ಪ್ರತಿ ಕುಟುಂಬಕ್ಕೂ ಶುದ್ದ ನೀರು ಕೊಟ್ಟಿರುವ ಹೆಮ್ಮೆ ಬಿಜೆಪಿ ಸರ್ಕಾರಕ್ಕಿದೆ

KannadaprabhaNewsNetwork |  
Published : May 01, 2024, 01:17 AM IST
ಮುಂಡರಗಿ ಪಟ್ಟಣದ ರಾಮೇನಹಳ್ಳಿ ಹಾಗೂ ವಿವೇಕಾನಂದ ನಗರದಲ್ಲಿ ಹಾವೇರಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಾಯಿತು. | Kannada Prabha

ಸಾರಾಂಶ

ಬೊಮ್ಮಾಯಿಯವರ ಕಮಲದ ಗುರುತಿಗೆ ಮತ ನೀಡಿ ಆರಿಸಿ ತರಬೇಕು

ಮುಂಡರಗಿ: ದೇಶದ ಜನರ ಆರೋಗ್ಯದ ದೃಷ್ಠಿಯಿಂದ ಹಳ್ಳಿಯಿಂದ ದಿಲ್ಲಿಯವರೆಗೆ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕೂ ಶುದ್ಧ ನೀರು ಕೊಟ್ಟಿರುವ ಹೆಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಬಿಜೆಪಿ ಯುವ ಮುಖಂಡ ವೀರಣ್ಣ ತುಪ್ಪದ ಹೇಳಿದರು.

ಅವರು ಮಂಗಳವಾರ ಬೆಳಗ್ಗೆ 23 ಹಾಗೂ 17ನೇ ವಾರ್ಡ್‌ನ ರಾಮೇನಹಳ್ಳಿ ಹಾಗೂ ವಿವೇಕಾನಂದ ನಗರದಲ್ಲಿ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದರು.

ನರೇಂದ್ರ ಮೋದಿ ಸರ್ಕಾರ ಜಲ್ ಜೀವನ್ ಮಷೀನ್ ಯೋಜನೆಯಲ್ಲಿ ದೇಶದ 11.88 ಕೋಟಿ ಕುಟುಂಬಗಳಿಗೆ ಮನೆ ಬಾಗಿಲಿಗೆ ಶುದ್ಧ ನೀರನ್ನು ಕೊಟ್ಟಿದೆ. ಕೈಗೆಟುಕುವ ದರದಲ್ಲಿ ಔಷಧಿ ಲಭ್ಯತೆಗಾಗಿ ದೇಶಾದ್ಯಂತ 11 ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರ ತೆರೆಯಲಾಗಿದೆ.ಸಾವಿರಾರು ಕೋಟಿ ವೆಚ್ಚದಲ್ಲಿ ಪ್ರತಿ ದಿನ 23 ಕಿಮೀ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ಎಲ್ಲ ಅಭಿವೃದ್ಧಿಗಳಿಂದ ಭಾರತ ವಿಶ್ವದಲ್ಲಿಯೇ ಪ್ರಕಾಶಿಸುತ್ತಿದೆ. ಹೀಗಾಗಿ ಬಸವರಾಜ ಬೊಮ್ಮಾಯಿಯವರನ್ನು ಆಯ್ಕೆ ಮಾಡಿದರೆ ಹಾವೇರಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾಗುತ್ತವೆ.ಆದ್ದರಿಂದ ಎಲ್ಲರೂ ಬೊಮ್ಮಾಯಿಯವರ ಕಮಲದ ಗುರುತಿಗೆ ಮತ ನೀಡಿ ಆರಿಸಿ ತರಬೇಕು ಎಂದರು.

ಪುರಸಭೆ ಸದಸ್ಯ ತಿಮ್ಮಪ್ಪ ದಂಡಿನ ಮಾತನಾಡಿ, 2024ರ ಈ ಲೋಕಸಭಾ ಚುನಾವಣೆ ನಮ್ಮ ದೇಶದ ಭವಿಷ್ಯ ರೂಪಿಸುವ ಮಹತ್ವದ ಚುನಾವಣೆ. 10 ವರ್ಷದ ಹಿಂದೆ ದೇಶದ ಸ್ಥಿತಿಗತಿ ಏನಾಗಿತ್ತು. ಇಂದು ಏನಾಗಿದೆ. ಭದ್ರತೆ, ಸುರಕ್ಷತೆ, ಜನಸಾಮಾನ್ಯರ ದಿನನಿತ್ಯದ ಬದುಕಿನಲ್ಲಾಗಿರುವ ಬದಲಾವಣೆಗಳನ್ನು ನಾವೆಲ್ಲರೂ ಕಾಣಬಹುದಾಗಿದೆ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲರೂ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ಆನಂದಗೌಡ ಪಾಟೀಲ, ಎಸ್.ವಿ. ಪಾಟೀಲ, ಕೊಟ್ರೇಶ ಅಂಗಡಿ, ರಜನೀಕಾಂತ ದೇಸಾಯಿ, ಪ್ರಶಾಂತ ಗುಡದಪ್ಪನವರ, ಆರ್.ಎಂ. ತಪ್ಪಡಿ, ಗುರುರಾಜ ಜೋಶಿ, ನಾಗೇಶ ಹುಬ್ಬಳ್ಳಿ, ಜ್ಯೋತಿ ಹಾನಗಲ್, ವಿರೇಶ ಸಜ್ಜನರ, ದೇವು ಹಡಪದ, ಅಶೋಕ ಅಂಗಡಿ, ಶಂಕರಗೌಡ ಪಾಟೀಲ, ಬಿ.ಕೆ. ಪಾಟೀಲ, ವೀರೇಂದ್ರ ಅಂಗಡಿ, ಶಂಕರ ಉಳ್ಳಾಗಡ್ಡಿ, ರವೀಗೌಡ ಪಾಟೀಲ, ಪ್ರಕಾಶ ಅಬ್ಬೀಗೇರಿ, ರಂಗಪ್ಪ ಕೋಳಿ, ಯಲ್ಲಪ್ಪ ತ್ಯಾಪಿ, ದೇವಪ್ಪ ಇಟಗಿ, ನಾಗರಾಜ ಮುರುಡಿ, ಮಂಜುನಾಥ ದೊಡ್ಡಮನಿ, ಧ್ರುವಕುಮಾರ ಹೂಗಾರ, ಸುರೇಶ ಬಂಡಿವಡ್ಡರ, ಯಲ್ಲಪ್ಪ ಗಣಾಚಾರಿ, ಮಂಜು ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