ಇಂದಿನಿಂದ ಬಿಜೆಪಿ ‘ಸೇವಾ ಸಂಕಲ್ಪ ಅಭಿಯಾನ’: ಸಂಸದ ಬಿ.ವೈ.ರಾಘವೇಂದ್ರ

KannadaprabhaNewsNetwork |  
Published : Sep 17, 2026, 01:30 AM IST
ಪೋಟೊ: 16ಎಸ್‌ಎಂಜಿಕೆಪಿ05ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.  | Kannada Prabha

ಸಾರಾಂಶ

BJP from today: MP B.Y.R.

-ಪ್ರಧಾನಿ ಮೋದಿ ಜನ್ಮದಿನದಂಗ ‘ಆಶೀರ್ವಾದದ ದೀಪ’ ಕಾರ್ಯಕ್ರಮ

-ಅಭಿಯಾನಕ್ಕೆ ಗುರುವಾರ ಅಧಿಕೃತ ಚಾಲನೆ । ಅಕ್ಟೋಬರ್‌ 17 ರವರೆಗೆ ನಡೆವ ಅಭಿಯಾನ

---

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಧಾನಿ ನರೆಂದ್ರ ಮೋದಿ ಅವರ 25 ವರ್ಷಗಳ ಸತತ ಸಾರ್ಥಕ ಜನಸೇವೆ, ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಹಾಗೂ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿ ಒಳಗೊಂಡ ಬಿಜೆಪಿ ಪಕ್ಷದ ‘ಸೇವಾ ಸಂಕಲ್ಪ ಅಭಿಯಾನ’ ಸೆ.17 ರಿಂದ ಅಕ್ಟೋಬರ್‌ 17 ರವರೆಗೆ ನಡೆಯಲಿದೆ. ಗುರುವಾರ ಚಾಲನೆ ನೀಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಕಸಿತ ಭಾರತ-2047ಕ್ಕೆ ಶಕ್ತಿ ಕೋರಿ ಜಿಲ್ಲೆಯ ಎಲ್ಲ 1,886 ಬೂತ್‌ಗಳಲ್ಲೂ ಪ್ರಧಾನಿ ಮೋದಿಯವರ 15 ವರ್ಷಗಳ ಸತತ, ನಿರಂತರ ಜನಪರ ಆಡಳಿತ, ಸಾರ್ಥಕ ಸಾಧನೆಗೆ ಕೃತಜ್ಞತೆಯ ದ್ಯೋತಕವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸೆ. 17 ಪ್ರಧಾನಿ ಮೋದಿಯವರ ಜನ್ಮದಿನವಾಗಿದ್ದು, ಅದನ್ನು “ಆಶೀರ್ವಾದದ ದೀಪ " ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಕ್ಷೇತ್ರದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಸಂಜೆ ಪ್ರತಿಯೊಬ್ಬ ಕಾರ್ಯಕರ್ತರು ಮತ್ತು ನಾಗರಿಕರು ತಮ್ಮ ಮನೆಗಳ ಮುಂದೆ ‘ಆಶೀರ್ವಾದದ ದೀಪ’ ಬೆಳಗುವುದು.

ನಂತರ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು. ಸೆ.18 ರಿಂದ 24 “ನಮೋ ಸೇವಾ ಗಾಥಾ "- ಮಹಿಳಾ ಮೋರ್ಚಾದಿಂದ ಸ್ವಚ್ಛತಾ ಅಭಿಯಾನ, ಪ.ಜಾ.ಪ.ಪಂ. ಮೋರ್ಚಾದಿಂದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಮತ್ತು ನಾಗರಿಕ ಸೇವಾ ಕಾರ್ಯಾಗಾರಗಳು, ಯುವಮೋರ್ಚಾದಿಂದ ಸೈಕಲ್ ಜಾಥಾ ಹಾಗೂ ಸಾಂಸ್ಕೃತಿಕ ಪ್ರಕೋಷ್ಠದಿಂದ ಬೀದಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೆ. 25ರಂದು ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಜಯಂತಿ ಆಚರಣೆ ಮತ್ತು ಅಂತ್ಯೋದಯ ಉಪನ್ಯಾಸ, ಸೆ.27 ರಂದು ಬೂತ್‌ಗಳಲ್ಲಿ "ಮನ್ ಕೀ ಬಾತ್ " ವೀಕ್ಷಣೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ ಮತ್ತು ಉಚಿತ ಉಪಕರಣ ವಿತರಣೆ. ಅ. 2 ರಿಂದ 14ರವರೆಗೆ ಗಾಂಧಿ ಜಯಂತಿ ಹಾಗೂ ಸ್ವದೇಶಿ ಸಂತೆ ಇದ್ದು ಅ.2ರ ಗಾಂಧಿ ಜಯಂತಿಯಂದು ‘ಲೋಕಲ್ ಫಾರ್ ವೋಕಲ್’ ಉತ್ತೇಜನಕ್ಕೆ ಖಾದಿ ಪ್ರದರ್ಶನ ಮತ್ತು "ಸ್ವದೇಶಿ ಸಂತೆ ", ಅ.7 ರಿಂದ 14 ರವರೆಗೆ ಶಾಲಾ ಮಕ್ಕಳಿಗೆ ಚಿತ್ರಕಲಾ ಮತ್ತು ಭಾಷಣ ಸ್ಪರ್ಧೆಗಳು ಏರ್ಪಾಟಾಗಿವೆ ಎಂದು ಮಾಹಿತಿ ನೀಡಿದರು.

