ಪರಿಷತ್‌ ಚುನಾವಣೆಯಲ್ಲಿ ಗೆಲವು ಬಿಜೆಪಿ ವಿಜಯೋತ್ಸವ

KannadaprabhaNewsNetwork |  
Published : Oct 30, 2026, 02:30 AM IST
ಹಗರಿಬೊಮ್ಮನಹಳ್ಳಿಯ ಬಸವೇಶ್ವರ ವೃತ್ತದಲ್ಲಿ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ನಿಚ್ಚಳ ಗೆಲುವಿನ ಹಿನ್ನೆಲೆ ಬಿಜೆಪಿಯ ನಗರ ಘಟಕ ಮತ್ತು ಮಂಡಳ ಘಟಕದ ನೇತೃತ್ವದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಬುಧವಾರ ವಿಜಯೋತ್ಸವ ಆಚರಿಸಿದರು. | Kannada Prabha

ಸಾರಾಂಶ

ಮತಪತ್ರಗಳ ಮೂಲಕ ಚುನಾವಣೆ ನಡೆಸಿ ಎಂದು ಆಗ್ರಹಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಪತ್ರಗಳೇ ಉತ್ತರ ನೀಡಿವೆ

ಹಗರಿಬೊಮ್ಮನಹಳ್ಳಿ: ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ನಿಚ್ಚಳ ಗೆಲುವಿನ ಹಿನ್ನೆಲೆ ಬಿಜೆಪಿಯ ನಗರ ಘಟಕ ಮತ್ತು ಮಂಡಳ ಘಟಕದ ನೇತೃತ್ವದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಬುಧವಾರ ಸಂಜೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಹೆಚ್ಚಿನ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಮುಖ್ಯಮಂತ್ರಿ ಕ್ಷೇತ್ರ ವ್ಯಾಪ್ತಿಯ ಕೆಲವು ಜಿಲ್ಲೆಗಳಲ್ಲಿ ಎನ್‌ಡಿಎ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಸುಶಿಕ್ಷಿತ ಮತದಾರರ ಈ ತೀರ್ಪು ಮುಂದಿನ ಗ್ರಾಪಂ, ತಾಪಂ, ಜಿಪಂ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲೂ ಮರುಕಳಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಪರಿಷತ್ ಚುನಾವಣೆಯ ಫಲಿತಾಂಶ ಎನ್.ಡಿ.ಎ.ವಿಜಯ ಜತೆಗೆ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಪ್ರಜ್ಞಾವಂತ ಮತದಾರರ ವ್ಯಕ್ತಪಡಿಸಿರುವ ಆಕ್ರೋಶವೂ ಹೌದು. ಮತಪತ್ರಗಳ ಮೂಲಕ ಚುನಾವಣೆ ನಡೆಸಿ ಎಂದು ಆಗ್ರಹಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಪತ್ರಗಳೇ ಉತ್ತರ ನೀಡಿವೆ ಎಂದು ಜಿಲ್ಲಾ ಉಪಾಧ್ಯಕ್ಷ ಬಲ್ಲಾಹುಣಸಿ ರಾಮಣ್ಣ ಲೇವಡಿ ಮಾಡಿದರು.

ಪರಿಷತ್ ಚುನಾವಣೆಯಲ್ಲಿ ಎನ್.ಡಿ.ಎ.ಅಭ್ಯರ್ಥಿಗಳ ಪರ ಜನಾದೇಶ ಲಭಿಸಿದೆ. ಕಾಂಗ್ರೆಸ್‌ನ ರೈತ ವಿರೋಧಿ ಹಾಗೂ ಜನವಿರೋಧಿ ನೀತಿಗಳಿಗೆ ತಕ್ಕ ಸ್ವಾಗತಾರ್ಹ ಉತ್ತರ ಪ್ರಬುದ್ಧ ಮತದಾರರು ನೀಡಿದ್ದಾರೆ ಎಂದು ಅಹಿಂದ ಮುಖಂಡ ಮುಟುಗನಹಳ್ಳಿ ಕೊಟ್ರೇಶ್ ಅಭಿಪ್ರಾಯಪಟ್ಟರು.

ಇದೇ ವೇಳೆ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಂಡಳ ಘಟಕದ ಅಧ್ಯಕ್ಷ ಬೆಣಕಲ್ ಪ್ರಕಾಶ್, ನಗರ ಘಟಕದ ಅಧ್ಯಕ್ಷ ಮಂಜುನಾಥ್ ಹಿರೇಮಠ್, ಪ್ರಧಾನ ಕಾರ್ಯದರ್ಶಿ ಹನಮಂತಪ್ಪ, ದಿವಾಕರ್, ಪುರಸಭೆ ಸದಸ್ಯರಾದ ನವೀನ್, ಜೋಗಿ ಹನಮಂತಪ್ಪ, ಭದ್ರವಾಡಿ ಚಂದ್ರಶೇಖರ್, ಕಿನ್ನಾಳ್ ಸುಭಾಷ್, ಕನಕಪ್ಪ, ಅಂಬಳಿ ರವೀಂದ್ರಗೌಡ, ಸಾಲ್ಮನಿ ನಾಗರಾಜ್, ಯುವರಾಜ್, ಸಂಪತ ಮೂರ್ತಿ, ಮರಿಯಪ್ಪ ಯಡ್ರಾಮನಹಳ್ಳಿ, ಮಹಿಳಾ ಮೋರ್ಚಾದ ಶಾಂತಕ್ಕ, ಕವಿತಾ ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು