ರಾಣಿಬೆನ್ನೂರು: ವಿದೇಶಿ ವ್ಯಾಮೋಹ, ಆಧುನಿಕತೆ, ಯಾಂತ್ರಿಕತೆ ಜೀವನ ಸೇರಿದಂತೆ ಬದಲಾಗುತ್ತಿರುವ ಆಹಾರ ಪದ್ಧತಿಗಳಿಂದಾಗಿ ಅನೇಕ ರೋಗಗಳಿಗೆ ತುತ್ತಾಗಿ ಮನುಷ್ಯನ ಆಯಸ್ಸು ಇಂದು ಕಡಿಮೆಯಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಮಂಡಳಿಯ ಸ್ಥಳೀಯ ಅಧ್ಯಕ್ಷ ಡಾ. ಅಭಿನಂದನ್ ಸಾವಕಾರ ಹೇಳಿದರು. ನಗರದ ಎಪಿಎಂಸಿಯ ರೈತ ಭವನದಲ್ಲಿ ರಾಷ್ಟ್ರೀಯ ವೈದ್ಯ ದಿನಾಚರಣೆ ಪ್ರಯುಕ್ತ ಗುರುವಾರ ಭಾರತೀಯ ವೈದ್ಯಕೀಯ ಮಂಡಳಿ, ಎಸ್‌ಎಸ್ ನಾರಾಯಣ ಸೂಪರ್ ಸ್ಪೆಶಾಲಿಟಿ ಸೆಂಟರ್, ವರ್ತಕರ ಸಂಘ, ಎಪಿಎಂಸಿ, ಚೌಡೇಶ್ವರಿ ಹಮಾಲರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತದಲ್ಲಿನ ಬಹುತೇಕ ನಾಗರಿಕರಿಗೆ ಇದೀಗ ಒಂದಿಲ್ಲೊಂದು ರೋಗಗಳ ಲಕ್ಷಣಗಳು ಕಂಡು ಬರುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಪ್ರತಿ 6 ಜನರಿಗೆ ಒಬ್ಬರಂತೆ ಮಧುಮೇಹ, 7 ಜನರಿಗೆ ರಕ್ತದೊತ್ತಡ, 11 ಜನರಿಗೆ ಹೃದಯ ಕಾಯಿಲೆಗಳು ಕಂಡು ಬರುತ್ತಿವೆ ಎಂದು ವೈದ್ಯಕೀಯ ಸಮೀಕ್ಷೆಗಳಿಂದ ತಿಳಿದು ಬಂದಿದೆ ಎಂದರು.ವೈದ್ಯಕೀಯ ಮಂಡಳಿಯ ಕಾರ್ಯದರ್ಶಿ ಡಾ. ಪುಟ್ಟರಾಜ ಮಾತನಾಡಿ, ಮನುಷ್ಯನು ಒತ್ತಡದ ಜೀವನಕ್ಕೆ ಸಿಲುಕಿ ನೆಮ್ಮದಿ, ಸಹನೆ ಹಾಳು ಮಾಡಿಕೊಳ್ಳುತ್ತಿದ್ದು, ಸರಿಯಾದ ಸಮಯಕ್ಕೆ ಊಟ, ಉಪಹಾರ ಮಾಡದೇ ಕೇವಲ ಶ್ರಮಿಕ ಬದುಕಿನಲ್ಲಿ ತೊಡಗಿ ರಕ್ತದೊತ್ತಡ, ಹೃದಯ ತಜ್ಞ ಡಾ. ಗುರುರಾಜ್, ಹುಬ್ಬಳ್ಳಿಯ ಡಾ. ಸಂತೋಷ ಚಿಕ್ಕರಡ್ಡಿ ಸೇರಿದಂತೆ ವೈದ್ಯಕೀಯ ಸಂಘದ 30ಕ್ಕೂ ಅಧಿಕ ನುರಿತ ವೈದ್ಯರುಗಳು ರೋಗಿಗಳ ತಪಾಸಣೆ ಮಾಡಿದರು. 450ಕ್ಕೂ ಅಧಿಕ ಜನರು ತಪಾಸಣೆ ಮಾಡಿಸಿಕೊಂಡರು.ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ಕಾರ್ಯದರ್ಶಿ ಜಿ.ಬಿ. ಜಂಬಗಿ, ಎಪಿಎಂಸಿ ಕಾರ್ಯದರ್ಶಿ ಶೈಲಜಾ, ಶಹರ ಸಿಪಿಐ ಶಂಕರ್ ಎಸ್.ಕೆ., ಭಾರತಿ ಜಂಬಗಿ, ಮಲ್ಲೇಶ್ ಮದ್ಲೇರ ಮತ್ತಿತರರಿದ್ದರು.