ನಮ್ಮ ದೇಶ ವಿಶ್ವದಲ್ಲೇ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ಬಂದಿದ್ದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ನೀಡಿದ ಸಂವಿಧಾನವನ್ನು ಅಳವಡಿಸಿಕೊಂಡ ನಂತರ ಸಂವಿಧಾನ ನಮಗೆಲ್ಲರಿಗೂ ಸಮಾನತೆಯನ್ನು ಕೊಟ್ಟಿದೆ. ಅಂಬೇಡ್ಕರ್ ಅವರು ಯಾವುದೇ ವರ್ಗ ಅಥವಾ ಜಾತಿಗೆ ಸೀಮಿತರಾಗದೇ ಅವರ ಸಂವಿಧಾನ ನೀಡಿದ ಅವಕಾಶದಿಂದ ದುರ್ಬಲರು, ಶೋಷಿತರು ಅಧಿಕಾರ ಹಿಡಿಯಲು ಸಾಧ್ಯವಾಯಿತು ಎಂದು ಶಾಸಕ ಎಚ್. ಡಿ. ರೇವಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ನಮ್ಮ ದೇಶ ವಿಶ್ವದಲ್ಲೇ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ಬಂದಿದ್ದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ನೀಡಿದ ಸಂವಿಧಾನವನ್ನು ಅಳವಡಿಸಿಕೊಂಡ ನಂತರ ಸಂವಿಧಾನ ನಮಗೆಲ್ಲರಿಗೂ ಸಮಾನತೆಯನ್ನು ಕೊಟ್ಟಿದೆ. ಅಂಬೇಡ್ಕರ್ ಅವರು ಯಾವುದೇ ವರ್ಗ ಅಥವಾ ಜಾತಿಗೆ ಸೀಮಿತರಾಗದೇ ಅವರ ಸಂವಿಧಾನ ನೀಡಿದ ಅವಕಾಶದಿಂದ ದುರ್ಬಲರು, ಶೋಷಿತರು ಅಧಿಕಾರ ಹಿಡಿಯಲು ಸಾಧ್ಯವಾಯಿತು ಎಂದು ಶಾಸಕ ಎಚ್. ಡಿ. ರೇವಣ್ಣ ತಿಳಿಸಿದರು. ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಆಶಯ ಈಡೇರಬೇಕೆಂದರೆ ಎಲ್ಲರೂ ವಿದ್ಯಾವಂತರಾಗಬೇಕು. ಆದರೆ ಇಂದಿನ ಆಡಳಿತದಲ್ಲಿ ವಿದ್ಯೆ ಕಲಿಯಲು ಒಳ್ಳೆಯ ಅವಕಾಶ ಇಲ್ಲ. ಶಾಲಾ ಕಾಲೇಜುಗಳಲ್ಲಿ ಅಗತ್ಯ ತಕ್ಕಷ್ಟು ಅಧ್ಯಾಪಕರಿಲ್ಲ. ಇಂತಹ ವ್ಯವಸ್ಥೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕನಸು ನನಸಾಗುವುದಿಲ್ಲ. ಆದ್ದರಿಂದ ಸರ್ಕಾರ ಶಾಲಾ ಕಾಲೇಜುಗಳಿಗೆ ಅಗತ್ಯ ಸೌಲಭ್ಯ, ಅಗತ್ಯಕ್ಕೆ ತಕ? ಶಿಕ್ಷಕರು, ಪ್ರಾಧ್ಯಾಪಕರನ್ನು ನೇಮಿಸಬೇಕು ಎಂದು ಸಲಹೆ ನೀಡಿದರು. ಪದವಿಪೂರ್ವ ಸರ್ಕಾರಿ ಮಹಿಳಾ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕಿ ಬಿ.ಎಂ. ವೀಣಾ ಮಾತನಾಡಿ ಸೆಪ್ಟಂಬರ್‌ ೧೫ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಎಂದು ಯುಎನ್‌ಓ ೨೦೦೭ರಲ್ಲಿ ಘೋಷಿಸಿತು. ಪ್ರತಿ ಒಬ್ಬರ ಧ್ವನಿಯೂ ಮುಖ್ಯವಾದಾಗ ಪ್ರಜಾಪ್ರಭುತ್ವ ಯಶಸ್ವಿ ಆಗುತ್ತದೆ ಎನ್ನುವುದು ಈ ದಿನದ ಘೋಷಣೆ. ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಪ್ರತೀ ವ್ಯಕ್ತಿಯ ಅಹವಾಲೂ ಮುಖ್ಯ ಎಂದು ತಿಳಿದು ಪರಿಹರಬೇಕು ಎನ್ನುವುದಾಗಿದೆ. ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎನ್ನುತ್ತಾರೆ. ಈ ದಿನ ಮಹತ್ವವನ್ನು ಸಾರುವ ಸಲುವಾಗಿ ಶಾಲಾ ಕಾಲೇಜುಗಳಲ್ಲಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಸೇರಿದಂತೆ ಕಾರ್ಯಗಾರಗಳನ್ನು ನಡೆಸಲಾಗುತ್ತದೆ ಎಂದರು. ಕ್ರೀಡಾ ಸಂಯೋಜಕ ಸುಜಾತ್‌ ಅಲಿ ಕಾರ್ಯಕ್ರಮ ನಿರೂಪಿಸಿದರು.

ತಹಶೀಲ್ದಾರ್ ವೈ. ಎಂ. ರೇಣುಕುಮಾರ್, ಪ್ರಾಂಶುಪಾಲ ಗುರುಮೂರ್ತಿ, ಬಿಇಒ ಸೋಮಲಿಂಗೇಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಬಿ.ಬೈರಯ್ಯ, ಪರ್ತಕರ್ತ ಎಚ್.ವಿ.ಸುರೇಶ್ ಕುಮಾರ್, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜ್ ಇತರರು ಭಾಗವಹಿಸಿದ್ದರು.

===ಫೋಟೋ==16ಎಚ್ಎಸ್ಎನ್17 : ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಶಾಸಕ ಎಚ್. ಡಿ. ರೇವಣ್ಣ ಉದ್ಘಾಟಿಸಿದರು.