ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತರ ತುಷ್ಟೀಕರಣ

KannadaprabhaNewsNetwork | Published : Mar 27, 2025 1:04 AM

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಓಲೈಕೆ ಮಿತಿಮೀರಿದೆ. ದಲಿತ ಸಮುದಾಯವನ್ನು ಕಡೆಗಣಿಸಿ ಡಾ. ಬಿ ಆರ್ ಅಂಬೇಡ್ಕರ್ ಬರೆದಂತಹ ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡಲೇ ರಾಜಿನಾಮೆ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶಿರಾ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಓಲೈಕೆ ಮಿತಿಮೀರಿದೆ. ದಲಿತ ಸಮುದಾಯವನ್ನು ಕಡೆಗಣಿಸಿ ಡಾ. ಬಿ ಆರ್ ಅಂಬೇಡ್ಕರ್ ಬರೆದಂತಹ ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡಲೇ ರಾಜಿನಾಮೆ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಒತ್ತಾಯಿಸಿದರು. ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ, ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಹಾಗೂ ರಾಜ್ಯ ಸರಕಾರದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮುಸ್ಲಿಂರಿಗೆ ಕೊಟ್ಟಿರುವ ಮೀಸಲಾತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಸಂವಿಧಾನ ಬದಲಿಸಲು ತಯಾರಾಗಿದ್ದೇವೆ ಎಂಬ ಆತಂಕಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಗರದ ಐಬಿ ಸರ್ಕಲ್ ನಲ್ಲಿ ನಡೆದ ಪ್ರತಿಭಟನೆ ಭಾಗವಹಿಸಿ ಮಾಡಿದರು.

ರಾಜ್ಯ ಸರಕಾರದ ನೀತಿಯನ್ನು ಖಂಡಿಸುತ್ತೇವೆ. ಈ ವರ್ಷದ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಬಹುಪಾಲು ೩ ರಿಂದ ೪ ಸಾವಿರ ಕೋಟಿ ರು ಅನುದಾನ ನೀಡಿರುವುದಲ್ಲದೆ, ಅವರನ್ನು ಓಲೈಸುವ ಮತ ಬ್ಯಾಂಕ್ ರಾಜಕಾರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಎಸ್.ಸಿ, ಎಸ್.ಟಿ ಸಮುದಾಯಕ್ಕೆ ನೀಡಿದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಅವರ ಅಭಿವೃದ್ಧಿಗೆ ಅನ್ಯಾಯವೆಸುಗುತ್ತಿದೆ. ಇದಲ್ಲದೆ ಕಾಡುಗೊಲ್ಲ ಅಭಿವೃದ್ಧಿ ನಿಗಮ, ಒಕ್ಕಲಿಗ, ವೀರಶೈವ, ಬ್ರಾಹ್ಮಣ, ಕುಂಬಾರ ನಿಗಮ ಸೇರಿದಂತೆ ಅನೇಕ ಸಮುದಾಯದ ನಿಗಮಗಳಿಗೆ ಅನುದಾನ ನೀಡದೆ ನಿರ್ಲಕ್ಷ ಮಾಡಿದ್ದಾರೆ. ಜನಸಾಮಾನ್ಯರ ಅಭಿವೃದ್ಧಿಗೆ ಸ್ಪಂದಿಸಬೇಕಾದ ಸರಕಾರ ಹನಿಟ್ರ್ಯಾಪ್‌ ಹಾಗೂ ಓಲೈಕೆ ರಾಜಕಾರಣದಲ್ಲಿ ತಲ್ಲೀನವಾಗಿದೆ. ಆಡಳಿತ ಪಕ್ಷದ ಜನವಿರೋಧಿ ನಿಲುವುಗಳನ್ನು ವಿರೋಧ ಪಕ್ಷವಾಗಿ ಪ್ರಶ್ನಿಸಿ, ಹೋರಾಡುವುದು ಸದಸ್ಯರ ಹಕ್ಕು. ಪ್ರತಿಭಟನೆ ನಡೆಸಿದ ೧೮ ಶಾಸಕರನ್ನು ಸದನದಿಂದ ೬ ತಿಂಗಳು ಅಮಾನತು ಮಾಡುವ ಮೂಲಕ ಸರಕಾರ ಪ್ರಜಾಪ್ರಭುತ್ವದ ಕಗ್ಗೂಲೆ ಮಾಡಿದೆ ಕಾಂಗ್ರೆಸ್ ಸರ್ವಾಧಿಕಾರಿಯಂತೆ ವರ್ತಿಸಿರುವುದು ಖಂಡನೀಯ. ಬಿಜೆಪಿ ಹೋರಾಟ ಮುಂದುವರಿಯಲಿದೆ ಸ್ಪೀಕರ್ ಈ ತೀರ್ಮಾನವನ್ನು ತಕ್ಷಣವೇ ಹಿಂತೆಗೆದುಕೊಳ್ಳಿ ಇಲ್ಲದ್ದಿದ್ದರೆ ರಾಜ್ಯವ್ಯಾಪಿ ಹೋರಾಟ ಎದುರಿಸಬೇಕಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಗಿರಿಧರ್, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಈರಣ್ಣ ಪಟೇಲ್, ನಿಕಟಪೂರ್ವ ಅಧ್ಯಕ್ಷರಾದ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಕೊಟ್ಟ ರಂಗನಾಥ್, ನಟರಾಜ್ ಸಂತೆಪೇಟೆ, ಹಿರಿಯ ಬಿಜೆಪಿ ಮುಖಂಡರಾದ ಬರಗೂರು ಶಿವಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ಡಿ ಎಚ್ ಗೌಡ, ಎಂ ಶಿವಲಿಂಗಯ್ಯ, ಸಿದ್ದಲಿಂಗಪ್ಪ, ಲಕ್ಷ್ಮೀ ನಾರಾಯಣ, ಗೋಪಿಕುಂಟೆ ಕುಮಾರ್ , ಜಿ. ಜೆ ನರಸಿಂಹಮೂರ್ತಿ, ಚಿಕ್ಕನಕೋಟೆ ಕರಿಯಣ್ಣ, ರಂಗಾಪುರ ನಾಗರಾಜ್ ಗೌಡ, ಕೃಷ್ಣೇಗೌಡ, ನಾದೂರ್ ಕುಮಾರ್, ಮೂಗನಹಳ್ಳಿ ರಾಮು, ಮಲ್ಲಿಕಾಪುರ ಮಂಜುನಾಥ್, ರಂಗನಾಥ್, ಯುವ ಮುಖಂಡರಾದ ಹರೀಶ್, ಭಾಸ್ಕರ್, ಸೈಯದ್ ಬಾಬಾ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Share this article