ಕನ್ನಡಪ್ರಭ ವಾರ್ತೆ ಹೊಸಪೇಟೆ
ಕಾಶ್ಮೀರದಲ್ಲಿ ಪಾಕಿಸ್ತಾನದ ನೆರವಿನಿಂದ ಅಮಾಯಕ 26 ಜನ ಭಾರತೀಯ ಪ್ರಜೆಗಳನ್ನು ಕೊಲ್ಲಲಾಗಿದೆ. ಈ ಕುಕೃತ್ಯಕ್ಕೆ ಕಾರಣರಾದವರು ಯಾರೇ ಆಗಿರಲಿ ಪ್ರಧಾನಿ ಮೋದಿ ಅವರು ಮಟ್ಟ ಹಾಕುತ್ತಾರೆ. ದೇಶದ 145 ಕೋಟಿ ಜನರು, ಭಾರತದ ಪ್ರಧಾನಿ ಮೋದಿ ಹಾಗೂ ಸೇನಾ ಪಡೆ ಜೊತೆಗಿದ್ದಾರೆ. ಈಗಾಗಲೇ ಅಕ್ರಮ ಪಾಕಿಸ್ತಾನಿ ವಲಸಿಗರನ್ನು ದೇಶದಿಂದ ಹೋರ ಹಾಕಲಾಗುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ಅಕ್ರಮವಾಗಿ ಪಾಕ್ ಪ್ರಜೆಗಳು ನೆಲೆಸಿದ್ದರೆ, ಅವರನ್ನು ಹುಡುಕಿ ಪಾಕಿಸ್ತಾನಕ್ಕೆ ಕಳುಹಿಸಬೇಕು. ದೇಶದ ಭದ್ರತಾ ದೃಷ್ಟಿಕೋನದಿಂದ ಈ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ, ಉಪಾಧ್ಯಕ್ಷ ಕೃಷ್ಣ ನಾಯಕ, ಪ್ರಧಾನ ಕಾರ್ಯದರ್ಶಿ ಬಲ್ಲಾಹುಣ್ಸಿ ರಾಮಣ್ಣ, ಮುಖಂಡರಾದ ರಾಘವೇಂದ್ರ, ಕಿಚಡಿ ಕೊಟ್ರೇಶ್, ವೀರೇಶ್ವರ ಸ್ವಾಮಿ, ಮಧುಸೂದನ್, ಬಸವರಾಜ್ ಇದ್ದರು.