ಅ. 17 ರಂದು ಬೃಹತ್ ಮಾನವ ರಂಗೋಲಿ ಮತ್ತು ಸೇವಾ ಜ್ಯೋತಿ ಬೆಳಗಿಸುವ ಮೂಲಕ ಒಂದು ತಿಂಗಳ ಸುದೀರ್ಘ ಅಭಿಯಾನಕ್ಕೆ ಅಧಿಕೃತ ತೆರೆ ಬೀಳಲಿದೆ ಎಂದರು.

ಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಪ ಸದಸ್ಯ ಡಾ.ಧನಂಜಯ ಸರ್ಜಿ, ಪ್ರಮುಖರಾದ ಶಿವರಾಜ್, ಹರಿಕೃಷ್ಣ, ಎಸ್.ಎಸ್.ಜ್ಯೋತಿಪ್ರಕಾಶ್, ಬಳ್ಳೆಕೆರೆ ಸಂತೋಷ್, ಕೆ.ಜಿ.ಕುಮಾರಸ್ವಾಮಿ, ರಾಜೇಶ್ ಕಾಮತ್, ಮಂಜುನಾಥ್ ಮಂಜುನಾಥ ಎನ್. ಚಂದ್ರಶೇಖರ್ ಇದ್ದರು.

.....ಬಾಕ್ಸ್......

ಪ್ರತಿ ಬಾರಿ ಕೇಂದ್ರ ಮಂತ್ರಿ ಮಂಡಳದ ಪುನಾರಚನೆಯಲ್ಲಿ ಶಿವಮೊಗ್ಗಕ್ಕೆ ಪ್ರಾತಿನಿಧ್ಯ ಸಿಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಇದರ ಬಗ್ಗೆ ನನಗೆ ಏನೂ ಮಾಹಿತಿ ಇಲ್ಲ. ಪಕ್ಷದ ಹೈ ಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ನೋಡೋಣ. ನಾನಂತೂ ಆ ಕುರಿತು ಏನೂ ತಯಾರಿ ಮಾಡಿಕೊಂಡಿಲ್ಲ. ಇನ್ನೂ ಅದೇ ಫುಲ್, ಹಾಫ್ ಶರ್ಟ್‌ನಲ್ಲಿಯೇ ಓಡಾಡುತ್ತಿದ್ದೇನೆ. ಆ ಸಂದರ್ಭ ಬರಲಿ ನೋಡೋಣ.

-ಬಿ.ವೈ.ರಾಘವೇಂದ್ರ, ಸಂಸದ.

........ಕೋಟ್‌...............

ಕಸ್ತೂರಿ ರಂಗನ್ ವರದಿ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೆ.19ರಂದು ತೀರ್ಥಹಳ್ಳಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಇದೆ. ಅದು ಸರ್ಕಾರಿ ಕಾರ್ಯಕ್ರಮವಾಗಿದ್ದರಿಂದ ಸ್ವಾಭಾವಿಕವಾಗಿಯೇ ನಮಗೆ ಆಹ್ವಾನ ಇರುತ್ತದೆ. ನಾವೆಲ್ಲರೂ ಹೋಗುತ್ತೇವೆ. ಅಲ್ಲದೆ ಇದರ ಬಗ್ಗೆ ವಿಶೇಷ ಅಧಿವೇಶನವನ್ನೂ ಕರೆದಿದ್ದಾರೆ. ರೈತರ ಪರವಾಗಿ ನಮ್ಮ ಪಕ್ಷ ಸಿಎಂ ಅವರಿಗೆ ಮನವರಿಕೆ ಮಾಡಿಕೊಡುತ್ತದೆ. ಯಾವ ಕಾರಣಕ್ಕೂ ಈ ಭಾಗದ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ.

-ಬಿ.ವೈ.ರಾಘವೇಂದ್ರ, ಸಂಸದ.

---------------------

ಪೋಟೊ: 16ಎಸ್‌ಎಂಜಿಕೆಪಿ05

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಂತಿಯುತವಾಗಿ ಮುಕ್ತಾಯಗೊಂಡ 108 ಗಣಪತಿ ಮೂರ್ತಿಗಳ ಸಾಮೂಹಿಕ ವಿಸರ್ಜನೆ
ಪ್ರಜಾಪ್ರಭುತ್ವಕ್ಕೆ ಶಕ್ತಿ ಕೊಟ್ಟಿದ್ದೇ ಸಂವಿಧಾನ