ಹುಲಕೋಟಿ ಗ್ರಾಮದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ

KannadaprabhaNewsNetwork |  
Published : Apr 07, 2026, 02:15 AM IST
ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಬಿಜೆಪಿ 46ನೇ ಸಂಸ್ಥಾಪನ ದಿನವನ್ನು ಪಕ್ಷದ ಮುಖಂಡ ವೆಂಕಟೇಶ ಸೂರಣಗಿ ಅವರ ಮನೆಯ ಮೇಲೆ ಪಕ್ಷದ ಧ್ವಜ ಹಾರಿಸುವ ಮೂಲಕ ಆಚರಿಸಲಾಯಿತು. | Kannada Prabha

ಸಾರಾಂಶ

ಸಂಕಲ್ಪ, ಸೇವೆ ಮತ್ತು ಸಮರ್ಪಣೆಯಿಂದ ಬಿಜೆಪಿಯನ್ನು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಸಿದ ಕೀರ್ತಿ ಪ್ರತಿಯೊಬ್ಬ ಕಾರ್ಯಕರ್ತರಿಗೂ ಸಲ್ಲುತ್ತದೆ.

ಗದಗ: ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಬಿಜೆಪಿ 46ನೇ ಸಂಸ್ಥಾಪನ ದಿನವನ್ನು ಪಕ್ಷದ ಮುಖಂಡ ವೆಂಕಟೇಶ ಸೂರಣಗಿ ಅವರ ಮನೆಯ ಮೇಲೆ ಪಕ್ಷದ ಧ್ವಜ ಹಾರಿಸುವ ಮೂಲಕ ಆಚರಿಸಲಾಯಿತು.ಈ ವೇಳೆ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ಮಾತನಾಡಿ, ಸಂಕಲ್ಪ, ಸೇವೆ ಮತ್ತು ಸಮರ್ಪಣೆಯಿಂದ ಬಿಜೆಪಿಯನ್ನು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಸಿದ ಕೀರ್ತಿ ಪ್ರತಿಯೊಬ್ಬ ಕಾರ್ಯಕರ್ತರಿಗೂ ಸಲ್ಲುತ್ತದೆ. ಪಕ್ಷದ ಪ್ರತಿಯೊಂದು ಹೆಜ್ಜೆಯಲ್ಲೂ ಕಾರ್ಯಕರ್ತರ ತ್ಯಾಗ, ಹಿರಿಯರ ಮಾರ್ಗದರ್ಶನ ಮತ್ತು ಜನರ ವಿಶ್ವಾಸವಿದೆ. ಸ್ಥಾಪನಾ ದಿನದ ಈ ಶುಭ ಸಂದರ್ಭದಲ್ಲಿ, ನಮ್ಮ ಸಂಘಟನೆಯ ಶಕ್ತಿಯನ್ನು ಮತ್ತಷ್ಟು ಬಲಪಡಿಸಿ, ಜನಸೇವೆಗಾಗಿ ನಿಷ್ಠೆಯಿಂದ ಮುಂದುವರಿಯುವ ಸಂಕಲ್ಪ ಮಾಡೋಣ ಎಂದರು.ಈ ವೇಳೆ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಹಿರಿಯ ಮುಖಂಡರಾದ ಎಂ.ಎಸ್. ಕರೀಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಅಶೋಕ ಸಂಕಣ್ಣವರ, ಮಂಜುನಾಥ ಹಳ್ಳೂರಮಠ, ದಾವಲಸಾಬ್ ಅಣ್ಣಿಗೇರಿ, ಮೋಹನ್ ಕೋರಿ, ರಾಜು ಗುಡಸಲಮನಿ, ಡಿ.ಬಿ. ಕರೀಗೌಡ್ರ, ಮಂಜುನಾಥ ಮರಿಯಪ್ಪಗೌಡ್ರ, ಸಿದ್ದಪ್ಪ ಈರಗಾರ, ಮಂಜುನಾಥ ಈರಗಾರ, ಬಸವರಾಜ ಅಕ್ಕಿ, ಮಂಜುನಾಥ ಶಾಂತಗೇರಿ, ವೀರುಪಾಕ್ಷಪ್ಪ ಜಗಲಿ, ಶಂಕರ ಕಾಕಿ, ಅನೀಲ ಅಬ್ಬಿಗೇರಿ, ಶಶಿಧರ ದಿಂಡೂರ, ಸಂತೋಷ ಅಕ್ಕಿ, ರಮೇಶ ಸಜ್ಜಗಾರ, ದೇವೆಂದ್ರಪ್ಪ ಹೂಗಾರ, ರವಿ ಮಾನ್ವಿ, ವಿಶ್ವನಾಥ ಟೆಂಗಿನಕಾಯಿ, ಬಸವರಾಜ ನರೆಗಲ್, ವೀರೇಶಪ್ರಭು ಗದಗಿನ, ವಿನೋದ ಹಂಸನೂರ ಹಾಗೂ ಪ್ರಮುಖರು ಇದ್ದರು.ಜನಗಣತಿ ತರಬೇತಿ ಶಿಬಿರಕ್ಕೆ ಚಾಲನೆ

