ಮುಡಾ ಪ್ರಕರಣದಲ್ಲಿ ಬಿಜೆಪಿ, ಜೆಡಿಎಸ್‌ ಒಳಸಂಚು ಆರೋಪ: ಮೌನ ಪ್ರತಿಭಟನೆ

KannadaprabhaNewsNetwork |  
Published : Sep 27, 2024, 01:17 AM IST
ಚಿತ್ರ 26ಬಿಡಿಆರ್50 | Kannada Prabha

ಸಾರಾಂಶ

BJP, JDS conspiracy allegations in Muda case: Silent protest

-ಜಿಲ್ಲಾ ಶೋಷಿತ ಸಮುದಾಯಗಳ ಒಕ್ಕೂಟದಿಂದ ಹೋರಾಟ

ಕನ್ನಡಪ್ರಭ ವಾರ್ತೆ ಬೀದರ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಒಳಸಂಚು ನಡೆಸಿವೆ ಎಂದು ಆರೋಪಿಸಿ ಜಿಲ್ಲಾ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಬೀದರ ನಗರದ ಅಂಬೇಡ್ಕರ ವೃತ್ತದ ಎದುರು ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಧರಣಿ ನಡೆಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ನಡೆಯುತ್ತಿರುವ ಷಡ್ಯಂತ್ರ ಮತ್ತು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸುತ್ತಿರುವುದಾಗಿ ಹೋರಾಟಗಾರರು ತಿಳಿಸಿದರು.

ಒಕ್ಕೂಟದ ಪ್ರಮುಖರಾದ ಅಮೃತರಾವ ಚಿಮಕೋಡ, ಅನೀಲಕುಮಾರ ಬೆಲ್ದಾರ್, ನಗರ ಸಭೆ ಅಧ್ಯಕ್ಷ ಮೊಹ್ಮದ ಗೌಸ್, ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ದೊಡ್ಡಿ, ಧನರಾಜ ಹಂಗರಗಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಶಂಕರ ದೊಡ್ಡಿ, ರಮೇಶ ಡಾಕುಳಗಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪರವೇಜ ಕಮಾಲ್, ಬೀದರ್ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ, ಕಾಂಗ್ರೆಸ್ ಮುಖಂಡರಾದ ಕರೀಮ ಸಾಬ, ಎಂ.ಎ ಸಮಿ, ಮೊಹ್ಮದ ರಿಯಾಜ, ರವೀಂದ್ರ, ರಾಕೇಶ, ಇರ್ಷಾದ ಪೈಲವಾನ್, ಅಮರ ಸಾಗರ, ನರಸಪ್ಪಾ ಯಾಕತಪೂರ, ತುಕಾರಾಮ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಪೂಜಾ ಜಾರ್ಜ, ಸಂಗೀತಾ ಕಾರಬಾರಿ, ತೇಜಮ್ಮಾ, ಲಕ್ಷ್ಮೀ ಸುನೀಲ ಬಚ್ಚನ್, ದಿನೇಶ್‌ ಪವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಒಂದು ಗಂಟೆಗೂ ಹೆಚ್ಚಿನ ಸಮಯ ಮೌನ ಪ್ರತಿಭಟನೆ ನಡೆಸಿದರು.

ಮುಂದೆಯು ಸಹ ರಾಜ್ಯದ ಕೋಟಿ ಕೋಟಿ ಅಹಿಂದ ಜನ ಸಿದ್ದರಾಮಯ್ಯನವರ ಜೊತೆ ಕೈಜೋಡಿಸಿ ಅವರೇ ಈ ರಾಜ್ಯದ ಸಂಪೂರ್ಣ ಅವಧಿಗೆ ಮುಖ್ಯಮಂತ್ರಿ ಆಗಬೇಕೆಂದು ಒತ್ತಾಯಿಸಿದರು.

-----

ಚಿತ್ರ 26ಬಿಡಿಆರ್50

ಬೀದರ್‌ನಲ್ಲಿ ಜಿಲ್ಲಾ ಶೋಷಿತ ಸಮುದಾಯಗಳ ಒಕ್ಕೂಟದಿಂದ ಮೌನ ಪ್ರತಿಭಟನೆ ನಡೆಸಲಾಯಿತು.

--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