ಶಾಸಕರ ವಿರುದ್ಧ ಅವಹೇಳನ ಕಾರಿ ಪೋಸ್ಟ್‌, ಕ್ರಮಕ್ಕೆ ಬಿಜೆಪಿ ಆಗ್ರಹ

KannadaprabhaNewsNetwork |  
Published : Apr 27, 2026, 02:45 AM IST
ಜಮಖಂಡಿ ನಗರದಲ್ಲಿ ಬಿಜೆಪಿ ಮುಖಂಡರು ಸುದ್ದಿಗಾರರೊಂದಿಗೆ ಮಾತನಾಡಿದರು.  | Kannada Prabha

ಸಾರಾಂಶ

ಶಾಸಕ ಜಗದೀಶ ಗುಡಗುಂಟಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಕಾರಿ ಪೋಸ್ಟ್‌ ಮಾಡಿರುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಶಾಸಕ ಜಗದೀಶ ಗುಡಗುಂಟಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಕಾರಿ ಪೋಸ್ಟ್‌ ಮಾಡಿರುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ ತಿಳಿಸಿದರು. ಶನಿವಾರ ಶಾಸಕರ ಗೃಹ ಕಚೇರಿ ಸಾಕ್ಷಾತ್ಕಾರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಕೆಲ ಮುಖಂಡರು ಹತಾಶರಾಗಿದ್ದು, ಶಾಸಕರ ವಿರುದ್ಧ ಅಪಪ್ರಚಾರ ದಲ್ಲಿ ತೊಡಗಿದ್ದಾರೆ. ಜನಪ್ರತಿನಿಧಿಗಳ ಗೌರಕ್ಕೆ ಧಕ್ಕೆ ತರುವ ಇಂತಹ ಪ್ರಯತ್ನಗಳು ಸಮಾಜಲ್ಲಿ ಅಶಾಂತಿ ಉಂಟು ಮಾಡುವ ಹುನ್ನಾರ ವಾಗಿದೆ. ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಂಡು ಗೌರವ ಹರಣ ದಂತಹ ಅಪರಾಧ ವ್ಯಸಗಿದ್ದು, ಗುರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವದು ಎಂದರು. ಗ್ರಾಮೀಣ ಮಂಡಲ ಅಧ್ಯಕ್ಷ ಮಲ್ಲು ದಾನಗೌಡ ಮಾತನಾಡಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂದು ಹೇಳಿದರು. ಡಿಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಏಗಪ್ಪ ಸವದಿ ಮಾತನಾಡಿ ಬಿಜೆಪಿ ಶಾಸಕರ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವರು 2028ರ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಟಿಕೇಟ್‌ ತಂದು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು. ಬಿಜೆಪಿ ಮುಖಂಡ ಈಶ್ವರ ಅದೆಪ್ಪನವರ, ಗಣೇಶ ಶಿಗಣ್ಣವರ, ಸಂಗು ದಳವಾಯಿ, ಕುಶಾಲ ವಾಗ್ಮೊರೆ, ಯಮನೂರ ಮೂಲಂಗಿ ಶಂಕರ ಕಾಳೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರಿಕೆಟ್ ಪಂದ್ಯಾವಳಿ: ಗೆದ್ದು ಬೀಗಿದ ಆಯುರ್ವೇದ ಕಾಲೇಜು ತಂಡ
ಪರಿಶ್ರಮದಿಂದ ಪ್ರತಿಫಲ ಸಾಧ್ಯ: ಇಒ ಬಡಿಗೇರ