ಲಕ್ಷ್ಮೇಶ್ವರ: ಪಟ್ಟಣದ ಬಿಸಿಎನ್ ಪಿಯು ಡಿಗ್ರಿ ಕಾಲೇಜಿನಲ್ಲಿ ಸೋಮವಾರದಿಂದ ಮೂರು ದಿನಗಳವರೆಗೆ ಜನಗಣತಿ ತರಬೇತಿ ಶಿಬಿರ ಪ್ರಾರಂಭವಾಯಿತು.ಈ ವೇಳೆ ತಹಸೀಲ್ದಾರ್ ಧನಂಜಯ ಎಂ. ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ಧರ್ಮರ ಮಾತನಾಡಿ, ಜನಗಣತಿಯನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ. ತರಬೇತಿಯಲ್ಲಿ ತಮಗೆ ಮೂಡಿರುವ ಸಮಸ್ಯೆಗಳ ಬಗ್ಗೆ ಎಲ್ಲವನ್ನು ಪರಿಹರಿಸಿಕೊಳ್ಳಬೇಕೆಂದರು.ಈ ಸಂದರ್ಭದಲ್ಲಿ ಗ್ರೇಡ್ -2 ತಹಸೀಲ್ದಾರ್ ಎಂ.ಸಿ. ಅಮಾಸಿ, ಎಂ.ಸಿ. ನದಾಫ್, ಉಗ್ರದ ಬಿ.ಬಿ., ಛಲವಾದಿ, ಎನ್.ಪಿ. ಪ್ಯಾಟಿ, ಪ್ರಶಾಂತ ಸನದಿ, ಕರಾಸ ನೌಕರರ ಸಂಘದ ಅಧ್ಯಕ್ಷ ಗುರುರಾಜ ಹವಳದ, ಶಿರಸ್ತೇದಾರ್ ಜಮೀರ ಮನಿಯಾರ, ಡಿ.ಡಿ. ಲಮಾಣಿ, ಎಂ.ಎಸ್. ಹಿರೇಮಠ, ಎಂ.ಎ. ನದಾಫ್, ಎಸ್.ಬಿ. ಅಣ್ಣಿಗೇರಿ, ನಾಗರಾಜ ಚೋಳಮ್ಮನವರ, ಎಂ.ಎಸ್. ಚಾಕಲಬ್ಬಿ, ಪಿ.ಪಿ. ಹಿರೇಮಠ, ಎಸ್.ಪಿ. ಮುಳಗುಂದ, ಬಿ.ವೈ. ಮಲ್ಲಿಗವಾಡ, ಪಿ.ಬಿ. ನದಾಫ್, ಸುರೇಶ ಹುಡೇದ, ಫಕ್ಕಿರೇಶ ಡಂಬಳ, ಅರುಣಾ ಬೇತೂರಮಠ ಮುಂತಾದ ಗಣತಿದಾರರು ಹಾಗೂ ಮೇಲ್ವಿಚಾರಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐದು ವರ್ಷವಾದರೂ ಮುಗಿಯದ ರಸ್ತೆ ಕಾಮಗಾರಿ
ನಿರ್ಮಾಣ ಕಾಮಗಾರಿಗೆ ಮರಳಿಲ್ಲದೆ ಪರದಾಟ