ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರಿಗೆ, ಕಕ್ಷೀದಾರರಿಗೆ ನೀರಿನ ಅರವಟಿಗೆ ಸ್ಥಾಪನೆ

KannadaprabhaNewsNetwork |  
Published : May 07, 2025, 12:49 AM IST
ಫೋಟೋ- ಕೋಲ್ಡ್‌ ವಾಟರ | Kannada Prabha

ಸಾರಾಂಶ

ವಕೀಲರ ಸಂಘದ ನೇತೃತ್ವದಲ್ಲಿ ಸದಸ್ಯರಾದ ನವೀನ ಜೈನ್‌ (ಸುರಪುರ) ಅವರು ತಮ್ಮ ತಂದೆ ದಿ. ರಮೇಶ ಚಂದ್ರ ಜೈನ್‌ ಸ್ಮರಣಾರ್ಥ, ಕಾರ್ಯನಿರತ ನ್ಯಾಯ ಸೇವೆ ಸಲ್ಲಿಸುವ ಮಿತ್ರರಿಗೆ ಹಾಗೂ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರರಿಗೆ ಬೇಸಿಗೆಯಲ್ಲಿ ಕುಡಿಯಲು ತಂಪಾದ ನೀರು ದೊರಕುವಂತೆ ಅರವಟಿಗೆ ದೇಣಿಗೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ವಕೀಲರ ಸಂಘದ ನೇತೃತ್ವದಲ್ಲಿ ಸದಸ್ಯರಾದ ನವೀನ ಜೈನ್‌ (ಸುರಪುರ) ಅವರು ತಮ್ಮ ತಂದೆ ದಿ. ರಮೇಶ ಚಂದ್ರ ಜೈನ್‌ ಸ್ಮರಣಾರ್ಥ, ಕಾರ್ಯನಿರತ ನ್ಯಾಯ ಸೇವೆ ಸಲ್ಲಿಸುವ ಮಿತ್ರರಿಗೆ ಹಾಗೂ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರರಿಗೆ ಬೇಸಿಗೆಯಲ್ಲಿ ಕುಡಿಯಲು ತಂಪಾದ ನೀರು ದೊರಕುವಂತೆ ಅರವಟಿಗೆ ದೇಣಿಗೆ ನೀಡಿದ್ದಾರೆ.

ಸುಸಜ್ಜಿತವಾಗಿ ಅರವಟಿಗೆ ನಿರ್ಮಿಸಿ, ಅದಕ್ಕೆ 1000 ಲೀಟರ್ ಟ್ಯಾಂಕ್‌ ಮತ್ತು 200 ಲೀಟರ್ ಸಾಮರ್ಥ್ಯ ಉಳ್ಳ ರೆಫ್ರಿಜರೇಟರ್‌ ಅಳವಡಿಸಲಾಗಿದೆ.

ಇಂದು ನಡೆದ ಸರಳ ಸಮಾರಂಭದಲ್ಲಿ ಅರವಟಿಗೆಯನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯದೀಶರಾದ ಜಿ. ಎಲ್. ಲಕ್ಷ್ಮೀನಾರಾಯಣ ಉದ್ಘಾಟಿಸಿ ಮಾತನಾಡುತ್ತ, ಪ್ರಸ್ತುತ ಕಾಲದಲ್ಲಿ ಹೆಚ್ಚು ಹೆಚ್ಚು ವಕೀಲರು ಇಂತಹ ಸಾಮಾಜಿಕ ಸೇವೆಗಳಲ್ಲಿ ತೊಡಗಿರೋದು ನೋಡಿದರೆ ಹೆಮ್ಮೆಯಾಗುತ್ತದೆ ಎಂದರು.

ಜಗತ್ತಿಗೆ ವಚನ ಸಾಹಿತ್ಯ ನೀಡಿದ ಭೂಮಿ ಮತ್ತು ಕಾಯಕ ಹಾಗೂ ದಾಸೋಹ ತತ್ವ ಕೊಡಮಾಡಿದ ನೆಲ, ಸಹಜವಾಗಿ ಪ್ರತಿ ನ್ಯಾಯವಾದಿಯಲ್ಲಿ ಸಾಮಾಜಿಕ ನ್ಯಾಯದ ತುಡಿತ ಇದ್ದೆ ಇದೆ. ತಂದೆ ತಾಯಿಗೆ ಹೆಸರಿನಲ್ಲಿ ದಾನ ಮಾಡಿದ ವಕೀಲರಿಗೆ ಅಭಿನಂದಿಸಿದರು.

ವಕೀಲರ ಸಂಘದ ಅಧ್ಯಕ್ಷ ಗುಪ್ತಲಿಂಗ ಪಾಟೀಲ್‌ ಮಾತನಾಡಿ, ನಮ್ಮ ಅವಧಿಯ ಕೊನೆಯ ದಿನ ಈ ಸತ್ಕಾರ್ಯ ಕೆಲಸ ಮಾಡಿರುವ ನವೀನ್ ಜೈನ್‌ಗೆ ಅಭಿನಂದಿಸಿದರು, ಈ ಕಾರ್ಯ ಇನ್ನಷ್ಟು ವಕೀಲರಿಗೆ ಪ್ರೇರಣೆ ನೀಡಲೆಂದರು.

ಕಾರ್ಯದರ್ಶಿ ಬಸಲಿಂಗ ನಾಸಿ, ಜಂಟಿ ಕಾರ್ಯದರ್ಶಿ ಎಸ್.ಕೆ ಚಿಕ್ಕಳ್ಳಿ, ಖಜಾಂಚಿ ಶಿವರಾಜ ಪಾಟೀಲ ರಾಜಾಪುರ, ಹಿರಿಯ ವಕೀಲರಾದ ಮಲ್ಲಿಕಾರ್ಜುನ ಕೋಟೆ, ಕಾರ್ಯಕ್ರಮದ ವ್ಯವಸ್ಥಾಪಕ ಅಶೋಕ ಚೌಹಾಣ್, ಸಂಚಾಲಕ ಜೇ. ಎಸ್.ವಿನೋದ ಕುಮಾರ, ಆನಂದ ಸೋನಕಾಂಬಳೆ, ಭೂಪೇಂದ್ರ ಸಿಂಗ, ಶೈಲೇಂದ್ರ ಜಮಾದಾರ, ಇತರರು ಉಪಸ್ಥಿತರಿದ್ದರು ಕೊನೆಯಲ್ಲಿ ಶ್ರೇಯನ್ಸ್ ಜೈನ್‌ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮಗುರುಗಳು ನಿಷ್ಪಕ್ಷಪಾತವಾಗಿ ಇರಲಿ: ವಿಮಲ್ ಸಾಗರ್ ಸುರೀಶ್ವರ ಜಿ
ಹೈನುಗಾರಿಕೆಗೆ ಉತ್ತೇಜನ ನೀಡಿ: ಜೋಡಟ್ಟಿ