಿಕೆ, ಮೌಲ್ಯವರ್ಧಿತ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಕೆ ಬಗ್ಗೆ ಮಕ್ಕಳಿಗೆ ಬೋಧಿಸಲಾಗಿದೆ. ಈ ನಿಟ್ಟಿನಲ್ಲಿ ವಾರ್ಷಿಕ ಪರೀಕ್ಷೆ ನಡೆಸಿ ಪ್ರೋತ್ಸಾಹಿಸಿದ್ದು ಸಂಧ್ಯಾ (ಪ್ರಥಮ), ಮಧುಶ್ರೀ (ದ್ತೀಯವಿ), ಕೀರ್ತನಾ (ತೃತೀಯ) ಬಹುಮಾನ ನೀಡಲಾಗಿದೆ ಎಂದು ಹೇಳಿದರು.
ಕೃಷಿ ತಂತ್ರಜ್ಞರ ಸಂಸ್ಥೆ ಕಾರ್ಯದರ್ಶಿ ವಿ.ಕೆ.ಕಮತರ ಮಾತನಾಡಿ, ೧೯೬೮ರಲ್ಲಿ ಪ್ರಾರಂಭವಾದ ನಮ್ಮ ಸಂಸ್ಥೆ ಸುದೀರ್ಘ ೫೬ ವರ್ಷಗಳಿಂದ ಕೃಷಿಗೆ ಪೂರಕವಾದ ಕೆಲಸ ಮಾಡುತ್ತಿದೆ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲಿಯೂ ಕೃಷಿಗೆ ಸಹಕಾರಿಯಾಗುವ ಪಠ್ಯವನ್ನು ಸೇರ್ಪಡೆ ಮಾಡಬೇಕಾಗಿ ಸರ್ಕಾರವನ್ನು ಒತ್ತಾಯಿಸಲಾಗುವುದು. ಇದರಿಂದ ಭವಿಷ್ಯದಲ್ಲಿ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.ಬಿಗ್ ಹ್ಯಾಟ್ ಸಂಸ್ಥೆಯಿಂದ ಸ್ಮಾರ್ಟಕ್ಲಾಸ್ ಅನುಕೂಲಕ್ಕಾಗಿ ೩೦ ಸಾವಿರ ರು. ಚೆಕ್‌ನ್ನು ಸಂಸ್ಥೆಯ ಮುಖ್ಯಸ್ಥ ಸಚಿನ್ ನಂದವಾನ್, ಭಾನುಪ್ರಸಾದ್, ಕೃಷಿ ವಿಚಾರ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರಮಾಣಪತ್ರ ವಿತರಣೆ ಮಾಡಿದರು. ಮುಖ್ಯ ಶಿಕ್ಷಕಿ ಸರಸ್ವತಿ ಕೆ.ಹೆಗಡೆ, ಬೇಗೂರು ಗ್ರಾಮದ ಬಿ.ಎಂ.ನಾರಾಯಣಸ್ವಾಮಿ, ಸಂಸ್ಥೆಯ ಉಪಾಧ್ಯಕ್ಷ ಮಹಂತೇಶಪ್ಪ, ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಎ.ಬಿ.ಪಾಟೀಲ್, ಗ್ರಾಪಂ ಸದಸ್ಯ ಬೈರೇಗೌಡ, ಅಶ್ವಿನಿ ಸುರೇಶ್, ಎಸ್‌ಡಿಎಂಸಿ ಸದಸ್ಯೆ ಸುಮಂಗಲಿ, ಸದಸ್ಯರಾದ ಲೋಕೇಶ್ವರಪ್ಪ, ಡಾ.ಎಂ.ಬೀಮಣ್ಣ, ಡಾ.ರಾಜುಹೆಗ್ಗಳ್ಳಿ, ಹರಿಣಿಕುಮಾರ್, ಬಸವರಾಜ್, ವಿ.ಎಸ್.ಪಾಟೀಲ್, ಪಿಂಜಾರ್, ಶಿಕ್ಷಕರಾದ ಶಿವಕುಮಾರ್, ಸವಿತಾ ಏಣಗಿ ಇತರರಿದ್ದರು.