ಕುಂದಗೋಳ:
ಅವರು ಪಟ್ಟಣದ ಮರಾಠಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಯಾವತ್ತೂ ರಾಷ್ಟ್ರದ ಪ್ರಗತಿ ಜತೆ-ಜತೆಗೆ ದೇಶವಾಸಿಗಳ ಏಳಿಗೆಯನ್ನೂ ಗಮನದಲ್ಲಿಟ್ಟುಕೊಂಡು ಆಡಳಿತಾತ್ಮಕವಾಗಿ ಹೆಜ್ಜೆ ಹಾಕುತ್ತಿದೆ. ರಾಷ್ಟ್ರೀಯ ಹಿತ ಚಿಂತನೆಯೊಂದಿಗೆ ಭಾರತವನ್ನು ಮುನ್ನಡೆಸುತ್ತಿದೆ. ಇದರ ಫಲವಾಗಿ ಬಿಜೆಪಿ ಇಂದು ವಿಶ್ವದಲ್ಲೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದರು.ಭಾರತವನ್ನು ವಿಶ್ವಗುರು ಸ್ಥಾನಕ್ಕೇರಿಸುವ ಧ್ಯೇಯದೊಂದಿಗೆ ಬಿಜೆಪಿ ದಾಪುಗಾಲು ಹಾಕುತ್ತಿದೆ. ಈ ಮಹತ್ತರ ಕಾರ್ಯದಲ್ಲಿ ಯುವ ಸಮುದಾಯ, ಸರ್ವರೂ ಭಾಗಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭಿಸಿದೆ ಎಂದರು.
ಬಿಜೆಪಿ ಸದಸ್ಯತ್ವ ಅಭಿಯಾನ ಸೆ. 2ರಿಂದ ಆರಂಭಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದು ರಾಷ್ಟ್ರೀಯತೆ, ಏಕತೆಯನ್ನು ಬೆಂಬಲಿಸಿ ಎಂದು ಜೋಶಿ ಕರೆ ನೀಡಿದರು.
ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸಂಚಾಲಕ ಲಿಂಗರಾಜ ಪಾಟೀಲ, ಜಿಲ್ಲಾ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕು ಅಧ್ಯಕ್ಷ ರವಿಗೌಡ ಪಾಟೀಲ, ಹುಬ್ಬಳ್ಳಿ ಮಂಡಳದ ಅಧ್ಯಕ್ಷ ಉಮೇಶ ಕುಸುಗಲ್ ಮಾತನಾಡಿದರು. ಈ ವೇಳೆ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಮಾಲತೇಶ ಶ್ಯಾಗೋಟಿ, ಈರಣ್ಣ ಜಡಿ, ಎನ್.ಎನ್. ಪಾಟೀಲ, ಭರಮಪ್ಪ ಮುಗಳಿ, ಡಿ.ವೈ. ಲಕ್ಕನಗೌಡ, ಮಾಲತೇಶ ಶಾಗೋಟಿ, ಮಲ್ಲಿಕಾರ್ಜುನ ಸವದತ್ತಿ, ಎಂ.ಎಂ. ಕುಂದಗೋಳ, ಪ್ರಕಾಶಗೌಡ ಪಾಟೀಲ, ಯಶವಂತಗೌಡ ಪಾಟೀಲ, ನಾಗರಾಜ ದೇಶಪಾಂಡೆ ಸೇರಿದಂತೆ ಹಲವರಿದ್ದರು.